ಗಂಗಾವತಿ ಲಾಕ್ ಡೌನ್ ಇಲ್ಲ; ಸಿಎಂ ಆದೇಶ ಹಿನ್ನೆಲೆ

ಗಂಗಾವತಿ : ಜಿಲ್ಲೆಯ ಕೆಲ ಪಟ್ಟಣ ಮತ್ತು ನಗರ ಪ್ರದೇಶ ಕೊರೊನಾ ಹಾಟ್ ಸ್ಪಾಟ್ ಗಳಾಗುತ್ತಿವೆ ಎಂಬ ಕಾರಣಕ್ಕೆ ಹತ್ತು ದಿನಗಳ ಕಾಲ ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ಕೈಗೊಂಡಿದ್ದ ನಿರ್ಧಾರ ಈಗ ಕ್ಯಾನ್ಸಲ್ ಆಗಿದ್ದು, ಎಂದಿನಂತೆ ಸಹಜ ಚಟುವಟಿಕೆ ನಡೆಯಲಿದೆ.

ಜಿಲ್ಲೆಯಲ್ಲಿ ಲಾಕ್ಡೌನ್ ಮಾಡಲು ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿಕೊಂಡಿತ್ತು. ಆದರೆ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ತುರ್ತು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಲಾಕ್ ಡೌನ್ ಇಲ್ಲ ಎಂದು ಘೋಷಣೆ ಮಾಡಿದ್ದಾರೆ.

ಸಿಎಂ ಆದೇಶದ ಹಿನ್ನೆಲೆ ಜಿಲ್ಲೆಯಲ್ಲಿನ ಲಾಕ್ಡೌನ್ ನಿರ್ಧಾರದಿಂದ ಹಿಂದೆ ಸರಿದಿರುವ ಜಿಲ್ಲಾಡಳಿತ ಈ ಬಗ್ಗೆ ಇನ್ನು ಅಧಿಕೃತ ನಿರ್ಧಾರ ಪ್ರಕಟಿಸಬೇಕಿದೆ. ಇದನ್ನು ಸ್ವತಹ ಜಿಲ್ಲಾಧಿಕಾರಿ ಸುರಾಳ್ಕರ್ ವಿಕಾಸ್ ಕಿಶೋರ್, ಸರ್ಕಾರದ ಆದೇಶವನ್ನು ಪಾಲನೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

=3

follow me

2 Replies to “ಗಂಗಾವತಿ ಲಾಕ್ ಡೌನ್ ಇಲ್ಲ; ಸಿಎಂ ಆದೇಶ ಹಿನ್ನೆಲೆ”

  1. ಇದು ಜಿಬಿ ನ್ಯೂಸೋ ಪ್ರಜಾಪರ್ವದ ನ್ಯೂಸೋ?

  2. ಜಿಬಿ ನ್ಯೂಸ್ ನೋಡಿ ಪ್ರಜಾ ಪರ್ವ ಪತ್ರಿಕೆಯವರು ಪ್ರಕಟಣೆಯನ್ನು ಬೆಟ್ಟು ಅವರು ಕೂಡ ವೆಬ್ ಪೋರ್ಟಲ್ ಮಾಡಿಕೊಂಡಿದ್ದಾರೆ

Leave a Reply

Your email address will not be published.

error: Content is protected !!
×