5G ಎಂದರೇನು? 5G ತಂತ್ರಜ್ಞಾನವು ಭಾರತಕ್ಕೆ ಯಾವಾಗ ಬರುತ್ತದೆ?

ವಿಕ್ರಮ್ ಬಿ:  ತಂತ್ರಜ್ಞಾನ ಮಾಹಿತಿದಾರರು 

5G ಎಂದರೇನು?

5G ಎಂಬುದು ಮೊಬೈಲ್ ನೆಟ್ವರ್ಕ ನ 5ನೇ ಜನರೇಷನ್ ಜಗತ್ತಿನ ವಯರ್ಲೆಸ್ ಸ್ಟ್ಯಾಂಡರ್ಡ್ ಗಳಾದ 1G, 2G, 3G ಮತ್ತು 4G ನಂತರದ ಹೊಸ ತಂತ್ರಜ್ಞಾನದ 5G ಇದು ಹೊಸ ರೀತಿಯ ನೆಟ್ವರ್ಕ್ ಆಗಿದ್ದು ಇದರಿಂದ ಕೇವಲ ಮೊಬೈಲ್ ನೆಟ್ವರ್ಕ್ ಮಾತ್ರವಲ್ಲದೆ ಇತರೆ ತಂತ್ರಜ್ಞಾನ ಸಾಧನಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ಜನರನ್ನು ಸಂಪರ್ಕಿಸುವ ಒಂದು ವಿಶಿಷ್ಟ ರೀತಿಯ ತಂತ್ರಜ್ಞಾನ.

5G ವಯರ್ಲೆಸ್ ತಂತ್ರಜ್ಞಾನವು 4G ಗಿಂತ ಗರಿಷ್ಠ ಇಂಟರ್ನೆಟ್ ವೇಗವನ್ನು ಹೊಂದಿದ್ದು ಹೆಚ್ಚು ವಿಶ್ವಾಸಾರ್ಹತೆ, ಬೃಹತ್ ನೆಟ್ವರ್ಕ್ ಸಾಮರ್ಥ್ಯ ಮತ್ತು ಬಳಕೆದಾರರಿಗೆ ಏಕರೂಪದ ಬಳಕೆಯ ಅನುಭವವನ್ನು ತಲುಪಿಸುವ ಉದ್ದೇಶವನ್ನು ಹೊಂದಿದೆ ಜೊತೆಗೆ ಹೆಚ್ಚಿನ ಕಾರ್ಯಕ್ಷಮತೆ ಮತ್ತು ಸುಧಾರಿತ ದಕ್ಷತೆಯು ಹೊಸ ಬಳಕೆದಾರ ಅನುಭವವನ್ನು ಸಶಕ್ತಗೊಳಿಸುತ್ತದೆ.

5G ವೇಗ ಎಷ್ಟು?

5G ತಂತ್ರಜ್ಞಾನವು ಸೆಕೆಂಡಿಗೆ 10 ಗಿಗಾಬೈಟ್ ಅಂದರೆ 10Gbps ವೇಗವನ್ನು ಹೊಂದಿದೆ ಇದು ಫೋರ್ಜಿ ತಂತ್ರಜ್ಞಾನಕ್ಕಿಂತ ಹತ್ತುಪಟ್ಟು ಹೆಚ್ಚು ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ.

5G ಎಷ್ಟು ವೇಗವಾಗಿ ಕಾರ್ಯನಿರ್ವಹಿಸಲು ಕಾರಣ ಕಡಿಮೆ ಫ್ರೀಕ್ವೆನ್ಸಿ (30GHz ನಿಂದ 300GHz) ಮತ್ತು ದೊಡ್ಡಗಾತ್ರದ ಬ್ಯಾಂಡವಿಡ್ತ. ಇನ್ನೂ 5G ತಂತ್ರಜ್ಞಾನದಲ್ಲಿ ಲೇಟೆನ್ಸಿ ದರ ( ಮಾಹಿತಿಯನ್ನು ಕಳಿಸುವ ಮತ್ತು ಸ್ವೀಕರಿಸುವ ನಡುವಿನ ವಿಳಂಬ) ಕಡಿಮೆ ಇರುವುದು. ಅಂದರೆ 4G ತಂತ್ರಜ್ಞಾನವು 200ms ತೆಗೆದುಕೊಂಡರೆ 5G ತಂತ್ರಜ್ಞಾನವು 1ms ತೆಗೆದುಕೊಳ್ಳುತ್ತದೆ.

4G ಮತ್ತು 5G ತಂತ್ರಜ್ಞಾನಕ್ಕೆ ಇರುವ ವ್ಯತ್ಯಾಸ?

5G ಅನ್ನು ಇಂದಿನ 4G ತಂತ್ರಜ್ಞಾನಕ್ಕೆ ಹೋಲಿಸಿದರೆ ಮುಖ್ಯ ವಿಕಾಸ ವೆಂದರೆ ಡಾಟಾ ವೇಗ ಮಾತ್ರವಲ್ಲದೆ IoT (ಇಂಟರ್ನೆಟ್ ಆಫ್ ಥಿಂಗ್ಸ್) ಮತ್ತು ವಿಮರ್ಶಾತ್ಮಕ ಸಂವಹನ ಬಳಕೆಗೆ ಹೊಸ ಸುಧಾರಿತ ಮಟ್ಟದ ಕಾರ್ಯಕ್ಷಮತೆ 5G ತಂತ್ರಜ್ಞಾನವು ಹೊಂದಿದೆ. 5G ತಂತ್ರಜ್ಞಾನವು 4G ತಂತ್ರಜ್ಞಾನಕ್ಕಿಂತ ಹತ್ತು ಪಟ್ಟು ಹೆಚ್ಚು ಡೇಟಾವನ್ನು ಹೊಂದಿದೆ.

5G ತಂತ್ರಜ್ಞಾನವು ಭಾರತಕ್ಕೆ ಯಾವಾಗ ಬರುತ್ತದೆ?

ಭಾರತದಲ್ಲಿ ಸದ್ಯಕ್ಕೆ 5G ತಂತ್ರಜ್ಞಾನವು ಲಭ್ಯವಿಲ್ಲ. ಆದರೆ 5G ತಂತ್ರಜ್ಞಾನದ ಮೊಬೈಲ್ ಫೋನ್ ಗಳು ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಇನ್ನು 2020ರ ಕೊನೆಯ ತಿಂಗಳು ಡಿಸೆಂಬರ್ನಲ್ಲಿ 5G ತಂತ್ರಜ್ಞಾನವು ಭಾರತಕ್ಕೆ ಬರುವ ಎಲ್ಲ ಸಾಧ್ಯತೆಗಳಿವೆ ಈಗಾಗಲೇ ಎಲ್ಲಾ ಟೆಲಿಕಾಂ ಕಂಪನಿಗಳು 5G ತಂತ್ರಜ್ಞಾನವನ್ನು ಭಾರತಕ್ಕೆ ತರಲು ಪ್ರಯತ್ನ ಪಡುತ್ತಿವೆ.

ಇನ್ನು 5G ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ:

https://youtu.be/kahYh6GH8UY

=0

follow me

Leave a Reply

Your email address will not be published.

error: Content is protected !!
×