ಜಿಬಿ ನ್ಯೂಸ್ ಕನ್ನಡ ಸುದ್ದಿ ಗಂಗಾವತಿ: ಬಳ್ಳಾರಿಯ ಜನತೆ ನೀಡಿದ್ದ ಅಧಿಕಾರವನ್ನು ಅಲ್ಲಿಯ ಸಂಪನ್ಮೂಲವನ್ನೆಲ್ಲ ಲೂಟಿ ಮಾಡಲು ಬಳಸಿಕೊಂಡಿರುವ ಜನಾರ್ದನ ರೆಡ್ಡಿಯವರು ಕೆ ಆರ್ ಪಿ ಪಿ ಪಕ್ಷವನ್ನು ಸ್ಥಾಪನೆ ಮಾಡುವ ಮೂಲಕ 2023ರ ವಿಧಾನಸಭಾ ಚುನಾವಣೆಗೆ ಗಂಗಾವತಿಯಿಂದ ಸ್ಪರ್ಧೆ ಮಾಡಲು ಬಯಸಿದ್ದಾರೆ.

ಈ ಮೂಲಕ ನಮ್ಮ ಕೊಪ್ಪಳ ಜಿಲ್ಲೆಯ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ನಮ್ಮ ಗಂಗಾವತಿಯ ಮತದಾರರು ರಡ್ಡಿಯ ಈ ಸಂಪನ್ಮೂಲ ಲೂಟಿಯ ದುರುದ್ದೇಶವನ್ನು ಅರಿಯದಷ್ಟು ಮೂರ್ಖರೇನಲ್ಲ. ರಡ್ಡಿಯ ನಂಬಿಕೆ ಗಂಗಾವತಿಯಲ್ಲಿ ಸಂಪೂರ್ಣ ಹುಸಿಯಾಗಲಿದೆ.
ಚಿನ್ನದ ಲಂಕೆಯ ಅಧಿಪತಿಯನ್ನೇ ಧೂಳಿಪಟ ಮಾಡಿದ ನಾಡಾಗಿರುವ ನಮ್ಮ ಗಂಗಾವತಿಯ ಪ್ರತಿಯೊಬ್ಬ ಮತದಾರನೂ ಕೊಪ್ಪಳ ಸಂಪನ್ಮೂಲ ರಕ್ಷಣೆಗಾಗಿ ಕಂಕಣ ಬದ್ಧನಾಗಿ ನಿಲ್ಲಲಿದ್ದಾನೆ.-ಎಂದು ಆಮ್ ಆದ್ಮಿ ಪಾರ್ಟಿಯ ಗಂಗಾವತಿ ತಾಲೂಕ ಅಧ್ಯಕ್ಷರು ಮತ್ತು ನ್ಯಾಯವಾದಿಗಳು ಆಗಿರುವ ಶರಣಪ್ಪ ಸಜ್ಜಿಹೊಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.