ಉಳ್ಳಾಗಡ್ಡಿಮಠ – ಪಾಟೀಲ್ ಜಂಟಿ ಸಭೆ : ಮಹತ್ವದ ನಿರ್ಧಾರ
ಪಬ್ಲಿಕ್ ರೈಡ್ ನ್ಯೂಸ್
ಹುಬ್ಬಳ್ಳಿ : ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ಜರುಗಿದ ಸಭೆಯಲ್ಲಿ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಮುಖಂಡರು ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಸೇರಿದ್ದರು. ಪ್ರಮುಖವಾಗಿ ಕಾರ್ಯಕ್ರಮದಲ್ಲಿ ರಜತ್ ಉಳ್ಳಾಗಡ್ಡಿ ಮಠ ಹಾಗೂ ಅನಿಲ್ ಕುಮಾರ್ ರಾಜಿ ಸಂಧಾನ ನಡೆದಿದ್ದು.ಜೊತೆ ಜೊತೆಗೆ ಜಗದೀಶ್ ಶೆಟ್ಟರ್ ಬಿಜೆಪಿ ಸೇರಿರುವದರಿಂದ ತೆರವಾಗಿರುವ MLC ಸ್ಥಾನವನ್ನು ನೀಡಬೇಕು ಎಂದು ಎಂದು ಒಕ್ಕುರಲಿಂದ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಪಾಲಿಕೆ ಸದಸ್ಯರು ಹಾಗೂ ಹಿರಿಯ ಮುಖಂಡರು ತೀರ್ಮಾನಿಸಿದರು.ರಜತ್ ಉಳ್ಳಾಗಡ್ಡಿಮಠ ಈ ಬಗ್ಗೆ ಮಾತನಾಡಿ ಅನಿಲ್ ಕುಮಾರ್ ಪಾಟೀಲ್ ರಿಗೆ ಸೂಕ್ತ ಸ್ಥಾನಮಾನ ಸಿಗಬೇಕು ಎಂದು ಆಗ್ರಹಿಸಿದರು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಗಾಗಿ ಜಿದ್ದು ಸಾಧಿಸುತ್ತಾ ಪ್ರತ್ಯೇಕ ಬಣಗಳಾಗಿ ತೀರ್ಮಾನ ಸಂಘಟನೆ ಮಾಡುತ್ತಿದ್ದ ಇಬ್ಬರು ನಾಯಕರಿಂದ ಕ್ಷೇತ್ರದಲ್ಲಿ ನಾಯಕತ್ವದ ಕೊರತೆ ಉಂಟಾಗಿದ್ದು.ಕಾರ್ಯಕರ್ತರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.ಇನ್ನು ಕಳೆದ ಕೆಲ ದಿನಗಳಿಂದ ಇವರಿಬ್ಬರೂ ಮತ್ತೆ ಒಂದಾಗಿದ್ದು ಮುಂದಿನ ಲೋಕಸಭಾ ಚುನಾವಣೆಗೆ ಯಾರಿಗೆ ಟಿಕೆಟ್ ಸಿಕ್ಕರು ಒಗ್ಗಟ್ಟಿನಿಂದ ಸಂಘಟನೆ ಮಾಡುವ ನಿರ್ಣಯ ಕೂಡ ಸಭೆಯಲ್ಲಿ ನಡೆದಿದೆ.
ಇನ್ನು ಕಾರ್ಯಕ್ರಮದ ಉದ್ದಗಲಕ್ಕೂ ವೇದಿಕೆಯಲ್ಲಿ ಮಾತನಾಡಿದ ಮುಖಂಡರು ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು.ಶೆಟ್ಟರ್ ಹಾಗೂ ಜೋಶಿಗೆ ತಕ್ಕ ಪಾಠ ಕಲಿಸಬೇಕು ಎಂದು ಗುಟುರು ಹಾಕಿದ್ದು ವಿಶೇಷವಾಗಿತ್ತು.ಅಲ್ಲದೆ ಸೆಂಟ್ರಲ್ ಕ್ಷೇತ್ರದ ನಾಯಕತ್ವದ ರೂಪರೇಷೆ ಕೂಡ ಹಣಿಯಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಈಗಾಗಲೇ ರಜತ್ ಉಳ್ಳಾಗಡ್ಡಿಮಠ ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದು ಈ ಹಿನ್ನಲೆಯಲ್ಲಿ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ಅವಕಾಶ ವಂಚಿತರಾಗಿ ಇರಬಾರದು ಎನ್ನುವ ಕಾರಣಕ್ಕೆ MLC ಸ್ಥಾನಮಾನದ ಬೇಡಿಕೆ ಇಡಲಾಗಿದ್ದು.ಈ ನಿರ್ಣಯಕ್ಕೆ ಪಾಲಿಕೆ ಸದಸ್ಯರು ಸಹಿ ಮಾಡುವ ಮೂಲಕ ತಮ್ಮ ಬೆಂಬಲ ತೋರಿಸಿದ್ದಾರೆ.