ಜಿಬಿ ನ್ಯೂಸ್ ಕನ್ನಡ ಸುದ್ದಿ: ಬೂದಗುಂಪ ತಾಲೂಕ ಪಂಚಾಯಿತಿ ಭಾಗದ ಬಿಜೆಪಿ ಶಕ್ತಿ ಆಗಿದ್ದ ವೆಂಕಟೇಶ್ ಜಬ್ಬಲಗುಡ್ಡ ಕೆ ಆರ್ ಪಿಪಿಪಿ ಸೇರ್ಪಡೆ,
ಇತ್ತೀಚೆಗೆ ಜನಾರ್ಧನ ರೆಡ್ಡಿಯವರು ಕೆ ಆರ್ ಪಿ ಪಿ ಪಕ್ಷವನ್ನು ಸ್ಥಾಪನೆ ಮಾಡಿದಾಗಿ ನಿಂದ ಆ ಪಕ್ಷಕ್ಕೆ ಸೇರ್ಪಡೆ ಆಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಅದೇ ಸಾಲಿನಲ್ಲಿ ಬಿಜೆಪಿಯ ಪ್ರಬಲ ಶಕ್ತಿಗಳೆಂದೇ ಗುರುತಿಸಿಕೊಂಡಿದ್ದ ಹಲವಾರು ಯುವಕರು ಕೆ ಆರ್ ಪಿ ಪಿ ಸೇರ್ಪಡೆಯಾಗಿದ್ದು ಹಸಿಯಾಗಿರುವಾಗಲೇ ಬೂದಗುಂಪ, ಜಬ್ಬಲಗುಡ್ಡ, ಹಳೆಕುಮಟ, ನಾಗೇಶನ ಹಳ್ಳಿ, ಚಂದ್ರಗಿರಿ, ಕುಕನಪಳ್ಳಿ, ಇಂದರಗಿ, ಇಂದಿರಾನಗರ ಈ ಹಳ್ಳಿಗಳ ಹಿಡಿತ ಹೊಂದಿರುವಂತಹ ವೆಂಕಟೇಶ್ ಜಬ್ಬಲ್ಗುಡ್ಡ ಬಿಜೆಪಿಯ ಪ್ರಮುಖರಲ್ಲಿ ಒಬ್ಬರಾಗಿದ್ದರು ಅವರು ಕೂಡ ಇಂದು ಬೆಂಗಳೂರಿನಲ್ಲಿ ಕೆಆರ್‌ಪಿಪಿ ಸೇರ್ಪಡೆ ಆಗುವ ಮೂಲಕ ಕೆ KRPP ಗೆ ಬಲ ತಂದಿದ್ದಾರೆ,
ವೆಂಕಟೇಶ್ ಜಪಲಗುಡ್ಡ ಅವರು ಒಬ್ಬ ವಿನಯ ಶೀಲ ವ್ಯಕ್ತಿತ್ವವನ್ನು ಹೊಂದಿರುವಂತಹ ವ್ಯಕ್ತಿ ಸಾಕಷ್ಟು ಜನ ಯುವಕರನ್ನು ಸೆಳೆದಿರುವಂತಹ ವ್ಯಕ್ತಿ, ಮತ್ತು ಬೂದುಗುಂಪ ಜಬ್ಬಲಗುಡ್ಡ ಭಾಗದಲ್ಲಿ ಅನೇಕ ಯುವ ಮಿತ್ರರನ್ನು ಮತ್ತು ಸಾಕಷ್ಟು ಜನರ ಸ್ನೇಹ ಇರುವಂತಹ ಜನನಾಯಕ ಅಂದರೆ ತಪ್ಪಾಗುವುದಿಲ್ಲ.
ಆದರೆ ಬಿಜೆಪಿ ನಾಯಕರ ಧೋರಣೆ ಮತ್ತು ಅವರ ರೀತಿ ನೀತಿಗಳಿಗೆ ಬೇಸತ್ತು ಇಂದು ಜನಾರ್ಧನ ರೆಡ್ಡಿ ಅವರ ಸಮ್ಮುಖದಲ್ಲಿ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ KRPP ಸೇರ್ಪಡೆಯಾಗಿದ್ದಾರೆ, ಇದರಿಂದ ಸಂಪೂರ್ಣ ತುಂಬಿದ ಕೊಡವಾಗುತ್ತಿದೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅನ್ನಬಹುದು.
ವೆಂಕಟೇಶ್ ಜಬ್ಬಲಗುಡ್ಡ ಅವರು ಸೇರ್ಪಡೆಗೊಂಡ ಕಾರ್ಯಕ್ರಮದಲ್ಲಿ ಯಮನೂರು ಚೌಡ್ಕಿ, ದುರ್ಗಪ್ಪ ಆಗೊಲಿ, ನಾಗರಾಜ್ ಚಳಗೇರಿ, ಶಿವಕುಮಾರ್ ಆದೋನಿ, ಮನೋಹರ ಗೌಡ, ಚನ್ನವೀರ ಗೌಡ, ವಿರೇಶ ಸುಳೆಕಲ್, ಗೋವಿಂದರಾಜ್ ಬೂದಗುಂಪಾ, ಮತ್ತಿತರರು ಭಾಗವಹಿಸಿದ್ದರು