ಜೀಬಿ ನ್ಯೂಸ್ ಕನ್ನಡ ಕೊಪ್ಪಳ ಸುದ್ದಿ: ತಾಲೂಕಿನ ಬೂದುಗುಂಪಾ ಸಮೀಪದ ಕೆರಹಳ್ಳಿ ಗ್ರಾಮದಲ್ಲಿ ನಾಳೇ ಜ.27 ರಂದು ಶ್ರೀ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಉದ್ಘಾಟನಾ ಸಮಾರಂಭ ನಡೆಯುವುದು ಎಂದು ಜಿಲ್ಲಾ ಹಾಲುಮತ ಕುರುಬ ಸಮಾಜದ ಮುಖಂಡ ಹನುಮಂತಪ್ಪ ಕೌದಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಾಗಿನೆಲೆ ಕನಕಗುರು ಪೀಠದ ನಿರಂಜನಾಂದಪುರಿ ಸ್ವಾಮೀಜಿ, ತಿಂಥಣಿ ಬ್ರಿಡ್ಜ್ ಕನಕಗುರು ಪೀಠದ ಸಿದ್ಧರಾಮಾನಂದಪುರಿ, ಮೈಸೂರಿನ ಶಿವಾನಂದ ಸ್ವಾಮೀಜಿ, ಹೊಸದುರ್ಗದ ಈಶ್ವರಾನಂದ ಸ್ವಾಮೀಜಿ, ಹಾಲವರ್ತಿಯ ಶಿವಸಿದ್ಧೇಶ್ವರರು, ಹುಲಿಜಂತಿಯ ಮಾಳಿಂಗರಾಯ ಮಹಾರಾಯರು, ಬಸಾಪಟ್ಟಣದ ಸಿದ್ಧಯ್ಯ ತಾತನವರು ವಹಿಸುವರು.
ಮಾಜಿ ಸಚಿವ ಹೆಚ್.ಎಂ.ರೇವಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ಮೈಸೂರು ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ಧರಾಮಯ್ಯ, ಭೈರತಿ ಸುರೇಶ, ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ರಾಜಶೇಖರ್ ಹಿಟ್ನಾಳ, ಬಿಜೆಪಿ ಮುಖಂಡ ಸಿ.ವಿ ಚಂದ್ರಶೇಖರ್ ಸೇರಿದಂತೆ ಅನೇಕ ಅತಿಥಿಗಳು ಭಾಗವಹಿಸಲಿದ್ದಾರೆ ಎಂದು ಹನುಮಂತಪ್ಪ ಕೌದಿ ತಿಳಿಸಿದರು. ಬಾಜಾ ಭಜಂತ್ರಿ, ಡೊಳ್ಳು ಕುಣಿತ, ಮಂಗಲ ವಾದ್ಯಗಳು, ಆರತಿ ಕಳಸಗಳೊಂದಿಗೆ ಭಕ್ತ ಕನಕದಾಸರ ಮೂರ್ತಿಯನ್ನು ಅನಾವರಣಗೊಳಿಸಲಾಗುವುದು. ಸುದ್ದಿಗೋಷ್ಠಿಯಲ್ಲಿ ಹಾಲುಮತ ಸಮಾಜದ ಮುಖಂಡ ಕುಬೇರ ಮಜ್ಜಗಿ, ಗ್ರಾ.ಪಂ ಸದಸ್ಯ ರಮೇಶ ಸಿಂದೋಗಿ, ಶಿವಕುಮಾರ ದನದರ, ಮಲ್ಲಯ್ಯ ಉಡಮಕಲ್ , ಮಹಾಲಿಂಗಪ್ಪ ದನದರ, ಸಿದ್ಧರಾಮಪ್ಪ ಭಟ್ಟರ್, ಸುರೇಶ ಗಗ್ರಿ ಇತರರು ಇದ್ದರು.