ಬಳ್ಳಾರಿ: ಬಳ್ಳಾರಿ ಅಪಘಾತದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮೃತ ಸಚಿನ್ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇದನ್ನು ಓದಿ:http://localhost/gbnews/?p=2612
ಕಾರು ಅಪಘಾತದಲ್ಲಿ ಮೃತಪಟ್ಟ ಬೆಂಗಳೂರು ಮೂಲದ ಸಚಿನ್ ಸಚಿವ ಆರ್. ಆಶೋಕ್ ಸಂಬಂಧಿ ಎಂದು ಮರಿಯಮ್ಮನಹಳ್ಳಿ ಸಬ್ ಇನ್ಸ್‌ಪೆಕ್ಟರ್‌ರಿಂದ ಮಾಹಿತಿ ಬಂದಿತ್ತು. ಆ ಕಾರಣಕ್ಕೆ ತಡರಾತ್ರಿ ನಂತರ ಮರಣೋತ್ತರ ಪರೀಕ್ಷೆ ಮಾಡಿ ಮೃತದೇಹವನ್ನು ಕೊಡಲಾಯಿತು. ಐದು ಜನ ಚಿಕಿತ್ಸೆಗಾಗಿ ಬಂದಿದ್ದರು. ಶಿವಕುಮಾರ್, ರಾಹುಲ್‍ಗೆ ಸಣ್ಣಪುಟ್ಟ ಗಾಯಗಳಾಗಿವೆ. ರಾಕೇಶ್‍ಗೆ ಬೆನ್ನು ಮೂಳೆ ಮುರಿದಿತ್ತು. ವರುಣ್ ಚಿಕಿತ್ಸೆ ಪಡೆಯದೆ ಹಾಗೆ ಹೋಗಿದ್ದಾರೆ ಎಂದು ಹೊಸಪೇಟೆ ವೈದ್ಯ ಮಹಾಂತೇಶ್ ತಿಳಿಸಿದ್ದಾರೆ.
ಸಚಿನ್ ಅವರು ಬೆಂಗಳೂರಿನವರು, ಅಲ್ಲದೇ ಮೃತ ವ್ಯಕ್ತಿ ಸಚಿವ ಆರ್.ಅಶೋಕ್ ಕಡೆಯವರು, ಆದ್ದರಿಂದ ಬೇಗ ಮರಣೋತ್ತರ ಪರೀಕ್ಷೆ ಮಾಡಿ ಅಂತ ಹೇಳಿದರು. ಸಾಮಾನ್ಯವಾಗಿ ನಾವು ಮಧ್ಯರಾತ್ರಿ ಮರಣೋತ್ತರ ಪರೀಕ್ಷೆ ಮಾಡುವುದಿಲ್ಲ. ಆದರೂ ರಾತ್ರಿ 1.30ಕ್ಕೆ ಸಚಿನ್ ಮರಣೋತ್ತರ ಪರೀಕ್ಷೆ ಮಾಡಿದ್ದೇವೆ ಎಂದರು.
ಮರಣೋತ್ತರ ಪರೀಕ್ಷೆಯನ್ನು ಬೇಗ ಮಾಡಿಕೊಡುವಂತೆ ಪಿಎಸ್‍ಐ ಹೇಳಿದರು. ತುರ್ತಾಗಿ ಪರೀಕ್ಷೆ ಮಾಡುವಂತೆ ಮನವಿ ಮಾಡಿಕೊಂಡರು. ಪಿಎಸ್‍ಐ ಹೇಳಿದ್ದಕ್ಕೆ ಬೇಗ ಮರಣೋತ್ತರ ಪರೀಕ್ಷೆ ಮಾಡಲಾಯಿತು. ಅಲ್ಲದೇ ಮೃತದೇಹವನ್ನ ಬೆಂಗಳೂರಿಗೆ ತೆಗೆದುಕೊಂಡು ಹೋಗಬೇಕು ಅಂದರು. ಹೀಗಾಗಿ ಮರಣೋತ್ತರ ಪರೀಕ್ಷೆ ಮಾಡಿದ್ದೇವೆ ಎಂದು ತಾಲೂಕು ಆಸ್ಪತ್ರೆ ವೈದ್ಯ ಮಹಾಂತೇಶ್ ಹೇಳಿದರು.