Fact Check: ಜೂ.15 ರಿಂದ ಮತ್ತೆ ಕಂಪ್ಲೀಟ್‌ ಲಾಕ್ಡೌನ್‌?

ಭಾರತದಲ್ಲಿ ಕೊರೋನಾ ವೈರಸ್‌ ಭೀತಿ ಆರಂಭವಾದ ಬಳಿಕ ಮಾರ್ಚ್ 24ರಂದು ದೇಶಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿತ್ತು. ಅದಾದ ಎರಡು ತಿಂಗಳ ಬಳಿಕ ಹಂತ ಹಂತವಾಗಿ ಲಾಕ್‌ಡೌನ್‌ ಸಡಿಲಿಸಿ, ಸದ್ಯ ಕಂಟೇನ್ಮೆಂಟ್‌ ವಲಯಗಳಲ್ಲಿ ಮಾತ್ರ ಲಾಕ್‌ಡೌನ್‌ ಇದೆ.

ಆದರೆ ಲಾಕ್‌ಡೌನ್‌ ಸಡಿಲಿಸಿದ ಬಳಿಕ ಭಾರತದಲ್ಲಿ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೂನ್‌ 15 ರಿಂದ ದೇಶಾದ್ಯಂತ ಮತ್ತೊಮ್ಮೆ ಸಂಪೂರ್ಣ ಲಾಕ್‌ಡೌನ್‌ ಮಾಡಲಾಗುತ್ತದೆ.

ಸ್ವತಃ ಕೇಂದ್ರ ಗೃಹ ಸಚಿವಾಲಯವೇ ಈ ಸುಳಿವನ್ನು ನೀಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಜೀ ನ್ಯೂಸ್‌ ಹೆಸರಿನಲ್ಲಿ ಬ್ರೇಕಿಂಗ್‌ ನ್ಯೂಸ್‌ ಸ್ಕ್ರೀನ್‌ಶಾಟ್‌ವೊಂದನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ.

ಆದರೆ ಈ ಸುದ್ದಿ ನಿಜವೇ ಎಂದು ‌ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ, ಜೀ ನ್ಯೂಸ್‌ ಹೆಸರಿನಲ್ಲಿ ನಕಲಿ ಗ್ರಾಫಿಕ್‌ ಸೃಷ್ಟಿಸಿ ಹೀಗೆ ಹೇಳಲಾಗುತ್ತಿದೆ ಎಂದು ತಿಳಿದುಬಂದಿದೆ.

ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗಲೂ ಈ ಕುರಿತು ಯಾವುದೇ ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿದ್ದು ಲಭ್ಯವಾಗಿಲ್ಲ, ಜೀ ನ್ಯೂಸ್‌ ವರದಿ ಕೂಡ ಲಭ್ಯವಾಗಿಲ್ಲ. ಅಲ್ಲದೆ ಜೀ ನ್ಯೂಸ್‌ ಈ ಬಗ್ಗೆ ಸ್ಪಷ್ಟೀಕರಣ ನೀಡಿ, ‘ಜೂ.15ರಿಂದ ಮತ್ತೆ ಸಂಪೂರ್ಣ ಲಾಕ್‌ಡೌನ್‌ ಎಂದು ಜೀ ನ್ಯೂಸ್‌ ವರದಿ ಮಾಡಿಲ್ಲ. ಜೀ ನ್ಯೂಸ್‌ ಹೆಸರಿನಲ್ಲಿ ಹರಿದಾಡುತ್ತಿರುವ ಬ್ರೇಕಿಂಗ್‌ ನ್ಯೂಸ್‌ ಗ್ರಾಫಿಕ್‌ ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿರುವಂಥದ್ದು’ ಎಂದು ಹೇಳಿದೆ.

– ವೈರಲ್ ಚೆಕ್

=10

follow me

Leave a Reply

Your email address will not be published.

error: Content is protected !!
×