ಕೊಪ್ಪಳ: ಭಾಗ್ಯನಗರ ಪಟ್ಟಣ ಪಂಚಾಯಿತಿ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿನಗೂಲಿ ಕಾರ್ಮಿಕರಿಗೆ ಕಳೆದ ಮೂರು ವರ್ಷಗಳಿಂದ ವೇತನ ಹಂಚಿಕೆ ಆಗಿರಲಿಲ್ಲ. ,ಹೀಗಾಗಿ ಜಿಲ್ಲಾಧಿಕಾರಿ ಗಳಿಗೆ ಕಾರ್ಮಿಕರ ಪರವಾಗಿ ಮನವಿಯನ್ನು ಕೊಪ್ಪಳ ಜಿಲ್ಲಾ ಮಾನವ ಹಕ್ಕುಗಳ ಒಕ್ಕೂಟದ ಅಧ್ಯಕ್ಷರಾದ ಮಂಜುನಾಥ್ ಬಿ ತೋಟಗೇರಿ ನೇತೃತ್ವದಲ್ಲಿ ಸಲ್ಲಿಸಲಾಗಿತ್ತು.
ಅರ್ಜಿಯನ್ನು ಪರಿಶೀಲಿಸಿದ ಜಿಲ್ಲಾ ಅಧಿಕಾರಿಗಳು ಕೂಡಲೇ ಅರ್ಜಿಗೆ ಸ್ಪಂದಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಕಾರ್ಮಿಕರಿಗೆ ವೇತನ ಬಿಡುಗಡೆ ಮಾಡಿದ್ದಾರೆ. ಎಂದು ಕೊಪ್ಪಳ ಜಿಲ್ಲಾ ಮಾನವ ಹಕ್ಕುಗಳ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಮತ್ತು ಜಿಲ್ಲಾಧಿಕಾರಿಗಳಿಗೆ ಒಕ್ಕೂಟದ ಪರವಾಗಿ ಮಂಜುನಾಥ್ ಬಿ ತೋಟಗೇರಿ ಅವರು ಅಭಿನಂದನೆಯನ್ನು ತಿಳಿಸಿದ್ದಾರೆ.