
ಜಿಬಿ ನ್ಯೂಸ್ ಕನ್ನಡ ಸುದ್ದಿ: ಬೂದಗುಂಪ ಗ್ರಾಮ ಪಂಚಾಯಿತಿ ಮೀಸಲಾತಿಗೆ ಕೋರ್ಟ್ ನಿಂದ ಸ್ಟೆ ತರುವಲ್ಲಿ ರೈತ ಮುಖಂಡ ಕೊತ್ವಾಲ್ ಶರಣಪ್ಪ ಪ್ರಮುಖ ಸ್ಥಾನ ವಹಿಸಿದ್ದಾರೆ ಅದು ಕಾನೂನಾತ್ಮಕವಾಗಿ
ಇದನ್ನೇ ನೆಪ ಮಾಡಿಕೊಂಡು ಕೆಲವರು
ಇಸ್ಪೀಟ್ ಆಟದ ಕಿಂಗ್ ಪಿನ್ ಶರಣಪ್ಪಕೊತ್ವಾಲ್ ಎಂದು ಸಾಮಾಜಿಕ ಮಾಧ್ಯಮ ಬಳಸಿಕೊಂಡು ಸಾರ್ವಜನಿಕ ವಲಯದಲ್ಲಿ ಹರಿಬಿಟ್ಟು ಪರೋಕ್ಷವಾಗಿ ರೈತ ಮುಖಂಡ ಶರಣಪ್ಪ ಕೊತ್ವಾಲ್ ಅವರ
ತೇಜೋವಧೆಗೆ ಹುನ್ನಾರಗಳು ಮತ್ತು ಷಡ್ಯಂತರಗಳು ನಡೆದಿವೆ ಎಂದು ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ರಾಜ್ಯಾಧ್ಯಕ್ಷ ಶರಣೇಗೌಡ ಕೇಸರಹಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಜೀಜೀಬಿ ನ್ಯೂಸ್ ಕನ್ನಡ ವಾಹಿನಿ ಯೊಂದಿಗೆ ರಾಜ್ಯಾಧ್ಯಕ್ಷ ಶರಣೆಗೌಡ ಕೆಸರಹಟ್ಟಿ ಮಾತನಾಡಿದ್ದಾರೆ, ಬೂದಗುಂಪ ಮೀಸಲಾತಿ ಕುರಿತಂತೆ ಸ್ಟೇ ತಂದಿರುವುದು ಅಥವಾ ಅದರ ಹಿಂದೆ ಶರಣಪ್ಪ ಕೊತ್ವಾಲ್ ಇರುವುದು ಅದೇನೋ ಕಾನೂನು ಬಾಹಿರವಲ್ಲ, ಕಾನೂನಿನಲ್ಲಿ ಸ್ಟೇತರಲು ಎಲ್ಲರಿಗೂ ಅವಕಾಶವಿದೆ ಅದು ಸರ್ಕಾರಕ್ಕೆ ಹಾಗೂ ನ್ಯಾಯಾಲಯಕ್ಕೆ ಬಿಟ್ಟಂತ ವಿಷಯ, ಮುಂದಿನ ಆದೇಶ ಯಾವುದೇ ಬರಲಿ ಅದಕ್ಕೆ ಎಲ್ಲರೂ ತಲೆಬಾಗಲೇಬೇಕು ಆದರೆ ಮೀಸಲಾತಿ ಸ್ಟೇ ವಿಚಾರದಲ್ಲಿ ಯಾರು ಕೂಡ ಮಧ್ಯಪ್ರವೇಶಿಸಬಾರದು ಒಂದು ವೇಳೆ ಪ್ರವೇಶಿಸಿದರೆ ಅದು ಕೋರ್ಟ್ ಆಫ್ ಕಂಡಕ್ಟ್ ಆಗುತ್ತೆ ಅದನ್ನು ಕೂಡ ಇಲ್ಲಿ ಕೆಲವರು ಉಲ್ಲಂಘನೆ ಮಾಡಿದ್ದಾರೆ
ಹಾಗೂ ಬೂದುಗುಂಪ ವರವಲಯದಲ್ಲಿ ನಡೆಯುವ ಇಸ್ಪೀಟ್ ಜೂಜುಗಳಿಗೆ ಪಂಚಾಯಿತಿ ರಾಜಕೀಯ ವಿಚಾರವನ್ನು ಸೇರಿಸಿ ಉದ್ದೇಶಪೂರ್ವಕವಾಗಿ ನಮ್ಮ ಸಂಘದ ರಾಜ್ಯ ಉಪಾಧ್ಯಕ್ಷ ಶರಣಪ್ಪ ಕೊತ್ವಾಲ್ ವಿರುದ್ಧ ತೇಜೋವಧೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ
ಒಂದು ವೇಳೆ ಇದು ಹೀಗೆ ಮುಂದುವರೆದರೆ ನಾವು ಹೋರಾಟ ಹಮ್ಮಿಕೊಳ್ಳಬೇಕಾಗುತ್ತೆ, ಶರಣಪ್ಪ ಕೊತ್ವಾಲ್ ಅವರು ಈ ಹಿಂದೆ ಇಂತಹ ಜೂಜುಗಳಲ್ಲಿ ಇದ್ದಿರಬಹುದೇನೋ..? ಆದರೆ ನಮ್ಮ ರೈತ ಸಂಘಟನೆ ಸೇರಿದ ನಂತರ ಅಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಪಾಲ್ಗೊಂಡಿಲ್ಲ ಎನ್ನುವುದು ನಮಗೆ ನಂಬಿಕೆ ಇದೆ, ಆದರೂ ಸಾರ್ವಜನಿಕರು ಯಾರೇ ಆಗಲಿ ಶರಣಪ್ಪ ಕೊತ್ವಾಲ್ ಅವರು ಇತ್ತೀಚಿಗೆ ಇಸ್ಪೀಟ್ ಜೂಜು ಅಂತಹ ಕೆಲಸ ಕಾನೂನು ಬಾಹಿರ ಕಾರ್ಯಗಳಲ್ಲಿ ತೊಡಗಿರುವುದು ಸಾಕ್ಷಿ ಸಮೇತ ನಮಗೆ ಕೊಟ್ಟರೆ ನಾವು ಕೂಡಲೇ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದಿಂದ ಅವರನ್ನು ಉಚ್ಚಾಟನೆ ಮಾಡುತ್ತೇವೆ, ನಮ್ಮ ರೈತ ಸಂಘಟನೆ ಶಿಸ್ತು ಬದ್ಧವಾಗಿದೆ ಇಲ್ಲಿ ಯಾರು ಕೂಡ ಕಾನೂನು ಬಹಿರ ಚಟುವಟಿಕೆಗೆ ಮಾಡಲು ಅವಕಾಶ ನೀಡುವುದಿಲ್ಲ
ಸೂಕ್ತ ಸಾಕ್ಷಿಗಳಿಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಶರಣಪ್ಪ ಕೊತ್ವಾಲ್ ಅವರ ವಿರುದ್ಧ ಸುಳ್ಳು ಪ್ರಚಾರಗಳನ್ನು ಮಾಡಿ ತೇಜೋವಧೆಗೆ ಮುಂದಾದರೆ ನಾವು ಕಾನೂನು ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ಹೇಳಿದ್ದಾರೆ