ವರದಿ: ಎಂ ಡಿ ಮುಸ್ತಫಾ ಲಿಂಗಸುಗೂರು
ಲಿಂಗಸೂಗೂರು ಶಾಲೆ ರಜೆ ಹಿನ್ನೆಲೆಯಲ್ಲಿಬೆಸಿಗೆಯ ಬಿಸಿಯಿಂದ ತಪ್ಪಿಸಿಕೊಳ್ಳಲು ನಾರಾಯಣಪುರ ಜಲಾಶಯದ ಹಿನ್ನೀರಿಗೆ ಈಜಲು ಹೋಗಿದ್ದ ೧೬ ವರ್ಷದ ಬಾಲಕನನ್ನು ಮೊಸಳೆಯೊಂದು ಎಳೆದೊಯ್ದ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಚಿತಾಪುರ ಗ್ರಾಮದಲ್ಲಿ ಗ್ರಾಮದ ೧೬ ವರ್ಷದ ಮಂಜುನಾಥ ಎಂಬುವ ಬಾಲಕ ನಾರಾಯಣ ಪುರ ಜಲಾಶಯದ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಸಂದರ್ಭದಲ್ಲಿ ಮೊಸಳೆಯೊಂದು ದಾಳಿ ಮಾಡಿ ಬಾಲಕನನ್ನು ಎಳೆದೊಯ್ದಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ಘಟನೆ ಜರುಗಿದ್ದು, ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಸದ್ಯ ಬಾಲಕನಿಗಾಗಿ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ ಜೊತೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.