ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಯಿಂದ ಅನ್ನಭಾಗ್ಯ ಅಕ್ಕಿ ಕದಿಮರಿಗೆ ಬಿತ್ತು ಕತ್ತರಿ

gbnews kannada

ಗದಗ- ಗದಗ ಜಿಲ್ಲೆಯ ಮುಂಡರಗಿ ಸಮೀಪದ ಕೊರ್ಲಳ್ಳಿ ಮತ್ತು ಗಂಗಾಪುರ ಮಾರ್ಗವಾಗಿ ಸಂಚರಿಸುವ KA 35-B-4606 ಬುಲೆರೋ ವಾಹನದಲ್ಲಿ ಸರ್ಕಾರದಿಂದ ಉಚಿತವಾಗಿ ದೊರೆಯುವ ಅಕ್ಕಿಯನ್ನು ಸಂಗ್ರಹಿಸಿ ಸಾಗಿಸುವ ಮಾಹಿತಿಯು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ನಾಯಕ್ ಅವರಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ವಾಹನವನ್ನು ತಡೆದು ವಿಚಾರಿಸಿದಾಗ ಸುಮಾರು 40 ರಿಂದ 50 ಚೀಲ ಅಕ್ಕಿ ಬುಲೆರೋ ವಾಹನದಲ್ಲಿ ಸಾಗಿಸುತ್ತಿರುವುದು ಕಂಡು ಬಂತು ಎಂದು ಪ್ರಶಾಂತ್ ನಾಯಕ್ ಅವರು ತಿಳಿಸಿದ್ದಾರೆ.

ಕೂಡಲೇ ಗದಗ್ ಜಿಲ್ಲೆಯ ವರಿಷ್ಠಾಧಿಕಾರಿಗೆ ಮಾಹಿತಿ ತಿಳಿಸುತ್ತಿದ್ದಂತೆ 30 ನಿಮಿಷದಲ್ಲಿ ಮುಂಡರಗಿ ಸಿಪಿಐ ಸುಧೀರ್ ಅವರು ಸ್ಥಳಕ್ಕೆ ಆಗಮಿಸಿದ್ದಾರೆ ಚಾಲಕ ಮತ್ತು ವಾಹನವನ್ನು ವಶಕ್ಕೆ ಪಡೆದು ಎಫ್ಐಆರ್ ದಾಖಲಿಸಿದ್ದಾರೆ ಕ್ರೈಂ ನಂಬರ್ 93/20 ಆಗಿದ್ದು ಜಪ್ತಿ ಮಾಡಿದ ಅಕ್ಕಿಯನ್ನು ಆಹಾರ ಇಲಾಖೆಯ ಅಧಿಕಾರಿಯಾದ ಶಿವರಾಜ್ ಅವರ ನೇತೃತ್ವದಲ್ಲಿ ಅವರ ಕಬ್ಜಾಗೆ ನೀಡಿರುತ್ತಾರೆ.

ವಿಷಯ ತಿಳಿಯುತ್ತಿದ್ದಂತೆ ಇನ್ನುಳಿದ ದಂಧೆಕೋರರ ಮೈಯಲ್ಲಿ ನಡುಕ ಉಂಟಾಗಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ ನಂತರ ಜಿಬಿ ನ್ಯೂಸ್ ನೊಂದಿಗೆ ಮಾತನಾಡಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ನಾಯಕ್ ಅವರು ನಾವು ಬಲವಾದ ಮಾಹಿತಿಯೊಂದಿಗೆ ಹೋಗಿದ್ದೆವು ನಮಗೆ ಅವರು ದುಡ್ಡಿನ ಆಮಿಷವೊಡ್ಡಿ ಪಾರಾಗಲು ಪ್ರಯತ್ನಿಸಿದರು ಇದಕ್ಕೆ ನಾವು ಬಗ್ಗಲಿಲ್ಲ ಈ ವ್ಯವಸ್ಥೆ ಕರ್ನಾಟಕ ರಾಜ್ಯಾದ್ಯಂತ ಇದ್ದು ಸರ್ಕಾರ ಇದಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಕೀಲರಾದ ಸೋಮಣ್ಣ ಕಲಿಕೇರಿ ಪದಾಧಿಕಾರಿಗಳಾದ ಮೈಲಪ್ಪ ಮತ್ತು ಶಂಕರ್ ಹಾಗೂ ಕುಷ್ಟಗಿ ತಾಲೂಕ ಅಧ್ಯಕ್ಷರಾದ ವಿರುಪಾಕ್ಷಿ ನಾಯಕ್ ಮತ್ತು ಶರಣಪ್ಪ ಮತ್ತಿತರರು ಇದ್ದರು

=6

follow me

Leave a Reply

Your email address will not be published.

error: Content is protected !!
×