ಹಿಂದೂ ಪದ ಬಳಕೆ ಚರ್ಚೆಯ ವಿಷಯವಲ್ಲ ; ವಾಯ್.ಎನ್.ಗೌಡರ್ ಸ್ಪಷ್ಟನೆ

GBnewskannada ಕೊಪ್ಪಳ :ನಮ್ಮ ಸಂವಿಧಾನದಲ್ಲಿ ಪ್ರತಿಯೊರ್ವ ಭಾರತೀಯರಿಗೂ ವಾಕ್ ಸ್ವಾತಂತ್ರ್ಯವನ್ನು ಕಲ್ಪಿಸಿಲಾಗಿದೆ. ಅದರಂತೇ ವಿಷಯವಾರು, ಪದಗಳ ಬಳಕೆ ಸೇರೆದಂತೆ ಅನೇಕ ಚರ್ಚೆ, ಸಂವಾದಗಳನ್ನು ನಡೆಸುವುದು ತಪ್ಪಲ್ಲವೆಂದು ಹಿರಿಯ ಚಿಂತಕ, ಕೊಪ್ಪಳ ಪ್ರಗತಿಪರ ಸಂಘಟನೆಗಳ ಮುಖಂಡ, ಮಾಜಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ವಾಯ್.ಎನ್.ಗೌಡರ್ ಸ್ಪಷ್ಟಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೌಡರ್, ಮಾಜಿ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಸತೀಶ ಜಾರಕಿಹೋಳಿ ಅವರು ಹಿಂದೂ ಧರ್ಮದ ಕುರಿತು ಯಾವುದೆ ಅವಹೇಳನಕಾರಿ, ಅಶ್ಲೀಲವಾಗಿ ಭಾಷಣ ಮಾಡಿಲ್ಲ. ಅವರೇಳಿದ್ದು ಹಿಂದೂ ಪದದ ಅರ್ಥವನ್ನು ಬೇರೆಯ ಭಾಷೆಯಲ್ಲಿ ಇರುವುದನ್ನು ಹೇಳಿದ್ದಾರೆ. ಜಾರಕಿಹೋಳಿ ಅವರಿಗೆ ಈ ದೇಶದ ಸಕಲ ಧರ್ಮಿಯರನ್ನು ಪ್ರೀತಿಸುವ ಮನಸ್ಸುಳ್ಳವರು, ವಯಕ್ತಿಕವಾಗಿ ಯಾರ ಭಾವನೆಗೂ ಧಕ್ಕ ಬಾರದಂತೆ ಭಾಷಣ ಮಾಡಿದ್ದಾರೆ. ಈ ಪದದ ಕುರಿತು ಸರ್ಕಾರ ಬೇಕಿದ್ದರೆ ಸಂಶೋಧನೆಯನ್ನು ನಡೆಸಲು ಸಮಿತಿಯನ್ನು ರಚಿಸಲಿ ಎಂದರು.

ಜಾರಕಿಹೋಳಿಯವರ ಕುರಿತು ರಾಜಕೀಯ ಬಣ್ಣ ಬಳಿಯುವುದು ಮತ್ತು ತೇಜೋವದೆ ಮಾಡುವುದು ತಕ್ಕುದಲ್ಲ. ಒಂದು ವೇಳೆ ನೀಡಿದ ಹೇಳಿಕೆ ಸತ್ಯವಾಗಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವರು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಮುಖಂಡರಾದ ಟಿ.ರತ್ನಾಕರ, ಶಿವಪುತ್ರಪ್ಪ ಗುಮಗೇರಿ, ಯಮನೂರಪ್ಪ ಗೋರೆಲಕೊಪ್ಪ, ಕೆ.ಎಸ್.ಮೈಲಾರಪ್ಪ ವಕೀಲರು, ರಾಮಣ್ಣ ಕಲ್ಲಣ್ಣನವರ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!