GBnewskannadaಬೆಂಗಳೂರು:ಗಡಿಯಲ್ಲಿ ಸೈನಿಕರು ದೇಶ ರಕ್ಷಣೆಗಾಗಿ ಅಗಲಿರುಳು ಸೇವೆ ಮಾಡುತ್ತಿರುವ ಅವರ ಸೇವೆಯನ್ನು ವರ್ಣಿಸಲಾಗದು ಅದೇ ರೀತಿಯಾಗಿ ನಾಡಿನೊಳಗೆ ಸಮಾಜದಲ್ಲಿ ಶಾಂತಿ ಭದ್ರತೆಗಾಗಿ ಸೌಹಾರ್ದತೆಗಾಗಿ ಹಗಲಿರುಳು ಆರಕ್ಷಕರ ವೃತ್ತಿಗೆ ಸಮಾನವಾಗಿ ಗೃಹರಕ್ಷಕ ದಳ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ಲಕ್ಷಾಂತರ ಜನ ಗೃಹ ರಕ್ಷಕ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರಕ್ಷಕ ಮತ್ತು ಗೃಹರಕ್ಷಕ ಇಲಾಖೆಗಳಿಂದ ರಾಜ್ಯ ಮತ್ತು ದೇಶದಲ್ಲಿ ಸಾರ್ವಜನಿಕರ ರಕ್ಷಣೆಗೆ ವರ್ಷಪೂರ್ತಿಯಾಗಿ ಕಾರ್ಯನಿರ್ವಹಿಸುತ್ತಿವೆ, ಅವಿರತವಾಗಿ ಶ್ರಮಿಸುತ್ತಿವೆ. ಆರಕ್ಷಕ ಇಲಾಖೆಯಲ್ಲಿ ಉತ್ತಮ ಸಾಧನೆ ಮಾಡಿ ಇಲಾಖೆ ಗೌರವ ಮತ್ತು ಶಾಂತಿ ಭದ್ರತೆಯಲ್ಲಿ ಕಾರ್ಯ ದಕ್ಷತೆ ಮೆರೆದ ಆರಕ್ಷಕರಿಗೆ ಕೊಡಲ್ಪಡುವ ರಾಷ್ಟ್ರಪತಿ ಪದಕ ಇದೀಗ ಗೃಹರಕ್ಷಕ ದಳದಲ್ಲಿ ಕಾರ್ಯದಕ್ಷತೆ ಮೆರೆದು ಕಾರ್ಯನಿರ್ವಹಿಸುತ್ತಿರುವ ಹೋಂ ಗಾರ್ಡ್ ಗಳಿಗೆ ಕೊಡಲ್ಪಡುತ್ತಿರುವುದು ನಿಜವಾಗಿಯೂ
ಶ್ಲಾಘನೀಯವಾಗಿದೆ. ಶ್ರೀ ಹನುಮಂತರಾಯ ತಂದೆ ಈರಣ್ಣ ಈಳಿಗೆರ್ ಹುಬ್ಬಳ್ಳಿ ಇವರಿಗೆ ಇಂದು ದಿನಾಂಕ 7.11.2022 ರಂದು ಬೆಂಗಳೂರಿನ ರಾಜಭವನದಲ್ಲಿ ರಾಷ್ಟ್ರಪತಿ ಪದಕ ಲಭಿಸಿದೆ ಹನುಮಂತರಾಯ ಇವರು ಗೃಹರಕ್ಷಕ ದಳದಲ್ಲಿ ಪ್ರಾರಂಭದಿಂದಲೂ ಕರ್ತವ್ಯ ನಿಷ್ಠೆ ಮತ್ತು ಕಾರ್ಯಧ್ಯಕ್ಷತೆ ಮೆರೆದು ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಪ್ರಸ್ತುತ ಗೃಹರಕ್ಷಕ ದಳದಲ್ಲಿ ಮೇಜರ್ ಹುದ್ದೆಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು ಇವರಿಗೆ ರಾಷ್ಟ್ರಪತಿ ಪದಕವನ್ನು ವಿತರಿಸಿ ಗೌರವಿಸಿದೆ ಹನುಮಂತರಾಯ ಇವರಿಗೆ ರಾಷ್ಟ್ರಪತಿ ಪದಕ ದೊರೆತಿರುವುದು ಅವರ ಸಹೋದ್ಯೋಗಿಗಳು ಮತ್ತು ಕುಟುಂಬ ಬಂದು ಮಿತ್ರರಲ್ಲಿ ಅಪಾರ ಸಂತೋಷವನ್ನು ತಂದಿದೆ ಜೊತೆಗೆ ಶುಭಾಶಯಗಳನ್ನು ಕೋರಿದ್ದಾರೆ.