ಚೀನಾ ಉತ್ಪನ್ನಗಳ ಖರೀದಿ ವಿರುದ್ಧ ತಿಂಗಳುಗಳ ಪ್ರತಿಭಟನೆಯ ನಂತರ, ಭಾರತದ ಆನ್‌ಲೈನ್ ಹಬ್ಬದ ಸೆಲ್ ಗಳು ಆಗಸ್ಟ್ 6 ರಿಂದ ಶುರುವಾಗಿವೆ . ಈ ಸೆಲ್ ಗಳಲ್ಲಿ ಚೀನಾದ ಸ್ಮಾರ್ಟ್‌ಫೋನ್ ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ .

ಭಾರತದ ಎರಡು ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್ ಗಳಲ್ಲಿ Redmi ಹೆಚ್ಚು ಬೇಡಿಕೆಯ ಬ್ರಾಂಡ್ ಆಗಿತ್ತು. ಜೊತೆಗೆ ಚೈನಾ ಮೂಲದ BBK ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್‌ನ ಒಡೆತನದ ಬ್ರ್ಯಾಂಡ್‌ಗಳಾದ Realme, Oppo, Vivo, Oneplus ಮತ್ತು iqoo ಸಹ ಹೆಚ್ಚಿನ ಮಾರಾಟ ಕಂಡಿವೆ .

ಈಗ ಒಂದು ತಿಂಗಳಿನಿಂದ ಭಾರತದಲ್ಲಿ ಚೀನಾ ವಿರೋಧಿ ಭಾವನೆ ಹೆಚ್ಚುತ್ತಿದೆ. ಕರೋನವೈರಸ್ ನಿಂದ ಆಗಿ ಚೀನಾವನ್ನು ಕೆಲವರು ದೂಷಿಸುತ್ತಾರೆ , ಇತರರು ಜೂನ್ ಮಧ್ಯದಲ್ಲಿ ಗಾಲ್ವಾನ್ ಕಣಿವೆಯ ಚೀನಾ ಮಾಡಿದ ದಾಳಿಯಿಂದ ಹೆಚ್ಚಿನ ಜನರು ಚೀನಾವನ್ನು ದ್ವೇಷಿಸುತ್ತಿದ್ದಾರೆ . ಹಾಗಾಗಿ ಚೀನೀ ಕಂಪೆನಿಗಳು ತಯಾರಿಸಿದ ಫೋನ್‌ಗಳು ಮತ್ತು ಆಟಿಕೆಗಳನ್ನು ಭಾರತೀಯರು ಒಡೆದುಹಾಕಿದ್ದರು ಮತ್ತು ಒಪ್ಪೋ, ವಿವೊದಂತಹ ಬ್ರಾಂಡ್‌ಗಳ ಅಂಗಡಿ ಮುಂಭಾಗಗಳನ್ನು ಸಹ ಧ್ವಂಸಗೊಳಿಸಿದ್ದರು. #BoycottChina ಸಹ ಹೆಚ್ಚಿನ ಸದ್ದು ಮಾಡಿತ್ತು , ಭಾರತ ಸರ್ಕಾರವು ಜೂನ್ 29 ರಿಂದು 59 ಚೀನೀ ಅಪ್ಲಿಕೇಶನ್‌ಗಳನ್ನು ಬ್ಯಾನ್ ಮಾಡಿತ್ತು .

ಎಲ್ಲಾ ಕೋಲಾಹಲಗಳ ಹೊರತಾಗಿಯೂ, ಚೀನಾದ ಸ್ಮಾರ್ಟ್ಫೋನ್ ಮಾರಾಟವು ಸ್ಥಿರವಾಗಿದೆ. ಜೂನ್ 18 ರಂದು ಭಾರತದಲ್ಲಿ ಬಿಡುಗಡೆಯಾದ Oneplus 8pro ಕೆಲವೇ ನಿಮಿಷಗಳಲ್ಲಿ ಮಾರಾಟವಾಯಿತು . ಚೀನೀ ಬ್ರ್ಯಾಂಡ್‌ಗಳಿಲ್ಲದ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಊಹಿಸಲು ಅಸಾದ್ಯವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ .

ಬೇರೆ ಆಯ್ಕೆಗಳಿಲ್ಲ !

ರಾಷ್ಟ್ರೀಯತಾವಾದಿ ಭಾವನೆ ಹೆಚ್ಚಿದ್ದು ಸಹ  ಭಾರತೀಯ ಬ್ರ್ಯಾಂಡ್‌ಗಳ ಬೇಡಿಕೆ ಕಡಿಮೆ ಇದೆ. ಒಂದು ಕಾಲದಲ್ಲಿ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮುಂದಿದ್ದ LAVA ತೀವ್ರ ಸ್ಪರ್ಧೆಯ ನಡುವೆಯೂ ಹಿಂದುಳಿದಿದ್ದಾರೆ. ಏತನ್ಮಧ್ಯೆ, ನೋಯ್ಡಾ ಮೂಲದ I Call ಕಳೆದ ವರ್ಷ ಫೆಬ್ರವರಿಯಲ್ಲಿ ವಿವಾದವೊಂದಕ್ಕೆ ಸಿಕ್ಕಿತು,ಅವರ ಫೋನ್ ಒಂದೊಂದು ಸ್ಫೋಟಗೊಂಡಿದೆ ಎಂದು ವರದಿಯಾಗಿತ್ತು,ಇದರಿಂದ ಇದಕ್ಕೂ ಬೇಡಿಕೆ ಕಡಿಮೆಯಾಗಿದೆ .

ದಕ್ಷಿಣ ಕೊರಿಯಾದ ಫೋನ್ ತಯಾರಕ ಸ್ಯಾಮ್‌ಸಂಗ್ ಬಹುಶಃ ಈ ಓಟದಲ್ಲಿ ಚೀನೀಯರಲ್ಲದ ಏಕೈಕ ಸ್ಪರ್ಧಿ. ಚೀನಾದಲ್ಲದ ಫೋನ್‌ಗಳನ್ನು ಖರೀದಿಸಲು ಭಾರತೀಯರು ಹೆಚ್ಚು ಗಮನಹರಿಸಿದ್ದರಿಂದ ಇದು ಕಳೆದ ತ್ರೈಮಾಸಿಕದಲ್ಲಿ ಸ್ವಲ್ಪ ಬೇಡಿಕೆ ಗಳಿಸಿದೆ ಎಂದು ತಜ್ಞರು ಹೇಳುತ್ತಾರೆ.

“ಸ್ಥಳೀಯ ಉತ್ಪಾದನೆ, R&D ಕಾರ್ಯಾಚರಣೆಗಳು, ಆಕರ್ಷಕ ಕೊಡುಗೆಗಳ ಮೂಲಕ ಚೀನೀ ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ಬಲವಾಗಿವೆ  ಗ್ರಾಹಕರಿಗೆ ಆಯ್ಕೆ ಮಾಡಲು ಕೆಲವೇ ಆಯ್ಕೆಗಳನ್ನು ನೀಡುತ್ತಿವೆ” ಎಂದು ಕೌಂಟರ್‌ಪಾಯಿಂಟ್‌ನ ಸಂಶೋಧನಾ ವಿಶ್ಲೇಷಕ ಜೈನ್ ಹೇಳಿದ್ದಾರೆ.

ಭಾರತದ ಮೂರನೇ ಎರಡರಷ್ಟು ಜನರು ರೂ.15,000ಗಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ಖರೀದಿಸುತ್ತಾರೆ, ಮತ್ತು ಚೀನೀ ಬ್ರ್ಯಾಂಡ್‌ಗಳು ಈ ವಿಭಾಗದಲ್ಲಿ ಪ್ರಾಬಲ್ಯ ಹೊಂದಿವೆ.
ನೀವು ಐಫೋನ್ ಖರೀದಿಸಿದರೂ ಸಹ, ಹೆಚ್ಚಿನವು ಚೀನಾದಿಂದ ಬರುತ್ತವೆ. ಮಾರುಕಟ್ಟೆಯಲ್ಲಿ ಸಾಕಷ್ಟು ಚೀನಾದ ಮೇಲೆ ಅವಲಂಬನೆಗಳಿವೆ ಎಂದು ಕೌಂಟರ್ಪಾಯಿಂಟ್ ರಿಸರ್ಚ್‌ನ ಹಿರಿಯ ವಿಶ್ಲೇಷಕ ತರುಣ್ ಪಾಠಕ್ ಹೇಳಿದ್ದಾರೆ.

ಭಾರತದಲ್ಲಿ ಈಗ ಮೊಬೈಲ್ ತಯಾರಿಕ ಘಟಕಗಳ ಸಂಖ್ಯೆ ಹೇಚ್ಚುತ್ತಿದೆ ಯಾದರೂ ಬಹಳಷ್ಟು ಚೈನಾ ಮೂಲದ ಕಂಪನಿಗಳದ್ದೆ , Samsungನ ಜಗತ್ತಿನ ಅತಿ ದೊಡ್ಡ ಮೊಬೈಲ್ ತಯಾರಿಕ ಘಟಕ ಭಾರತದಲ್ಲಿ ಇದೇಯಾದರೂ ಸ್ಯಾಮ್‌ಸಂಗ್‌ ಪೊನ್ ಗಳ ಬೆಲೆ ಮಾರುಕಟ್ಟೆಯಲ್ಲಿ ಅಷ್ಟೊಂದು ಆಕರ್ಷಕವಾಗಿಲ್ಲ .
ಈಗೀಗ ಭಾರತದಲ್ಲಿ iPhoneಗಳ ತಯಾರಿಕೆ ಶುರುವಾಗಿದೆ ಯಾದರೂ ಅವುಗಳ ಬೆಲೆ ಎನೂ ಕಡಿಮೆಯಾಗಿಲ್ಲ . ಈ ಎಲ್ಲಾ ಕಾರಣಗಳಿಂದ ಸದ್ಯ ಚೈನಾ ಮೊಬೈಲ್ ಬೇಡಿಕೆ ಹೆಚ್ಚಿದೆ ಎನ್ನಬಹುದು.