ಜೀಬಿ ನ್ಯೂಸ್ ಕನ್ನಡ ಸುದ್ದಿ: ಕೊಪ್ಪಳ ತಾಲೂಕಿನ ಜಬ್ಬಲ್ಗುಡ್ಡ ಗ್ರಾಮದಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರೋತ್ಸವಕ್ಕೆ ಮೆರಗು ನೀಡಲಾಯಿತು, ನಂತರ ನಡೆದ ವೇದಿಕೆಯ ಸಮಾರಂಭದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು,
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಇಂದ್ರೇಶ್ ಸುಣಗಾರ ಅವರನ್ನು ಸನ್ಮಾನಿಸಲಾಯಿತು,
ಪ್ರತಿ ವರ್ಷವೂ ಶಾಲೆಗೆ ಏನಾದರೂ ಒಂದು ಕೊಡುಗೆ ನೀಡುತ್ತ ಬಂದಿರುವ ಇವರು ಒಂದು ರೀತಿ ಜಬ್ಬಲ್ಗುಡ್ಡ ಗ್ರಾಮದ ಸರ್ಕಾರಿ ಶಾಲೆಗೆ ತಮ್ಮ ಸೇವೆಯನ್ನು ನೀಡುತ್ತಾ ಇದ್ದಾರೆ,
ಇದರಿಂದ ಮಕ್ಕಳಿಗೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗುತ್ತಿದೆ, ಈ ಹಿನ್ನೆಲೆಯನ್ನು ಇಟ್ಟುಕೊಂಡು ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಮತ್ತು ಶಾಲೆಯ ಅಭಿವೃದ್ಧಿ ಬಗ್ಗೆ ಚಿಂತನೆಯುಳ್ಳ ಇಂದ್ರೇಶ್ ಸುಣಗಾರ ಅವರನ್ನು ಶಾಲೆಯ ಶಿಕ್ಷಕರು ಗ್ರಾಮದ ಮುಖಂಡರು ಸನ್ಮಾನ ಮಾಡುವ ಮುಖಾಂತರ ಗೌರವ ಸಲ್ಲಿಸಿದರು,
ಸನ್ಮಾನ ಸ್ವೀಕರಿಸಿ ಮಾತನಾಡಿದ ಇಂದ್ರೇಶ್ ಸುಣಗಾರ ಅವರು ಶಿಕ್ಷಣ ಅನ್ನುವುದು ಪ್ರತಿಯೊಬ್ಬ ಮನುಷ್ಯನ ಕತ್ತಲಿಗೆ ಬೆಳಕು ಇದ್ದಂತೆ ನಮ್ಮಿಂದ ಎಷ್ಟು ಆಗುತ್ತೋ ಅಷ್ಟು ಸಹಾಯ ಮಾಡುತ್ತೇವೆ, ಆದರೆ ಶಿಕ್ಷಕರು ಜವಾಬ್ದಾರಿಯುತವಾಗಿ ಮಕ್ಕಳನ್ನು ಶೈಕ್ಷಣಿಕ ವಾಗಿ ಬೌದ್ಧಿಕ ಮಟ್ಟವನ್ನು ಹೆಚ್ಚಿಸಬೇಕು ಮತ್ತು ಸ್ವಾತಂತ್ರ್ಯೋತ್ಸವದ ಈ ದಿನದಂದು ಸನ್ಮಾನಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸುತ್ತೇನೆ ಎಂದು ಇಂದ್ರೇಶ್ ಸುಣಗಾರ ಹೇಳಿದರು.