ಕೊಪ್ಪಳದಲ್ಲಿ ಮುಂದುವರಿದ ಕರೋನ ಅಟ್ಟಹಾಸ ಇಂದು ಒಂದೇ ದಿನ 6 ಜನರಿಗೆ ಸೋಂಕು ದೃಢ

ಕೊಪ್ಪಳ: ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದು.ಎರಡು ದಿನಗಳ ಹಿಂದೆ ಸೋಂಕಿತ ಮಹಿಳೆಯನ್ನು ಬಲಿ ಪಡೆದ ಸೋಂಕು. ಇಂದು ಮತ್ತೇ ಆರು ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಜೂನ್ 16 ರಂದು ಆಂಧ್ರಪ್ರದೇಶದ ವಿಜಯವಾಡದಿಂದ ಗಂಗಾವತಿ ತಾಲೂಕಿನ ಶ್ರೀರಾಮನಗರಕ್ಕೆ ಬಂದಿದ್ದ 45 ವರ್ಷದ ವ್ಯಕ್ತಿ , 40 ವರ್ಷದ ಮಹಿಳೆ ಮತ್ತು 17 ವರ್ಷದ ಯುವತಿಗೆ ಕೊರೋನಾ ದೃಢ ಪಟ್ಟಿದೆ.


ಮತ್ತು ಬಳ್ಳಾರಿ ಜಿಲ್ಲೆಯ ಮಲಪನಗುಡಿಯಿಂದ ಹುಲಗಿಗೆ ಜೂನ್ 14 ರಂದು ಆಗಮಿಸಿದ್ದ ಹುಲಗಿಯ 65 ವರ್ಷದ ವ್ಯಕ್ತಿಗೆ , ಜೂನ್ 12 ರಂದು ಜಿಂದಾಲ್‌ನಿಂದ ಬಂದಿದ್ದ ಹೊಸಲಿಂಗಾಪುರದಲ್ಲಿ 38 ವರ್ಷದ ವ್ಯಕ್ತಿಗೆ ಹಾಗೂ ಜೂನ್ 16 ರಂದು ಬೆಂಗಳೂರಿನಿಂದ ಬಂದಿದ್ದ ಕುಕನೂರಿನ ಕಕ್ಕಿಹಾಳದಲ್ಲಿ 14 ವರ್ಷದ ಬಾಲಕನಿಗೆ ಕೊರೋನಾ ಬಂದಿದೆ.ಇಂದು ಪತ್ತೆಯಾಗಿರುವ ಆರು ಜನ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಜಿಲ್ಲಾಡಳಿತ ಪತ್ತೆ ಮಾಡುತ್ತಿದೆ ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

=16

follow me

2 Replies to “ಕೊಪ್ಪಳದಲ್ಲಿ ಮುಂದುವರಿದ ಕರೋನ ಅಟ್ಟಹಾಸ ಇಂದು ಒಂದೇ ದಿನ 6 ಜನರಿಗೆ ಸೋಂಕು ದೃಢ”

  1. ಜನ ಎಚ್ಚರಿಕೆಯಿಂದ ಸಾಮಾಜಿಕ ಅಂತರ ಕಾಪಾಡಿ ಕೊಂಡು.ಕಡ್ಡಾಯವಾಗಿ ಮಾಸ್ಕ ಧರಿಸುವದನ್ನು ರೂಢಿಸಿಕೊಳ್ಳಬೇಕು.

  2. ಕರೋನ ರೋಗಕ್ಕೆ ಔಷಧಿ ಕಂಡು ಹಿಡಿಯುವ ವರೆಗೆ ಮಾಸ್ಕ್ ಧರಿಸುವುದು ಜೀವನದ ಅವಿಭಾಜ್ಯ ಅಂಗವಾಗ ಬೇಕು.

Leave a Reply

Your email address will not be published.

error: Content is protected !!
×