ಕೊಪ್ಪಳಕ್ಕೆ ಕಂಟಕ? ಬಾಗಲಕೋಟೆಗೆ ಹೋಗಿಬಂದ 18 ಜನರಿಗೆ ಕ್ವಾರಂಟೈನ್​

ಇದೇ ಮೇ 2 ರಂದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದಿಂದ ಬಾಗಲಕೋಟೆ ಜಿಲ್ಲೆಯ ಢಾಣಕ ಶಿರೂರು ಗ್ರಾಮಕ್ಕೆ ಮದುವೆಗೆಂದು ಇವರೆಲ್ಲರೂ ಹೋಗಿ ಬಂದಿದ್ದರು.

ಕೊಪ್ಪಳ: ಬಾಗಲಕೋಟೆ ಜಿಲ್ಲೆಯ ಢಾಣಕ ಶಿರೂರು ಗ್ರಾಮಕ್ಕೆ ತೆರಳಿ ಬಂದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ 18 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ 18 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಇಬ್ಬರು ಆಟೋ ಚಾಲಕರು, 8 ಮಕ್ಕಳು ಸೇರಿ ಒಟ್ಟು 18 ಜನರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.ಇದೇ ಮೇ 2 ರಂದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದಿಂದ ಬಾಗಲಕೋಟೆ ಜಿಲ್ಲೆಯ ಢಾಣಕ ಶಿರೂರು ಗ್ರಾಮಕ್ಕೆ ಮದುವೆಗೆ ಎಂದು ತೆರಳಿದ್ದರು. ಢಾಣಕ ಶಿರೂರಿನ ಸೋಂಕಿತ ಗರ್ಭಿಣಿಯ ಮನೆ ಪಕ್ಕದಲ್ಲಿ ಈ ಮದುವೆ ನಡೆದಿತ್ತು. ಮದುವೆ ಮುಗಿಸಿಕೊಂಡು ಈ 18 ಜನರು ವಾಪಸ್ ಮೇ. 3 ರಂದು ನಿಲೋಗಲ್ ಗ್ರಾಮಕ್ಕೆ ವಾಪಸ್​​ ಆಗಿದ್ದರು. ನಿಲೋಗಲ್ ಗ್ರಾಮಕ್ಕೆ ಹಿಂದುರುಗಿದ ದಿನವೇ ಢಾಣಕ ಶಿರೂರು ಗ್ರಾಮದ ಗರ್ಭಿಣಿಗೆ ಸೋಂಕು ದೃಢವಾಗಿತ್ತು. ನಿಲೋಗಲ್ ಗ್ರಾಮದ ಜನರ ಢಾಣಕ ಶಿರೂರು ಸಂಪರ್ಕದಿಂದ ಜಿಲ್ಲೆಯಲ್ಲಿ ಆತಂಕ ಹೆಚ್ಚಾದಂತಾಗಿದೆ.

=7

follow me

3 Replies to “ಕೊಪ್ಪಳಕ್ಕೆ ಕಂಟಕ? ಬಾಗಲಕೋಟೆಗೆ ಹೋಗಿಬಂದ 18 ಜನರಿಗೆ ಕ್ವಾರಂಟೈನ್​”

  1. ಈ ನಮ್ಮ ಜನಕ್ಕೆ ಎಷ್ಟು ಸರ್ಕಾರ ಹೇಳಿದ್ರು ತಿಳುವಳಿಕೆ ಇಲ್ಲ ಹೋಗ್ತಾವೆ ಸಾವು ಕರೆದುಕೊಂಡು ಮನೆಗೆ ಊರಿಗೆ ತರ್ತಾವೆ

  2. ಇವರು ಮಾಡಿದ ತಪ್ಪಿಗೆ ಕೊಪ್ಪಳ ಜಿಲ್ಲೆಯವರು ಅನುಭವಿಸಬೇಕಾದೀತು ಅಯ್ಯೋ ಎಂತಹ ದುರ್ವಿಧಿ

Leave a Reply

Your email address will not be published.

error: Content is protected !!
×