ವರದಿ: ಈರಯ್ಯ ಕುರ್ತುಕೋಟಿ ಕುಕನೂರು
ಯಲಬುರ್ಗಾ : ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರ ಗ್ರಾಮ ಪಂಚಾಯತಿ ನರೇಗಾ ಯೋಜನೆಯಡಿ ಸುಮಾರು ಇನ್ನೂರು ಜನ ಬಡವರಿಗೆ ಉದ್ಯೋಗ ಒದಗಿಸಿ ಅವರ ಜೀವನಕ್ಕೆ ಆದಾರವಾಗಿದೆ.
ಲಾಕ್ ಡೌನ್ ನಿಂದಾಗಿ ಇಡೀ ರಾಜ್ಯದಲ್ಲಿಯೇ ಜನ ಸಾಮಾನ್ಯರು ಬಡವರು ತೊಂದರೆಗೆ ಸಿಲುಕಿದ್ದು ಅದರಲ್ಲೂ ಹಳ್ಳಿಯಂತಹ ಪ್ರದೇಶಗಳಲ್ಲಿ ಕೆಲಸವಿಲ್ಲದೇ ಬಡವರು ಪರಿತಪಿಸುವಂತಾಗಿದ್ದು ಇಂತಹ ಸಂದರ್ಭದಲ್ಲಿ ಇಲ್ಲೀಯ ಗ್ರಾಮ ಪಂಚಾಯತಿ ವತಿಯಿಂದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿ ಕೃಷಿ ಹೊಂಡ, ಬದು ನಿರ್ಮಾಣ, ದನದ ದೊಡ್ಡಿ ನಿರ್ಮಾಣ, ಸಸಿ ನೆಡುವುದು ಸೇರಿದಂತೆ ಅನೇಕ ಯೋಜನೆಗಳಲ್ಲಿ ಗ್ರಾಮ ಪಂಚಾಯತಿ ಕೂಲಿ ಕೆಲಸ ನೀಡಿದ್ದು ಬಡವರಿಗೆ ಇದರಿಂದ ತುಂಬಾ ಅನಕೂಲವಾಗಿದೆ.
ಕಲ್ಲೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ವಿವಿಧ ಹಳ್ಳಿಗಳ ಸುಮಾರು ಇನ್ನೂರು ಜನರಿಗೆ ಉದ್ಯೋಗ ಒದಗಿಸಿಲಾಗಿದೆ, ಸರ್ಕಾರದ ವಿವಿಧ ಕಾಮಗಾರಿಯ ಮೂಲಕ ಜನರು ಕೆಲಸ ಮಾಡುತ್ತಿದ್ದಾರೆ, ಅವರ ದುಡಿಮೆಗೆ ತಕ್ಕಂತೆ ಕೂಲಿಯನ್ನು ನೀಡಲಾಗುತ್ತಿದೆ ಎಂದು ಕಲ್ಲೂರು ಗ್ರಾಮ ಪಂಚಾಯತಿ ಪಿಡಿಓ ಸಿದ್ದನಗೌಡ ರಬ್ಬನಗೌಡ ಮಾಹಿತಿ ನೀಡಿದರು,