ಜಿಬಿ ನ್ಯೂಸ್ ಕನ್ನಡ ಸುದ್ದಿ: ದಿನಾಂಕ 14.11.2022 ರ ಸೋಮವಾರ ಗಂಗಾವತಿ ನಗರದ ವಾಡ್೯ 35 ರ ವಿರುಪಾಪುರ ತಾಂಡಾದ 3 ಬಡ ಕುಟುಂಬವು ಕಬ್ಬು ಕಟಾವಿಗೆಂದು ಅಕ್ಟೊಬರ್ 31 ರಂದು ಮೈಸೂರಿನ .ಆರ್.ಪೇಟೆ ಗೆ ಟಾಟಾ ಏಸ್ ವಾಹನದಲ್ಲಿ ತರಳಿದ ಸಂಧರ್ಭದಲ್ಲಿ ಅಪಘಾತಕ್ಕಿಡಾಗಿ, ಒಬ್ಬರು ಸಾವಿಗಿಡಾಗಿ, ಉಳಿದವರು ಚಿಕಿತ್ಸೆ ಪಡೆದು ತಾಂಡಾಕ್ಕೆ ಹಿಂದುರಿಗಿದ್ದರು.
ತಾಂಡಾಕ್ಕೆ ಆಗಮಿಸಿದ ಸುದ್ದಿ ತಿಳಿದು ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರು ಹಾಗೂ ಅಪಘಾತ ಪರಿಸ್ಥಿತಿ ಯಲ್ಲಿ ಮುತುವರ್ಜಿ ವಹಿಸಿದ್ದ ತಾಂಡಾ ಅಭಿವೃದ್ದಿ ನಿಗಮ ಬೆಂಗಳೂರು ಮುಖ್ಯ ವ್ಯವಸ್ಥಾಪಕರಾದ ಚಂದ್ರಾನಾಯಕ ಅವರು ತಾಂಡಾಕ್ಕೆ ಬೇಟಿ ನೀಡಿ ಗಾಯಳುಗಳ ಆರೋಗ್ಯ ವಿಚಾರಿಸಿದರು,
ನಂತರ ಅಪಘಾತದಲ್ಲಿ ಸಾವಿಗಿಡಾದ ಲಕ್ಷ್ಮಣ ತಂ ದೇವಪ್ಪ (22) ಗೆ ಹಾಗೂ ಗಾಯಾಳುಗಳಾದ ಅವರ ಅಣ್ಣ ಮತ್ತು ಅತ್ತಿಗೆ 1 ಲಕ್ಷದ ಚೆಕ್ ನೀಡಿ, ಸ್ವಯಂ ಉದ್ಯೋಗ ಮಾಡಲಿಕ್ಕೆ 2 ಲಕ್ಷ ಸಬ್ಸಿಡಿ, ಹಾಗೂ 1 ಲಕ್ಷ ನೇರ ಸಾಲಕ್ಕೆ ಆದೇಶಿಸಿದರು.
ಗಂಬೀರ ಗಾಯಗಿಳಿಗೆ ತುತ್ತಾದ ಎರಡನೆ ಕುಟುಂಬ ಮಂಗಳಪ್ಪ (35) ಅವರ ಹೆಂಡತಿ ಮಗಳಿಗೆ, 1 ಲಕ್ಷ 75 ಸಾವಿರ ಚೆಕ್ಕ್ ವಿತರಣೆ ಮಾಡಿ, 1 ಲಕ್ಷ ನೇರ ಸಾಲ ಸೌಲಭ್ಯಕ್ಕೆ ಆದೇಶಿಸಿದರು.
ಗಂಭೀರ ಗಾಯಗಳಿಗೆ ತುತ್ತಾದ ಚಂದ್ರಪ್ಪ (28) ಕುಟುಂಬದ ಓಟ್ಟು 6 ಸದಸ್ಯರಿಗೆ 3 ಲಕ್ಷದ ಚೆಕ್, ಜೊತೆಗೆ 1 ಲಕ್ಷದ ನೇರ ಸಾಲ ಸೌಲಭ್ಯ ನೀಡಲು ಆದೇಶಿಸಿದರು.
ಈ ಸಂಧರ್ಭದಲ್ಲಿ ಗಂಗಾವತಿ ಕೃಷಿ ಇಲಾಖೆ ತಾಲೂಕ ಅಧಿಕಾರಿ ಪ್ರಕಾಶ್ ರಾತೋಡ್, ತಾಂಡಾ ಅಭಿವೃದ್ಧಿ ನಿಗಮ ಕೊಪ್ಪಳದ ಎಪ್.ಡಿ.ಸಿ ರವಿ ನಾಯಕ ಚೌವ್ಹಾನ್, ಮುಖಂಡರಾದ ದೇವಪ್ಪ, ಆರೋಗ್ಯ ಸಮಿತಿ ಸದಸ್ಯರಾದ ವಿರೇಶ್ ಸೂಳೆಕಲ್, ನಗರ ಮಂಡಲ ಎಸ್ಸಿ ಮೋರ್ಚ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಜಾದವ್ , ಹನುಮಂತಪ್ಪ ಮೇಸ್ತ್ರಿ, ರವಿಚಂದ್ರ ಮೇಸ್ತ್ರಿ, ಮಂಜುನಾಥ, ಶಿವಪ್ಪ ಜಾಗೊ, ಪಾಂಡು ನಾಯಕ, ಸಂತೋಷ್ , ಕೃಷ್ಣ ನಾಯಕ, ಲಕ್ಕಪ್ಪ ಹಾಗೂ ವಾರ್ಡಿನ ಯುವಕರು ಉಪಸ್ಥಿತರಿದ್ದರು.