ಜಿಬಿ ನ್ಯೂಸ್ ಕನ್ನಡ ಸುದ್ದಿ ವಿಜಯನಗರ: ನಿನ್ನೆ ಹಂಪಿ ಉತ್ಸವ ಅನಾವರಣಗೊಂಡಿದೆ, ಆದರೆ ರಾಜ್ಯದಲ್ಲಿ ಅದರ ಸದ್ದೇ ಇಲ್ಲ ಇಂದಿನ ಪತ್ರಿಕೆಗಳಲ್ಲಿ ಬಿಟ್ಟರೆ ಮತ್ತೆ ಎಲ್ಲೂ ಕೂಡ ಹಂಪಿ ಉತ್ಸವದ ಕಳೆ ಕಂಡು ಬರುತ್ತಿಲ್ಲ ಹಂಪಿ ಉತ್ಸವ ಕರ್ನಾಟಕದಲ್ಲಿಯೇ ಅತ್ಯಂತ ಸಾಂಸ್ಕೃತಿಕವಾದ ಮತ್ತು ವಿಶೇಷವಾದ ಉತ್ಸವವಾಗಿತ್ತು.
ಲಕ್ಷಾಂತರ ಜನ ಬಂದು ಸೇರುವಂತಹ ಹಂಪಿ ಉತ್ಸವ ಇಂದು ಸಾವಿರಾರು ಜನರಿಗೆ ಬಂದು ನಿಂತಿದೆ ಯಾಕೆಂದರೆ ಹಂಪಿ ಉತ್ಸವ ಮಾಡುವಲ್ಲಿ ಜಿಲ್ಲಾ ಆಡಳಿತ ಮತ್ತು ಸರ್ಕಾರಗಳು ವಿಫಲಗೊಳ್ಳುತ್ತಿವೆ ಈ ಹಿಂದೆ ಜನಾರ್ಧನ ರೆಡ್ಡಿ ಅವರು ಬಳ್ಳಾರಿ ರಾಜಕಾರಣದಲ್ಲಿ ಇದ್ದಾಗ ಹಂಪಿ ಉತ್ಸವ ಅಂದರೆ ಜಗತ್ತಿನಾದ್ಯಂತ ಜನ ಬಂದು ಕಣ್ಣು ತುಂಬಿಸಿಕೊಂಡು ಹೋಗುತ್ತಿದ್ದರು ಅಷ್ಟೊಂದು ಜಗಮಗಿಸುವ ಉತ್ಸವವನ್ನಾಗಿ ಮಾಡಿದ್ದು ಜನಾರ್ಧನ್ ರೆಡ್ಡಿ ಅವರು.
ಒಂದೊಂದು ಸಣ್ಣ ಕಲ್ಲಿಗೂ ಕೂಡ ಬೆಳಕು ನೀಡುವ ಮೂಲಕ ಇಡೀ ವಿಜಯನಗರದ ವೈಭವವನ್ನು ದುಪ್ಪಟ್ಟು ಗೊಳಿಸಿದ್ದರು ಜನಾರ್ದನ ರೆಡ್ಡಿ, ಒಂದು ರೀತಿಯಲ್ಲಿ ಇತಿಹಾಸದಲ್ಲಿ ನಡೆಯುತ್ತಿದ್ದ ಉತ್ಸವದ ರೀತಿಯಲ್ಲಿ ವಿಜಯನಗರದ ಉತ್ಸವ ನಡೆಸಿದ ಜನಾರ್ಧನ ರೆಡ್ಡಿ ಯಾವಾಗ ಸಾಮಾಜಿಕ ಜೀವನದಿಂದ ಹಿಂದೆ ಸರಿದರೋ ಅದರಂತೆ ಹಂಪಿ ಉತ್ಸವ ಕೂಡ ಕಳೆಗುಂದುತಲೇ ಹೋಯಿತು ಆದರೆ ಮತ್ತೆ ಹಂಪಿ ಉತ್ಸವವನ್ನು ಜನರ ಆಶಯಕ್ಕೆ ತಕ್ಕಂತೆ ನಡೆಸುವಲ್ಲಿ ಇಲ್ಲಿಯವರೆಗೂ ಬಂದ ಸರ್ಕಾರಗಳು ವಿಫಲವಾಗುತ್ತಲೇ ಇವೆ. ಮತ್ತೆ ಹಂಪಿ ಉತ್ಸವ ಯಶಸ್ವಿ ಆಗಬೇಕು ಅಂದರೆ ಜನಾರ್ಧನ ರೆಡ್ಡಿಯೇ ಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ, ಆದರೆ ಜನಾರ್ಧನ ರೆಡ್ಡಿ ಅವರು ಬಳ್ಳಾರಿ ಮತ್ತು ಹೊಸಪೇಟೆಯಿಂದ ಅಂತರ ಕಾಯ್ದುಕೊಂಡು ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಸ್ಪರ್ಧಿಯಾಗಿ ಕಣಕ್ಕೆ ಇಳಿದಿದ್ದಾರೆ,
ಈ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿಯವರ ಗಮನ ಗಂಗಾವತಿ ಭಾಗದಲ್ಲಿ ಮಾತ್ರ ಕೇಂದ್ರೀಕೃತವಾಗಿದೆ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಅಂಜನಾದ್ರಿ ಬೆಟ್ಟದ ಸಂಪೂರ್ಣ ಅಭಿವೃದ್ಧಿ ಮತ್ತು ಜಗತ್ತಿನಾದ್ಯಂತ ಅಂಜನಾದ್ರಿ ಬೆಟ್ಟವನ್ನು ಪ್ರಸಾರಗೊಳಿಸುವಲ್ಲಿ ಜನಾರ್ಧನ ರೆಡ್ಡಿ ಅವರು ಯೋಜನೆಗಳನ್ನ ರೂಪಿಸಿಕೊಂಡಿದ್ದಾರೆ.
ಹಂಪಿ ಉತ್ಸವಕ್ಕೆ ಬಾರದ ಗಣ್ಯರು:
ಹಂಪಿ ಉತ್ಸವದಲ್ಲಿ ಕಾಂಗ್ರೆಸ್ ಶಾಸಕರು ಸೇರಿ ಮುಖಂಡರು ಸುಳಿಯದಿರುವುದು ಕಂಡು ಬಂತು. ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿಯ ಕಾಂಗ್ರೆಸ್ ಶಾಸಕರು, ಹರಪನಹಳ್ಳಿ ಬಿಜೆಪಿ ಶಾಸಕ, ಎಂಎಲ್ಸಿ ವೈ.ಎಂ.ಸತೀಶ್ ಅವರ ಗೈರುಹಾಜರಿ ಎದ್ದುಕಾಣುತ್ತಿತ್ತು. ವಿದ್ಯಾರಣ್ಯ ಮಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ರಾಜವಂಶಸ್ಥರಾದ ಕೃಷ್ಣದೇವರಾಯ, ಹಂಪಿ ಹೇಮಕೂಟದ ಜಗದ್ಗುರು, ಕೊಟ್ಟೂರು ಬಸವಲಿಂಗ ಸ್ವಾಮೀಜಿ ಗೈರುಹಾಜರಾಗಿದ್ದರು.
ಹೆಸರೇ ಇಲ್ಲದ ವೇದಿಕೆ: ಹಂಪಿ ಉತ್ಸವದ ನಾಲ್ಕು ವೇದಿಕೆಗಳ ಪೈಕಿ ಮುಖ್ಯ ವೇದಿಕೆಯಾದ ಗಾಯತ್ರಿ ಪೀಠದಲ್ಲಿ ವೇದಿಕೆಯ ಹೆಸರು ಎಲ್ಲಿಯೂ ಕಾಣಲಿಲ್ಲ. ಬೃಹತ್ ವೇದಿಕೆಯಲ್ಲಿ ಹಂಪಿ ಉತ್ಸವದ ಲೋಗೋ, ಸಿಎಂ ಬೊಮ್ಮಾಯಿ, ಸಚಿವರಾದ ಶಶಿಕಲಾ ಜೊಲ್ಲೆ ಆನಂದ್ ಸಿಂಗ್ ಅವರ ಭಾವಚಿತ್ರಗಳು ಮಾತ್ರ ಇದ್ದವು. 50 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಿದ್ದರೂ 5 ಸಾವಿರ ಜನರೂ ಭಾಗವಹಿಸಲಿಲ್ಲ.