ಈ ಚೀನೀ ಆ್ಯಪ್ ಗಳಿಂದ ದೂರವಿರಿ

ನವದೆಹಲಿ, ಜೂನ್ 17: ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷದ ಪರಿಣಾಮ ಈಗ ಉಭಯ ದೇಶಗಳ ನಡುವಿನ ವಾಣಿಜ್ಯ,ವ್ಯವಹಾರ ಸಮರಕ್ಕೆ ನಾಂದಿ ಹಾಡಿದೆ. ಚೀನಾ ದೇಶ ಮೂಲದ ಅನೇಕ ಸ್ಮಾರ್ಟ್ ಫೋನ್ ಹಾಗೂ ಮೊಬೈಲ್ ಅಪ್ಲಿಕೇಷನ್ ಗಳನ್ನು ನಿಷೇಧಿಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದೆ. ಈ ನಡುವೆ ಭದ್ರತಾ ದೃಷ್ಟಿಯಿಂದ ಚೀನಾ ಮೂಲದ ಕೆಲವು ಅಪ್ಲಿಕೇಷನ್ ನಿಂದ ದೂರಯಿರಿ ಎಂದು ಗುಪ್ತಚರ ಇಲಾಖೆ ಸೂಚನೆ ನೀಡಿದೆ.

ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆಗಳ ನಡುವೆ ತಾರಕಕ್ಕೇರಿ ಮಾರಕವಾಗಿ ಪರಿಣಮಿಸಿದೆ. ಈ ಸಂಘರ್ಷದಲ್ಲಿ 20 ಭಾರತೀಯ ಯೋಧರು, 43 ಮಂದಿ ಚೀನಾ ಯೋಧರು ಮೃತಪಟ್ಟಿದ್ದಾರೆ. ಈ ನಡುವೆ ಚೀನಾ ಹಾಗೂ ಭಾರತ ನಡುವಿನ ಆರ್ಥಿಕ ವ್ಯವಹಾರ, ಆಮದು ರಫ್ತು ಸ್ಥಿತಿ ಏನಾಗುವುದೋ ಗೊತ್ತಿಲ್ಲ. ಆದರೆ, ಇಲ್ಲಿ ನೀಡಿರುವ ಚೀನಿ ಆಪ್ ಬಳಸಿದರೆ ನಿಮ್ಮ ಖಾಸಗಿ ಮಾಹಿತಿ, ಸುರಕ್ಷತೆ, ಭದ್ರತೆಗೆ ಖಂಡಿತ ಒಂದಲ್ಲ ಒಂದು ರೀತಿಯಲ್ಲಿ ಅಪಾಯ ಒದಗುತ್ತದೆ ಎಂದು ಭಾರತೀಯ ಇಂಟೆಲಿಜೆನ್ಸ್ ಏಜೆನ್ಸಿ ಎಚ್ಚರಿಸಿದೆ.

ಈ ಪಟ್ಟಿಯಲ್ಲಿ ಬಹು ಜನಪ್ರಿಯ ಆಪ್ ಗಳಾದ ಟಿಕ್ ಟಾಕ್, ಜೂಮ್, ಶೇರ್ ಇಟ್, ಯುಸಿ ಬ್ರೌಸರ್, ಕ್ಸೆಂಡರ್ ಹಾಗೂ ಕ್ಲೀನ್ ಮಾಸ್ಟರ್ ಕೂಡಾ ಇವೆ. ಈ ಆಪ್ ಗಳಲ್ಲಿ ಸ್ಪೈವೇರ್ ತುಂಬಿ ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಬಗ್ಗೆ ಏಜೆನ್ಸಿ ಹೇಳಿದೆ. ಏಪ್ರಿಲ್ ತಿಂಗಳಿನಲ್ಲಿ ಜೂಮ್ ವಿಡಿಯೋ ಕಾನ್ಫರೆನ್ಸ್ ಆಪ್ ಭದ್ರತೆ ಬಗ್ಗೆ ಅಪಸ್ವರ ಕೇಳಿ ಬಂದಾಗ, ಈ ಕುರಿತಂತೆ ಗೃಹ ಸಚಿವಾಲಯವು ಮಾರ್ಗಸೂಚಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಮಿಕ್ಕಂತೆ ಯಾವೆಲ್ಲ ಆಪ್ ಗಳು ಪಟ್ಟಿಯಲ್ಲಿವೆ ನೋಡಿ..

TikTok, Vault-Hide, Vigo Video, Bigo Live, Weibo, WeChat, SHAREit, UC News, UC Browser, BeautyPlus, QQ Mail, QQ NewsFeed, WeSync, SelfieCity, Clash of Kings, Mail Master, Mi Video call-Xiaomi, Parallel Space, Photo Wonder, APUS Browser, VivaVideo- QU Video Inc, Perfect Corp, CM Browser, Virus Cleaner (Hi Security Lab), Mi Community, DU recorder, YouCam Makeup, Mi Store, 360 Security, DU Battery Saver, DU Browser, DU Cleaner, DU Privacy, Clean Master – Cheetah, QQ International, QQ Launcher, QQ Security Centre, QQ Player, QQ Music, CacheClear DU apps studio, Baidu Translate, Baidu Map, Wonder Camera, ES File Explorer, Xender, ClubFactory, Helo, LIKE, Kwai, ROMWE, SHEIN, NewsDog.

ಓದುಗರು ಗೂಗಲ್ ಪ್ಲೇ ಸ್ಟೋರ್ ಅಥವಾ ಇತರೆ ಆಪ್ ಮಾರುಕಟ್ಟೆಗಳಲ್ಲಿ ಹುಡುಕಲು ಸುಲಭವಾಗಲೆಂದು ಆಪ್ ಗಳ ಹೆಸರನ್ನು ಇಂಗ್ಲೀಷ್ ನಲ್ಲೇ ನೀಡಲಾಗಿದೆ.

=27

follow me

Leave a Reply

Your email address will not be published.

error: Content is protected !!
×