ಜಿಬಿ ನ್ಯೂಸ್ ಕನ್ನಡ ಸುದ್ದಿ ಗಂಗಾವತಿ: ಇತ್ತೀಚಿಗೆ ಗಂಗಾವತಿಯ ದರ್ಗಾ ಒಂದಕ್ಕೆ ಜನಾರ್ದನ ರೆಡ್ಡಿ 6 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ ಅನ್ನುವ ಸುದ್ದಿ ಕೆಲ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಜನಾರ್ದನ್ ರೆಡ್ಡಿ ಅವರು ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸೂಚನೆಯನ್ನು ಈಗಾಗಲೇ ನೀಡಿದ್ದಾರೆ ಮತ್ತು ಅನೇಕ ಮಾತುಕತೆಗಳು ಆದರೂ ಕೂಡ ಯಾವುದೇ ಕಾರಣಕ್ಕೂ ನಾನು ಗಂಗಾವತಿ ಕ್ಷೇತ್ರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ ಅನ್ನುವುದು ಬಿಜೆಪಿ ಪಕ್ಷದ ಕೆಲವು ಮುಖಂಡರಿಂದ ತಿಳಿದು ಬಂದಿದೆ,
ಬಿಜೆಪಿಯಿಂದ ಸ್ಪರ್ಧಿಸುತ್ತಾರೋ ಅಥವಾ ತಮ್ಮದೇ ಪಾರ್ಟಿಯಿಂದ ಸ್ಪರ್ಧಿಸುತ್ತಾರೋ ಅಥವಾ ಪಕ್ಷೇತರರಾಗಿ ಸ್ಪರ್ಧಿಸುತ್ತಾರೋ ಗೊತ್ತಿಲ್ಲ ಗಂಗಾವತಿಯಲ್ಲಿ ಸ್ಪರ್ಧೆ ಮಾಡುವುದು ಖಚಿತ ಅನ್ನುವ ನಿಟ್ಟಿನಲ್ಲಿ ಮಂದಿರ ಮಸೀದಿ ಚರ್ಚ್ ಗಳಿಗೆ ಟೆಂಪಲ್ ರನ್ ಮಾಡುತ್ತಿದ್ದಾರೆ ಜನಾರ್ಧನ್ ರೆಡ್ಡಿ.
ಈ ಹಿನ್ನೆಲೆಯಲ್ಲಿ ಗಂಗಾವತಿಯ ದರ್ಗಾ ಒಂದಕ್ಕೆ ಭೇಟಿ ಕೊಟ್ಟಾಗ ಅಲ್ಲಿಯ ಮುಸ್ಲಿಂ ಮುಖಂಡರು ಮತ್ತು ಭಕ್ತಾದಿಗಳು ದರ್ಗಾದ ಅಭಿವೃದ್ಧಿಗೆ ದೇಣಿಯನ್ನು ಕೊಡಬೇಕು ಅಂತ ಕೇಳಿಕೊಂಡಿದ್ದಾರೆ ಆಗ ರೆಡ್ಡಿ ಸುಮಾರು ಎಷ್ಟು ಆಗಬಹುದು ಅಂತ ಕೇಳಿದಾಗ ಆರು ಕೋಟಿ ರೂಪಾಯಿಗಳ ಎಸ್ಟಿಮೆಟ್ ತೋರಿಸಲಾಗಿದೆ, ಒಂದು ರೀತಿಯಲ್ಲಿ ಮುಜುಗರಕ್ಕೆ ಒಳಗಾದ ರೆಡ್ಡಿ ಆಯ್ತು ಕೊಡುತ್ತೇನೆ ಅಂತ ಹೇಳಿ ಅಲ್ಲಿಂದ ಬಂದಿದ್ದಾರೆ ಈಗ ಇದೇ ವಿಷಯ ಸೋಶಿಯಲ್ ಮೀಡಿಯಾದಲ್ಲಿ ರೆಡ್ಡಿ ಯ ವಿರುದ್ಧ ಹಿಂದೂ ಕಾರ್ಯಕರ್ತರು ಮುಗಿಬಿದ್ದಿದ್ದಾರೆ, ದರ್ಗಾ ಕೆ ಆರು ಕೋಟಿ ಕೊಡುವ ರೆಡ್ಡಿ ಬಡವರಿಗೆ ಕೊಟ್ಟಿದ್ದರೆ ಎಷ್ಟೋ ಅನುಕೂಲವಾಗುತ್ತಿತ್ತು ಅನ್ನುವ ಮತ್ತು ವಿವಿಧ ರೀತಿಯಲ್ಲಿ ನೆಟ್ಟಿಗರು ರೆಡ್ಡಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗಂಗಾವತಿಯಲ್ಲಿ ಅಂಜನಾದ್ರಿ ಪರ್ವತ ಇರುವುದರಿಂದ ಆಂಜನೇಯ ಹುಟ್ಟಿದ ಸ್ಥಳ ಎಂದೇ ಖ್ಯಾತಿ ಪಡೆದಿದೆ ಹಿನ್ನೆಲೆಯಲ್ಲಿ ಗಂಗಾವತಿ ಕ್ಷೇತ್ರದ ತುಂಬಾ ಹಿಂದುತ್ವದ ಕಾಡ್ಗಿಚ್ಚು ಹರಡಿ ನಿಂತಿದೆ,
ಈ ರೀತಿಯ ವಾತಾವರಣ ಇರುವ ಹೊತ್ತಲ್ಲಿ ಜನಾರ್ಧನ ರೆಡ್ಡಿಯವರು ಮುಸ್ಲಿಂ ಸಮುದಾಯದ ದರ್ಗಾ ಕೆ ಆರು ಕೋಟಿ ಕೊಟ್ಟಿರುವುದು, ಹಿಂದೂ ಸಮುದಾಯದ ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.