ಗವಿನಾಡಿನ ಗವೀಶನಿಗೆ ಗಾಯನವೇ ಉಸಿರು

ಬಿ.ಎನ್.ಹೊರಪೇಟಿ:

ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ ಆದರೆ ಅಪ್ಪಿಕೊಳ್ಳುವುದು ಮಾತ್ರ ಕೆಲವರನ್ನು.ಕಲೆಗೆ ಅದ್ಯಾವ ಜಾತಿ,ಬಡವ‌ಬಲ್ಲಿದ‌ಮೇಲು ಕೀಳೆಂಬ ಬೇಧವಿಲ್ಲ.ಹೀಗೆ ಬಡತನದಲ್ಲಿ ಹುಟ್ಟಿ ಗಾಯನವೇ ಉಸಿರಾಗಿಸಿಕೊಂಡ ಗವಿಸಿದ್ದಪ್ಪ ಅಲಿಯಾಸ ಗವೀಶ ಬಸಾಪಟ್ಟನ ಅವರ ಗಾಯನವೆಂದರೆ ಉತ್ತರ ಕರ್ನಾಟಕದ ಮನೆಮನಗಳೆರಡಕ್ಕೂ ತಲುಪಿದೆ.

ಮೂಲತಃ ಗಂಗಾವತಿ ತಾಲೂಕಿನ ಬಸಾಪಟ್ಟನ್ ದ ನಿವಾಸಿಯಾದ ಗವಿಸಿದ್ದಪ್ಪ ಗಾಯನಲೋಕಕ್ಕೆ ಬಂದಾಗಿನಿಂದ ಗವೀಶ್ ಎಂದೆ ಪರಿಚಿತ.ಕಿತ್ತು ತಿನ್ನುವ ಬಡತನದಲ್ಲಿ ಕಲೆಯನ್ನು ಆರಾಧಿಸಿ ಬದುಕಿಗಾಗಿ ಕಲೆಯನ್ನೆ ನಂಬಿ ಜೀವನ ಸಾಗಿಸುತ್ತಿರುವವರು.ತಂದೆ ಲಿಂಗಪ್ಪ ಮಡಿವಾಳ. ಬಾಲ್ಯದಿಂದಲೂ ಗವೀಶನಿಗೆ ಗಾಯನದ ಹುಚ್ಚು.ಮನೆಯಲ್ಲಿ ಹೆಚ್ಚು ಪ್ರೋತ್ಸಾಹ ಇಲ್ಲದಿದ್ದರೂ ಶ್ರದ್ಧೆ ಶ್ರಮದಿಂದ ಕಲಾ ರಂಗಭೂಮಿಯಲ್ಲಿ ತಮ್ಮದೆ ಛಾಪು ಮೂಡಿಸಿದ ಖ್ಯಾತಿ.ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗೂ ಹುಟ್ಟೂರಲ್ಲೆ ಮುಗಿಸಿದರು.ಬಿ.ಎ ಓದಿ ವಿದ್ಯಾವಂತನಾಗಿ ನೌಕರಿ ಮಾಡುವ ಆಸೆಗೆ ಬ್ರೇಕ್ ಬಿದ್ದು ಜೀವನ ನಿರ್ವಹಣೆಗಾಗಿ ಪೇಪರ್ ಗಳನ್ನು ಹಾಕುತ್ತಲೆ ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದರು.

ಉತ್ತರ ಕರ್ನಾಟಕದ ನಾಟಕದಲ್ಲಿ ಗವೀಶ ಅವರ ಹಿನ್ನಲೆ ಗಾಯನವೇ ಫೇಮಸ್. ಇನ್ನೊಂದು ಅಚ್ಚರಿಯ ವಿಷಯ ಎಂದರೆ ಹಾಡಿನ ಹೆಣ್ಣು ಗಂಡು ಧ್ವನಿ ಇವರೊಬ್ಬರೆ ಹಾಡುವುದು.ರಾತ್ರಿ ಇಡೀ ಜನರನ್ನು ರಂಜಿಸಿ ಮನೆಮಾತಾಗಿರುವ ಗವೀಶ ಇಲ್ಲಿವರೆಗೆ ಸುಮಾರು ೩೦೦೦ ಸಾವಿರಕ್ಕೂ ಹೆಚ್ಚು ರಂಗಭೂಮಿ ನಾಟಕಕ್ಕೆ ಧ್ವನಿಯಾಗಿದ್ದಾರೆ.ಅಷ್ಟೇ ಅಲ್ಲದೆ ಆರ್ಕೆಸ್ಟ್ರಾ, ತತ್ವ ಪದ ಗಾಯನ,ಜನಪದ ಗಾಯನ,ಸಾಂಸ್ಕೃತಿಕ ಸಾಂಪ್ರದಾಯಿಕ ಹಾಡುಗಳಿಗೂ ಸೈ ಎನಿಸಿಕೊಂಡವರು.
ಸುಮಾರು ೧೬ ವರ್ಷದ ಇವರ ರಂಗಭೂಮಿ ಪಯಣದಲ್ಲಿ ಅದೆಷ್ಟೋ ಅಭಿಮಾನಿಗಳ ಮನಸ್ಸು ಗೆದ್ದವರು.ನಾಟಕದಲ್ಲಿ ದೃಶ್ಯಕ್ಕೆ ಅನುಗುಣವಾಗಿ ಹಾಡು ಹಿನ್ನೆಲೆ ಧ್ವನಿ ಹಾಗೂ ಕೊರಸ್ ಕೊಡುವ ನಾಟಕದ ಸಂಪೂರ್ಣ ಯಶಸ್ವಿಗೆ ಇವರ ಶ್ರಮವೆ ಶ್ಲಾಘನೀಯ. ಆಧುನಿಕ ಜನಪದ,ಚಲನಚಿತ್ರ ಗೀತೆಗಳು, ಭಾವಗೀತೆ ಭಕ್ತಿಗೀತೆ ಎಲ್ಲವನ್ನೂ ಕರಗತಮಾಡಿಕೊಂಡವರು.ಗದುಗಿನ ಪಂ.ಪುಟ್ಟರಾಜ ಆಶಿರ್ವಾದದಿಂದ ಪುಟ್ಟಯ್ಯಜ್ಜನ ನೂರಾರು ಹಾಡುಗಳ ಧ್ವನಿಸುರುಳಿಗೆ ಹಾಡಿರುವರು.ರೈತರ ನೋವಿನ ಗೀತೆ ಚಿಕ್ಕಬೆಣಕಲ್ಲ ಬೆಟ್ಟದ ಲಿಂಗೇಶ್ವರರ ಕ್ಯಾದಿಗಾಳ ದ್ಯಾಮಮ್ಮ ಹಸಮಕಲ್ಲ ದುರ್ಗಾದೇವಿ ಕುದುರಿಮೋತಿ ಶಿವಯ್ಯಜ್ಜನವರ ಗಬ್ಬೂರಿನ ಬೀರಪ್ಪ , ಕರಿಯಮ್ಮ , ಮಾರುತೇಶ್ವರ ಕೊಪ್ಪಳ ಗವಿ ಸಿದ್ದೇಶ್ವರ ಹಾಲಾಪುರ ಕರಿಯಪ್ಪ ತಾತ ಸಿರಿವಾರ ದ್ಯಾವಮ್ಮ ಕಲಕಬಂಡಿ ಕರಿಯಮ್ಮ ಅರಸನಕೇರಿ ಜಗದೀಶನ ಗೀತೆ ಇನ್ನು ಹತ್ತಾರು ಊರಿನ ಭಕ್ತಿಗೀತೆಗಳನ್ನು ಧ್ವನಿಸುರುಳಿ ಗೆ ಹಾಡಿರುವರು. ಗದುಗಿನ ವೀರೇಶ್ವರ ಪುಣ್ಯಾಶ್ರಮದ ಒಡೆಯರಾದ ಶ್ರೀ ಕಲ್ಲಯ್ಯಜ್ಜನವರು ರಚಿಸಿರುವ ಗೀತೆಗಳನ್ನು ಹಾಡದ್ದಾರೆ.ಅಷ್ಟೇ ಅಲ್ಲದೆ ಮದುವೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಇವರ ಗಾಯನದ ಮನರಂಜನಾ ಕಾರ್ಯಕ್ರಮಗಳನ್ನುಮೆಚ್ಚಲೆಬೇಕು.ಇವರ ಗಾಯನಕ್ಕೆ ಶಕ್ತಿ ಕೊಟ್ಟವರು ಪ್ರಕಾಶ ಕುಡತಿನಿ ಹಾಗೂ ಹನಮಂತರಾವ ಕುಲಕರ್ಣಿ.ದೊಡ್ಡಬಸವ ಶಾಸ್ತ್ರಿಗಳು ಶ್ರೀಧರಗಡ್ಡೆ.. ಡಾ.ಶಿವರಾಜ ಹಾಲಾಪುರ ಬಸವಲಿಂಗಯ್ಯ ಹಸಮಕಲ್ ಸುರೇಶ್ ಗಬ್ಬೂರ ಇವರು ನನ್ನನ್ನ ಕ್ಯಾಸೆಟ್ ಲೋಕಕ್ಕೆ ಪರಿಚಯಿಸಿದವರು.
ಅರ್ಧನಾರೇಶ್ವರನಂತೆ ಕಂಚಿನ ಕಂಠದಲ್ಲಿ ಹೆಣ್ಣು ಮತ್ತು ಗಂಡು ಧ್ವನಿಯ ಮೂಲಕ ರಾಜ್ಯ ಹೊರ ರಾಜ್ಯದಲ್ಲೂ ಕಾರ್ಯಕ್ರಮ ನೀಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.ಗೋವಾ,ಮಹಾರಾಷ್ಟ್ರ, ದೆಹಲಿ ಹೀಗೆ ಎಲ್ಲಾ ಕಡೆಯೂ ಸುತ್ತುತ್ತಾ ಕಲಾಸೇವೆ ಮಾಡಿದ ಕಲಾರಾಧಕ.ರಾಜು ತಾಳಿಕೋಟಿ ಅವರ ವಿಡಿಯೋ “ಕಲಿಯುಗದ ಕುಡುಕ ” ” ಮುತ್ತೈದೆ ನೀ ಮತ್ತೊಮ್ಮೆ ಬಾ ” ಎನ್ನುವ ವಿಡಿಯೋ ನಾಟಕಕ್ಕು ಹಾಡಿದ್ದಾರೆ.ಹಂಪಿ ಉತ್ಸವ ಆನೆಗುಂದಿ ಉತ್ಸವಗಳಲ್ಲಿ ನಾಟಕ ಮತ್ತು ಸ್ಥಳಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.ದೆಹಲಿಯಲ್ಲಿ ” ಉತ್ತಮ ಗಾಯಕ “ನಾಟಕ ಮಂಡಳಿಗಳು ” ಗಾನ ಮಾಣಿಕ್ಯ ” ” ಗಾನಸಿರಿ ” ” ಗಾನಕೋಗಿಲೆ ” ಎನ್ನುವ ಪ್ರಸಸ್ತಿ ಮತ್ತು ಫಲಕ ನೀಡಿ ಗೌರವಿಸಿದೆ.
ಗವೀಶ ಗಾಯನವು ಒಂದು ಮುಖವಾದರೆ ಅವರ ನೋವಿನ ಕಥೆನೆ ಬೇರೆ ಇದೆ.ಇದುವರೆಗೂ ವಯಸ್ಸಾದ ತಂದೆ ತಾಯಿಗಳೊಂದಿಗೆ ಆಶ್ರಯ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.ಇಡಿ ಸಂಸಾರದ ಜವಾಬ್ದಾರಿಯನ್ನು ಹೊತ್ತು ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳು.ಬಡತನದಲ್ಲಿಯೆ ವಿದ್ಯಾಬ್ಯಾಸ ಮಾಡಿ ಅಧಿಕಾರಿಯಾಗಿ ನಾಡಸೇವೆ ಮಾಡುವ ಆಸೆ ನಿರಾಸೆಯಾಯಿತು.ರಾತ್ರಿಯಿಡಿ ನಾಟಕ ಮುಗಿಸ್ಕೊಂಡು ಬಂದು ಪೇಪರ್ ಬರೀತಾ ಇದ್ದಿದ್ದನ್ನು ನೆನಪಿಸಿಕೊಂಡರು. ಆಂದ್ರಪ್ರದೇಶದದ ಹತ್ತಿರ ನಾಟಕ ಮುಗಿಸಿ ಬಂದು ಪರೀಕ್ಷೆ ಬರೆಯೋಕಾಗದೆ ಕಣ್ಣೋರೊಡನೆ ಅವತ್ತೆ ಇವರ ವಿದ್ಯಾಭ್ಯಾಸ ನಿಂತು ಕಲಾ ಸೇವೆಯು ಅನಿವಾರ್ಯವಾಯಿತು.
ಇಷ್ಟೇಲ್ಲಾ ಪ್ರತಿಭೆ ಇರುವ ಗವೀಶನಿಗೆ ಸದಾ ಕಾಡುವ ವಿಷಯವೆಂದರೆ ತವರು ಜಿಲ್ಲೆ ಕೊಪ್ಪಳವೆ ಇವರ ಕಲೆಯನ್ನು ಗುರುತಿಸಲಿಲ್ಲ.ಕಲೆ ಕಲಾವಿದರನ್ನು ಬೆಳೆಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಣ್ಣಾ ಮುಚ್ಚಾಲೆಯಾಡುತ್ತಿದೆ.ಸೂಕ್ತ ಪ್ರತಿಭೆಯನ್ನು ಗುರುತಿಸಿ ಕಾರ್ಯಕ್ರಮ ನೀಡಲೆಂದು ಅಳಲು ತೋಡಿಕೊಂಡರು.ರಾಜ್ಯದ ತುಂಬಾ ಹೆಸರಾಗಿರುವ ಗವೀಶನಿಗೆ ಕೊಪ್ಪಳ ಜಿಲ್ಲೆಯ ಪ್ರತಿಷ್ಟಿತ ಕಾರ್ಯಕ್ರಮಗಳಲ್ಲಿ ಒಂದು ಬಾರಿಯಾದರೂ ಹಾಡಬೇಕು ಎನ್ನುವ ಬಯಕೆ.ಕಿರು ಚಿತ್ರಕ್ಕೂ ಇವರ ಧ್ವನಿ ಕೊಡುಗೆಯಾಗಿದೆ.ಆದಷ್ಟು ಬೇಗನೆ ಸರ್ಕಾರ ಇವರನ್ನು ಗುರುತಿಸಲಿ ಎಂಬುದೆ ನಮ್ಮ ಅಶಯ.

ಗವೀಶ ಸಿಂಗರ್:
“ನನ್ನ ಕಲೆಗೆ ಎಲ್ಲರಿಂದಲೂ ಮೆಚ್ಚಿಗೆ ಇದೆ ಆದರೆ ಬೇಜಾರು ಆಗುವ ಸಂಗತಿ ಎಂದರೆ ನನ್ನ ತವರು ಜಿಲ್ಲೆಯ ಕನ್ನಡ ಸಂಸ್ಕ್ರತಿ ಇಲಾಖೆ ನನ್ನ ಗುರುತಿಸಿ ಒಂದು ಕಾರ್ಯಕ್ರಮಗಳನ್ನು ಕೊಡದೆ ಇರುವುದು.”

******************************************

“ಗವೀಶನು‌ನಾನು ಬರೆದಿರುವ ಹಾಡುಗಳನ್ನು ಹಾಡಿದ್ದಾನೆ ಅದ್ಭುತ ಪ್ರತಿಭೆ ಸರಿಯಾದ ವೇದಿಕೆ ಹಾಗೂ ಮಾರ್ಗದರ್ಶನ ಅಗತ್ಯವಿದೆ ಗುರು ಪಂಚಾಕ್ಷರಿಯ ಆಶಿರ್ವಾದ ಆತನಿಗಿದೆ ದೊಡ್ಡ ಕಲಾವಿದನಾಗಿ ಬೆಳೆಯುತ್ತಾನೆ ಎಂಬ ನಂಬಿಕೆ ಇದೆ”

ಕಲ್ಲಯ್ಯಜ್ಜನವರು
ವೀರೇಶ್ವರ ಪುಣ್ಯಾಶ್ರಮದ ಒಡೆಯರು

=2

follow me

2 Replies to “ಗವಿನಾಡಿನ ಗವೀಶನಿಗೆ ಗಾಯನವೇ ಉಸಿರು”

 1. ನಾ ಕಂಡ ಸ್ನೇಹಜೀವಿ, ಮೃದು ಮನಸಿನ ಹಾಡುವ ಗಾನಕೋಗಿಲೆ ಗವೀಶ್ ಅಣ್ಣ.
  ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳ ಮತ್ತು ಕಲೆಯ ಆರಾಧಕರು.
  ಇವರ ನನಗೆ ಪರಿಚಯವಾಗಿದ್ದು ಫೇಸ್ಬುಕ್ ಮುಖಾಂತರ
  ಮತ್ತು ನನ್ನಲಿರುವ ಕಲೆಯನ್ನು ಹೊರಹಾಕಲು ವೇದಿಕೆ ಕಲ್ಪಿಸಿ ಕೊಟ್ಟರು.
  ಅಂದಿನ ಪರಿಚಯ ಇಂದು ನಮ್ಮ ಸಂಭಂದ ಸಹೋದರರನ್ನು ಕೂಡ ಮಿರಿಸುವಂತಿದೆ.
  ಗವೀಶ್ ಅಣ್ಣ ಯಾರೆ ಆಗಲಿ ಅವರ ಬಳಿ ನಾನು ನಿಮ್ಮ ಅಭಿಮಾನಿ ಹಾಗೆ ಹಾಡಬೇಕು ಅಂತ ಬಂದರೆ ಹಿಂದೆ ಮುಂದೆ ನೋಡದೆ ಅವರಿಗೆ ವೇದಿಕೆ ಕೊಟ್ಟು ಅವರಲ್ಲಿರುವ ಕಲೆಯನ್ನು ಜನರಿಗೆ ತಿಳಿಪಡಿಸುತ್ತಾರೆ.
  ಅವರು ಶ್ರೀ ಗುರುವಿನ ವಾಕ್ಯವನ್ನು ಪರಿಪಾಲಿಸುವ ಗುರುವಿನ ಸೇವಕ ಗವೀಶ್ ಅಣ್ಣ” ಎನಗಿಂತ ಕಿರಿಯರಿಲ್ಲ”ಅನ್ನೋ ಇವರ ನುಡಿ ಎಂತವರನ್ನು ಕೂಡ ಮನಸೊಳುವಂತೆ ಮಾಡುತ್ತೆ.
  ಆದಷ್ಟು ಬೇಗ ಇವರ ಕಲೆಗೆ ಬೆಲೆ ಸಿಗುವಂತಾಗಲಿ ಎನ್ನುವುದೇ ನನ್ನ ಆಶಯ.

Leave a Reply

Your email address will not be published.

error: Content is protected !!
×