ರಾಘವೇಂದ್ರ ಅರಕೇರಿ:-
ಜಿಬಿ ನ್ಯೂಸ್ ಕನ್ನಡ ಸುದ್ದಿ; ಕೊಪ್ಪಳ ತಾಲೂಕು ಬಸಾಪುರ ಗ್ರಾಮದಲ್ಲಿ ಇಂದು ಕರುನಾಡು ಯುವ ಪ್ರಜಾ ವೇದಿಕೆ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದ ಕೆ ರಾಘವೇಂದ್ರ ಹಿಟ್ನಾಳ್ ಶಾಸಕರು ಕರುನಾಡು ಯುವ ಪ್ರಜಾ ವೇದಿಕೆ ಇಂದು ಬಸಾಪುರ ಗ್ರಾಮದಲ್ಲಿ ಉತ್ತಮ ಕಾರ್ಯ ಸೇವೆಯಲ್ಲಿ ತೊಡಗಿರುವುದು ತುಂಬಾ ಒಳ್ಳೆಯದು ಈ ಸಂಘಟನೆ ಪ್ರತಿ ಜಿಲ್ಲೆ ಹಾಗೂ ತಾಲೂಕು ಗ್ರಾಮ ದಲ್ಲಿ ಇನ್ನೂ ಹೆಚ್ಚಿಗೆ ಬೆಳೆಯಲಿ ಹಾಗೂ ಕನ್ನಡಪರ ಮಾಡುತ್ತಿರುವಂತ ಹೋರಾಟ ಕನ್ನಡಕ್ಕಾಗಿ ಬೆಳೆಸುತ್ತಿರುವ ಅಂತ ಸಂಘಟನೆ ಇದು ಆಗಿದೆ ಈ ಸಂಘಟನೆ ಕುರಿತು ಯಾವುದೇ ಸಮಾರಂಭ ಇರಲಿ ನಾನು ಬರುತ್ತೇನೆ ನಿಮ್ಮ ಜೊತೆ ನಾನು ಇದ್ದೇನೆ ಕನ್ನಡ ನೆಲ ಜಲ ಭಾಷೆ ಉಳಿಸುವಂತಹ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ಜನಾರ್ದನ್ ಹುಲಿಗಿ ರಾಜ್ಯದ್ಯಕ್ಷರಾದ ರಾಜ ಭಕ್ಷಿ ಸಂಸ್ಥಾಪಕರಾದ ಬಿಬಿ ಜಾನ್ ಎಂ ಹೊಂಬಳ ಹಾಗೂ ತಾಲೂಕ ಅಧ್ಯಕ್ಷರಾದ ರೆಹಮಾನ್ ಸಾಬ್ ಹಾಗೂ ಕರುನಾಡುವ ಯುವ ಪ್ರಜಾ ವೇದಿಕೆ ಸರ್ವ ಅಧ್ಯಕ್ಷರು ಸದಸ್ಯರು ಹಾಗೂ ಗ್ರಾಮದ ಗುರುಹಿರಿಯರು ಆಚರಿಸಲಾಯಿತು.