ಮಧ್ಯ ರಾತ್ರಿಯಿಂದಲೇ ಕರ್ನಾಟಕದಲ್ಲಿ ಲಾಕ್ ಡೌನ್ ಸಡಿಲಿಕೆ

ಬೆಂಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್​ಡೌನ್​ನಲ್ಲಿ ಕೊಂಚ ಸಡಿಲಿಕೆ ತರಲು ಕರ್ನಾಟಕ ಸರ್ಕಾರ ನಿರ್ಧರಿಸಿದ್ದು ಇಂದು ಮಧ್ಯರಾತ್ರಿಯಿಂದಲೇ ಆಯ್ದ ವಲಯಗಳಲ್ಲಿ ಕೆಲವು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.

ಹಾಗಾದ್ರೆ ಯಾವ ವಲಯಗಳಲ್ಲಿ ಲಾಕ್​ಡೌನ್​ ಕೊಂಚ ಸಡಿಲಿಕೆ ಮಾಡಿದೆ, ಯಾವ ನಿರ್ಬಂಧಗಳನ್ನು ಹಾಗೇ ಉಳಿಸಿಕೊಂಡಿದೆ ಅನ್ನೋದನ್ನು ನೋಡೋದಾದ್ರೆ..

ಏನಿರುತ್ತೆ

 • ಆಸ್ಪತ್ರೆಗಳು, ನರ್ಸಿಂಗ್ ಹೋಮ್ಸ್, ಕ್ಲಿನಿಕ್​ಗಳಲ್ಲಿ ಎಂದಿನಂತೆ ಸೇವೆ
 • ಮೆಡಿಕಲ್​ ಶಾಪ್​ಗಳು, ಲ್ಯಾಬೋರೇಟರಿಗಳೂ ಓಪನ್
 • ವೆಟರ್ನರಿ ಆಸ್ಪತ್ರೆಗಳು, ಡಿಸ್ಪೆನ್ಸರೀಸ್, ಪೆಥಾಲಜಿ ಸೇವೆಗಳು ಲಭ್ಯ
 • ರೈತರ ಕೃಷಿ ಚಟುವಟಿಕೆಗಳಿಗೆ ಅವಕಾಶ
 • ಕೃಷಿಗೆ ಸಂಬಂಧಿಸಿದ ಉಪಕರಣಗಳ ಮಾರಾಟಕ್ಕೆ ಅನುಮತಿ
 • ಎಪಿಎಂಸಿ ಮಾರ್ಕೆಟ್​ಗಳಲ್ಲಿ ತರಕಾರಿ ಮಾರಾಟಕ್ಕೆ ಗ್ರೀನ್ ಸಿಗ್ನಲ್
 • ಕಡಲ ನಗರಿಗಳಲ್ಲಿ ಮೀನುಗಾರಿಕೆಗೆ ಅನುಮತಿ
 • ಬ್ಯಾಂಕ್​ಗಳು, ಎಟಿಎಂಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ
 • ಕಿರಾಣಿ ಅಂಗಡಿ, ಮಾಂಸದ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ
 • ಕೋರಿಯರ್, ಅಂಚೆ ಸೇವೆಗೆ ಅನುಮತಿ ನೀಡಿದ ಸರ್ಕಾರ
 • ಅಮೆಜಾನ್, ಫ್ಲಿಪ್​ಕಾರ್ಟ್​ಗಳ ಆನ್​ಲೈನ್​ ಖರೀದಿ ಸೇವೆ ಲಭ್ಯ
 • ವಿಮಾನ ನಿಲ್ದಾಣ, ರೇಲ್ವೆ ಸ್ಟೇಷನ್, ಕಂಟೇನರ್ ಡಿಪೋಗಳಲ್ಲಿ ಸಂಸ್ಕರಣಾ ಘಟಕ ಸೇವೆ
 • ಲಾಕ್​ಡೌನ್​ನಿಂದ ಸಿಲುಕಿಕೊಂಡಿರುವ ಪ್ರವಾಸಿಗರಿಗೆ ವಸತಿ ಕಲ್ಪಿಸಿರುವ ಹೋಟೆಲ್, ಹೋಮ್​​ಸ್ಟೇ, ಲಾಡ್ಜ್​ಗಳಿಗೆ ಅನುಮತಿ
 • ರಸ್ತೆ, ನೀರಾವರಿ ಯೋಜನೆ, ಕಟ್ಟಡ ನಿರ್ಮಾಣಕ್ಕೆ ಅನುಮತಿ
 • ಸಣ್ಣ, ಅತೀ ಸಣ್ಣ ಕೈಗಾರಿಕೆ ಸೇರಿ ಎಲ್ಲಾ ರೀತಿಯ ಕೈಗಾರಿಕಾ ಉತ್ಪಾದನಾ ವಲಯಗಳಿಗೆ ಅನುಮತಿ
 • ಅಗತ್ಯ ವಸ್ತುಗಳ ಉತ್ಪಾದನೆ, ಔಷಧಿ ಉತ್ಪಾದನಾ, ಪ್ಯಾರಾಮೆಡಿಕಲ್ ಉಪಕರಣಗಳ ಉತ್ಪಾದನಾ ಕೈಗಾರಿಕೆಗಳಿಗೆ ನಿರ್ಬಂಧವಿಲ್ಲ
 • ಮೆಟ್ರೋ ರೈಲು ಯೋಜನೆ ಕಾಮಗಾರಿಗೆ ಅನುಮತಿ
 • ಈ ಸಡಿಲಿಕೆಗಳು ಕಂಟೈನ್​ಮೆಂಟ್​ ಝೋನ್​ಗಳಿಗೆ ಅನ್ವಯ ಆಗುವುದಿಲ್ಲ

ಯಾವುದು ಇರಲ್ಲ..?

 • ಮದ್ಯ ಮಾರಾಟ ಮಾಡಲು ಅವಕಾಶವಿಲ್ಲ
 • ಸಾರ್ವಜನಿಕ ವಲಯಗಳಲ್ಲಿ ಕಾಫಿ, ಟೀ ಮಾರುವಂತಿಲ್ಲ
 • ರೈಲು, ಬಸ್ಸು, ಮೆಟ್ರೋ ಸೇವೆಗಳು ಇರುವುದಿಲ್ಲ
 • ವೈದ್ಯಕೀಯ ತುರ್ತು ಹೊರತುಪಡಿಸಿ ಅಂತರಾಜ್ಯ ಹಾಗೂ ಅಂತರ್​ಜಿಲ್ಲೆ ಓಡಾಟಕ್ಕಿಲ್ಲ ಅವಕಾಶ
 • ಆಟೋ, ಟ್ಯಾಕ್ಸಿ, ಕ್ಯಾಬ್​ ಸೇವೆಗೆ ಮುಂದುವರಿದ ಬ್ರೇಕ್​
 • ಸಿನಿಮಾ ಹಾಲ್, ಬಾರ್, ಪಾರ್ಕ್, ಸ್ವಿಮ್ಮಿಂಗ್​ ಪೂಲ್​, ಸಲೂನ್​, ಶಾಪಿಂಗ್​ ಮಾಲ್​ಗಳು ಎಂದಿನಂತೆ ಕ್ಲೋಸ್​
 • ಸಾರ್ವಜನಿಕ ಸಭೆ ಸಮಾರಂಭಗಳಿಗಿಲ್ಲ ಅವಕಾಶ
 • ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು 20 ಜನರಿಗಷ್ಟೇ ಅವಕಾಶ
 • ಆರೋಗ್ಯ ಇಲಾಖೆ ಸೂಚಿಸಿದವರು ಕ್ವಾರೆಂಟೈನ್​ನಲ್ಲಿರೋದು ಕಡ್ಡಾಯ
 • ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಅವರ ಮೇಲೆ IPC ಸೆಕ್ಷನ್ 188ರಡಿ ಕೇಸ್
 • ಕೊರೊನಾ ಹಾಟ್​ಸ್ಪಾಟ್​ ಏರಿಯಾಗಳಲ್ಲಿ ಕೇಂದ್ರದ ಗೈಡ್​ಲೈನ್ಸ್​ ಎಂದಿನಂತೆ ಇರಲಿದೆ
 • ಹಾಟ್​ಸ್ಪಾಟ್​ ಝೋನ್​ಗಳಿಗೆ ಪರೀಕ್ಷೆ ಇಲ್ಲದೇ ಪ್ರವೇಶ ಇಲ್ಲ

Leave a Reply

Your email address will not be published.

ಪಿಎಫ್ ಐ ಸೇರಿ ಹಲವು ಸಂಘಟನೆಗಳು ಭಾರತದಲ್ಲಿ ಬ್ಯಾನ್ - ಪಿಎಫ್ ಐ ಸೇರಿ ಹಲವು ಸಂಘಟನೆಗಳು ಭಾರತದಲ್ಲಿ ಬ್ಯಾನ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ
error: Content is protected !!