ಐತಿಹಾಸಿಕ ಬಹದ್ದೂರ್ ಬಂಡಿ ಕೋಟೆಯಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ಗಿಡ ನಾಟಿ ಮಾಡುವುದರ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು
ಕೊಪ್ಪಳ ತಾಲೂಕಿನ ಬಹದ್ದೂರ್ ಬಂಡಿ ಗ್ರಾಮದ ಕೋಟೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಿಂದ ಸಾಕಷ್ಟು ಯೋಜನೆಗಳು ಜನಪರವಾಗಿ ಕೆಲಸ ಮಾಡುತ್ತಿದ್ದು ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತವಾಗಿ ತ್ರಿವರ್ಣ ಧ್ವಜಗಳನ್ನು ನೀಡುವುದರ ಮುಖ್ಯೆನ ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿತ್ತು ಪ್ರಸ್ತುತ ಗಿಡಗಳನ್ನು ನಾಟಿ ಮಾಡುವುದರ ಮುಖೇನ ಪರಿಸರದ ಪೂರಕವಾದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುವುದು ಸ್ವಾತಂತ್ರ ಹೋರಾಟದ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ. ಕೋಟೆಯ ತಳಭಾಗದಿಂದ ಎಲ್ಲಾ ಖಾಲಿ ಜಾಗ ಇರುವಂತಹ ಮಣ್ಣಿನ ಜಾಗದಲ್ಲಿ ಗಿಡಗಳನ್ನು ನಾಟಿ ಮಾಡಲಾಯಿತು ಎಂದು ಯೋಜನಾಧಿಕಾರಿಗಳಾದ ರಘುರಾಮ್ ರವರು ತಿಳಿಸಿದರು.
ತಾಲೂಕ್ ಪಂಚಾಯಿತಿ ಸದಸ್ಯರಾದ ಚಾಂದ್ ಪಾಷಾ ರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಮಟ್ಟದ ಎಲ್ಲಾ ವರ್ಗದ ಜನರಿಗೆ ಉಪಯೋಗ ಮಾಡುವುದಲ್ಲದೆ ಪರಿಸರವಕ್ಕೆ ಪೂರಕವಾದ ಕೆಲಸಗಳನ್ನು ಮಾಡುತ್ತಿದೆ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಕೆಲಸ ಶ್ಲಾಘನೀಯ ಎಂದು ತಿಳಿಸಿದರು
ಯೋಜನೆಯ ಕೃಷಿ ಮೇಲ್ವಿಚಾರಕರ ಜಗದೀಶ್ ಬಿ ರವರು ಮಾತನಾಡಿ ಧರ್ಮಸ್ಥಳ ಗ್ರಾಮಾ ಅಭಿವೃದ್ಧಿ ಯೋಜನೆಯಿಂದ ಪೂಜ್ಯರ ಆಶಯದಂತೆ ತಾಲೂಕಿನಲ್ಲಿ 5000ಕ್ಕೂ ಗಿಡಗಳನ್ನು ನಾಟಿ ಮಾಡಿದ್ದು ಇದೊಂದು ಪರಿಸರಕ್ಕೆ ಕೊಡುಗೆ ಸರಿ ತಿಳಿಸಿದರು,
ವಲಯದ ಮೇಲ್ವಿಚಾರಕರು ಶ್ರೀ ವಿರೂಪಾಕ್ಷಿ ಸಿ ಎಸ್ ಸಿ ಸೇವಾದಾರ ಮಾರುತೇಶ ಸೇವ ಪ್ರತಿನಿಧಿಗಳಾದ ಶಿಲ್ಪ ಜಲಜಾಕ್ಷಿ ಸಂಗೀತ ಚೆನ್ನಮ್ಮ ಮತ್ತು ಸ್ವಸಹಾಯ ಪ್ರಗತಿ ಬಂದು ಸಂಘದ ಸದಸ್ಯರು, ಇಂಜಿನಿಯರಿಂಗ್ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು