ಕರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವುದು ಸಂತಸಕರ

ಬೆಂಗಳೂರು: ಕೊರೊನಾದ ಭೀತಿಯ ನಡುವೆ ರಾಜ್ಯದ ಜನರಿಗೆ ಒಂದು ಗುಡ್‌ ನ್ಯೂಸ್ ಸಿಕ್ಕಿದ್ದು, ಭಯದಲ್ಲೆ ಬದುಕುತ್ತಿದ್ದ ಜನರಿಗೆ ಕೊಂಚ ನಿರಾಳತೆ ಸಿಕ್ಕಿದೆ.

ರಾಜ್ಯದಲ್ಲಿ ಕೊರೊನಾ ತನ್ನ ಕ್ರೂರತೆ ಮೆರೆಯುತ್ತಿದ್ದು ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಲೆ ಇದೆ. ಆದರೆ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಜುಲೈ 16 ಕ್ಕೇ ಶೇ. 17.77 ಇದ್ದ ಸೋಂಕಿನ ಪಾಸಿಟಿವ್ ರೇಟ್ ಜುಲೈ 20ರ ವೇಳೆಗೆ ಶೇ. 10 ಕ್ಕೆ ಇಳಿಕೆ ಕಂಡಿದೆ. ಕೇವಲ ಐದು ದಿನಗಳಲ್ಲಿ ಶೇ.17.77 ಇದ್ದಂತಹ ಪಾಸಿಟಿವ್ ದರ ಶೇ. 10 ಕ್ಕೆ ಇಳಿಕೆ ಕಂಡಿದ್ದು, ಇಳಿಕೆಯ ದಿನಾವಾರು ವರದಿ ಇಂತಿದೆ.

1) ಜುಲೈ 16ರಂದು 23451 ಸ್ಯಾಂಪಲ್ಸ್ ಗಳ ಪರೀಕ್ಷೆ ನೆಡೆದಿದ್ದು, ಅದರಲ್ಲಿ 4169 ಪಾಸಿಟಿವ್ ಕೇಸ್ ಪತ್ತೆಯಾಗಿದೆ, ಸೋಂಕಿನ‌ ದರ ಶೇ. 17.77 ರಷ್ಟಿತ್ತು.
2) ಜುಲೈ 17 ರಂದು 24700 ಸ್ಯಾಂಪಲ್ಸ್ ಗಳ ಪರೀಕ್ಷೆ ನೆಡೆದಿದ್ದು, ಅದರಲ್ಲಿ 3693 ಪಾಸಿಟಿವ್ ಕೇಸ್ ಪತ್ತೆಯಾಗಿದೆ, ಸೋಂಕಿನ‌ ದರ ಶೇ. 14.95.
3) ಜುಲೈ 18 ರಂದು 34819 ಸ್ಯಾಂಪಲ್ಸ್ ಗಳ ಪರೀಕ್ಷೆ ನೆಡೆದಿದ್ದು, ಅದರಲ್ಲಿ 5435 ಪಾಸಿಟಿವ್ ಕೇಸ್ ಪತ್ತೆಯಾಗಿದೆ, ಸೋಂಕಿನ‌ ದರ ಶೇ. 13.02.
4) ಜುಲೈ 19 ರಂದು 35834 ಸ್ಯಾಂಪಲ್ಸ್ ಗಳ ಪರೀಕ್ಷೆ ನೆಡೆದಿದ್ದು, ಅದರಲ್ಲಿ 4120 ಪಾಸಿಟಿವ್ ಕೇಸ್ ಪತ್ತೆಯಾಗಿದೆ, ಸೋಂಕಿನ ಶೇ.ದರ 11.49.
5) ಜುಲೈ 20 ರಂದು 36473 ಸ್ಯಾಂಪಲ್ಸ್ ಗಳ ಪರೀಕ್ಷೆ ನೆಡೆದಿದ್ದು, ಅದರಲ್ಲಿ 3648ಪಾಸಿಟಿವ್ ಕೇಸ್ ಪತ್ತೆಯಾಗಿದೆ, ಸೋಂಕಿನ ಶೇ.ದರ 10.00.

ಹೀಗೆ ಕೇವಲ ಐದು ದಿನಗಳಲ್ಲಿ ಶೇ. 17.77 ಇದ್ದಂತಹ ಪಾಸಿಟಿವ್ ದರ ಶೇ. 10 ಕ್ಕೆ ಇಳಿಕೆ ಕಂಡಿದೆ.

ಇನ್ನು, ಸೋಂಕು ಇಳಿಕೆಗೆ ಕಾರಣ ಏನು ಅಂದ್ರೆ..
1) ಕಳೆದ ಐದು ದಿನಗಳಿಂದ ಕೊರೊನಾ ಟೆಸ್ಟ್​​ಗಳನ್ನು ಹೆಚ್ಚು ಹೆಚ್ಚು ಮಾಡಲಾಗಿದೆ.
2) ಸಮುದಾಯಕ್ಕೆ ಹಬ್ಬಿದೆಯಾ? ಅನ್ನೋದನ್ನ ಕಂಡುಹಿಡಿಯಲು ರ್ಯಾಂಡಮ್ ಟೆಸ್ಟ್ ಮಾಡಲಾಗ್ತಿದೆ.
3) ಐದು ದಿನಗಳಲ್ಲಿ ಇಳಿಕೆ ಕಂಡಿರೋದಿಂದ ಸಮುದಾಯಕ್ಕೆ ಸೋಂಕು ಹಬ್ಬಿಲ್ಲ‌ ಅನ್ನೋ ನಿರ್ಧಾರಕ್ಕೆ ಆರೋಗ್ಯಾಧಿಕಾರಿಗಳು ಬಂದಿದ್ದಾರೆ.

=13

follow me

Leave a Reply

Your email address will not be published.

error: Content is protected !!
×