ಈಡಿಗ ಸಮುದಾಯವನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ; ಪ್ರಣವಾನಂದ ಸ್ವಾಮೀಜಿ

ಈಡಿಗ ಸಮುದಾಯದ ಹಲವು ಪ್ರಭಾವಿ ನಾಯಕರನ್ನು ರಾಜಕೀಯವಾಗಿ ಮುಗಿಸಿದ ರೀತಿಯಲ್ಲಿ ವಿ.ಪ.ಸದಸ್ಯ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರನ್ನು ಮುಗಿಸಲು ಕಾಂಗ್ರೆಸ್‌ನಲ್ಲಿ ಹುನ್ನಾರ ನಡೆಯುತ್ತಿದೆ’ ಎಂದು ಚಿತ್ತಾಪುರದ ನಾರಾಯಣ ಗುರುಗಳ ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿಗಳು ಹೇಳಿದರು.

ಶುಕ್ರವಾರ ನಗರದ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಹಿಂದುಳಿದ, ಶೋಷಿತ ವರ್ಗಗಳ ಸಮಾವೇಶ ಪೂರ್ವಬಾವಿ ಸಭೆಗಳು ಆಗಮಿಸಿದ್ದ ಸ್ವಾಮೀಜಿಗಳು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಅವರು, ’ಈ ಕುರಿತು ನಮ್ಮ ಸಮಾಜದ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಸಭೆಗಳನ್ನು ನಡೆಸಲಾಗುತ್ತಿದೆ. ಈಡಿಗ ಸಮುದಾಯದ ಆರ್ಥಿಕ ಕುಲಕಸುಬಿಗೆ ಪೆಟ್ಟು ನೀಡುವ ಉದ್ದೇಶದಿಂದಾಗಿಯೇ 2004ರಲ್ಲಿ ಸೇಂದಿ, 2007ರಲ್ಲಿ ಸಾರಾಯಿ ಬಂದ್‌ ಮಾಡಿಸಿ ಈಗ ಸಮುದಾಯದ ನಾಯಕರಿಗೆ ರಾಜಕೀಯ ಆಸ್ತಿತ್ವ ಇಲ್ಲದಂತೆ ಮಾಡಲಾಗುತ್ತಿದೆ’ ಇದು ಆತಂಕವನ್ನು ಮೂಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಚುನಾವಣಾ ಸಮಯದಲ್ಲಿ ಪಕ್ಷಕ್ಕೆ ನಿಷ್ಠರಾಗಿದ್ದರೂ ಸ್ಥಾನಮಾನ ನೀಡದೆ ಅನ್ಯಾಯ ಮಾಡಲಾಗಿದೆ’ ಈ ಹಿಂದೆ ನಮ್ಮ ಸಮುದಾಯದ ನಾಯಕರಾದ ಬಂಗಾರಪ್ಪ, ಆರ್‌.ಎಲ್‌. ಜಾಲಪ್ಪ, ಜನಾರ್ದನ ಪೂಜಾರಿ
ಅವರನ್ನು ರಾಜಕೀಯವಾಗಿ ಮುಗಿಸಿದ ರೀತಿಯಲ್ಲಿಯೇ ಪ್ರಸ್ತುತ ಕಾಂಗ್ರೆಸ್ ನಲ್ಲಿ ಬಿ.ಕೆ. ಹರಿಪ್ರಸಾದ್ ಅವರನ್ನು ಮುಗಿಸಲು ಹುನ್ನಾರ ನಡೆಯುತ್ತಿದೆ’ ಎಂದು ದೂರಿದರು.

‘ಹರಿಪ್ರಸಾದ್ ಕಾಂಗ್ರೆಸ್‌ ಪಕ್ಷದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ಸಹ ಅವರಿಗೆ ಸಚಿವ ಸ್ಥಾನ ನೀಡಿಲ್ಲ ಯಾಕೆ..?
ಅವರಿಗೆ ಸಚಿವಸ್ಥಾನ ನೀಡುವಂತೆ ವರಿಷ್ಠರು ಶಿಫಾರಸು ಮಾಡಿದ್ದರು ಆದರೆ, ಅದನ್ನು ಇಲ್ಲಿ ಪರಿಗಣಿಸದಿರುವುದು ಸಮುದಾಯದವರಲ್ಲಿ ನೋವು ಇದೆ ಎಂದರು

Leave a Reply

Your email address will not be published. Required fields are marked *

error: Content is protected !!