GBnewskannada:ಗಂಗಾವತಿ 05
ಗಂಗಾವತಿ ತಾಲೂಕಿನ ಆನೆಗುಂದಿ ಭಾಗದ ಹನುಮನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯ ಶಿಕ್ಷಕ ಮುತ್ತಪ್ಪ ಹಾಗೂ ಸುರೇಶ್, ನಿಂಗರಾಜ ಎನ್ನುವ ಹಿಂದೂ ಯುವಕರ ಮೇಲೆ.ಉದ್ದೆಶ ಪೂರ್ವಕವಾಗಿ ಕೆಲ ಮುಸ್ಲಿಂ ಯುವಕರು ಅವರ ಮೇಲೆ ಮಾರಣಾಂತಿಕ ದಾಳಿ ಮಾಡಲಾಗಿ, ಗಾಯಾಳುಗಳನ್ನ ಸ್ಥಳಿಯರ ನೆರವಿನೊಂದಿಗೆ ಗಂಗಾವತಿಯ ಉಪವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಸುದ್ದಿ ತಿಳಿದ ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರು ಖುದ್ದು ಆಸ್ಪತ್ರೆಗೆ ಬೇಟಿ ನೀಡಿ , ಗಾಯಾಳು ಗಳಿಗೆ ಆತ್ಮಸ್ತೈರ್ಯ ನೀಡಿ ಗಲಾಟೆಯ ಬಗ್ಗೆ ಮಾಹಿತಿ ಪಡೆದರು.ನಂತರ ವೈದ್ಯರಾದ ಈಶ್ವರ ಸವಡಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ತಿಳಿಸಿ, DYSP ರುದ್ರೇಶ ಉಜ್ಜನಕೊಪ್ಪ ಅವರಿಗೆ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿ, ತಪ್ಪಿತಸ್ಥರನ್ನ ಕೂಡಲೆ ಬಂದಿಸಲು ಆದೇಶಿಸಿರು.
ಈ ಸಂಧರ್ಭದಲ್ಲಿ ಮಾಜಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಮಯ್ಯ ಸ್ವಾಮಿ, ಮುಖಂಡರಾದ ಸಂತೋಷ್ ಕೆಲೋಜಿ, ಯುವಮೋರ್ಚ ಜಿಲ್ಲಾ ಅಧ್ಯಕ್ಷರಾದ ಯಮನೂರು ಚೌಡ್ಕಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅರಿಕೇರಿ, ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು