ಪಂಪಾನಗರ ವಿರೂಪಾಕ್ಷೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆಯಿಂದ 10 ಲಕ್ಷ.. ಶಾಸಕ ಪರಣ್ಣ ಮುನವಳ್ಳಿ

GBnewskannadaಗಂಗಾವತಿ:  ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರದ ಪಂಪಾನಗರ ವಾಡ್೯ ನಂ 1 ರಲ್ಲಿ ಮುಜರಾಯಿ ಇಲಾಖೆಯ ಅನುದಾನದಲ್ಲಿ ಅಂದಾಜು ಮೊತ್ತ10 ಲಕ್ಷ ರೂ ಗಳಲ್ಲಿ ಶ್ರೀವಿರುಪಾಕ್ಷೇಶ್ವರ ದೇವಸ್ಥಾನದ ಜೀರ್ಣೊದ್ದಾರ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ಪರಣ್ಣ ಮುನವಳ್ಳಿ ಅವರು ಗುರುವಾರದಂದು ನೆರವೇರಿಸಿದರು,
ಬಳಿಕ ಅವರು ಮಾತನಾಡಿ ಕ್ಷೇತ್ರ ವ್ಯಾಪ್ತಿಯ ಪ್ರಾಚೀನ ಕಾಲದ ಐತಿಹಾಸಿಕ ಹಿನ್ನೆಲೆ ಪರಂಪರೆ ಹೊಂದಿದ ದೇವಸ್ಥಾನಗಳ ಅಭಿವೃದ್ಧಿಗಾಗಿ ಮುಜರಾಯಿ ಇಲಾಖೆ ಸಾಕಷ್ಟು ಪ್ರಮಾಣದ ಅನುದಾನವನ್ನು ಕಲ್ಪಿಸಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ದೇವಸ್ಥಾನದ ಕಾಂಪೌಂಡ್ ನಿರ್ಮಾಣ ಹಾಗೂ ಇತರೆ ಅಭಿವೃದ್ಧಿಗಾಗಿ 10 ಲಕ್ಷವೆಚ್ಚದಲ್ಲಿ ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ನಗರ ನೀರು ಸರಬರಾಜು ಯೋಜನೆಯ ಕಾಮಗಾರಿ ಅಪೂರ್ಣಗೊಂಡ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಪರಣ್ಣವರು ಸರ್ಕಾರದ ಆದೇಶದ ಅನ್ವಯ ನಾಲ್ಕು ಜೋನ್ಗಳ ವ್ಯಾಪ್ತಿಯ ನೀರು ಸರಬರಾಜು ನಗರಸಭೆ ಹಸ್ತಾಂತರಿಸಿಕೊಳ್ಳಲಾಗಿದೆ ಇದರಿಂದ ಅವರು ನಡೆಸಿದ ಕಾಮಗಾರಿಗಳ ಗುಣಮಟ್ಟ ಇವುಗಳೆಲ್ಲವನ್ನು ಪರಿಗಣಿಸಿ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ಪುನಃ ದುರಸ್ತಿಗೆ ಸೂಚಿಸಿ ಉಳಿದ ಕಾಮಗಾರಿಗಳ ಕುರಿತಂತೆ ಉಳಿದ ಮೊತ್ತವನ್ನು ಗುತ್ತೇದಾರರಿಗೆ ಪಾವತಿಸಲಾಗುವುದೆಂದು ತಿಳಿಸಿದರು

ಒಳಚರಂಡಿ ಕಾಮಗಾರಿ ಮಂದಗತಿಯಿಂದ ಸಾಗಿದ್ದು ಪೂರ್ಣವಾಗಿ ನೆರವೇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.ನಂತರ ದೇವಸ್ಥಾನದ ವತಿಯಿಂದ ಶಾಸಕರನ್ನ ವಾರ್ಡ್ ಸದಸ್ಯ ವಾಸುದೇವ್ ನವಲಿ ದೇವಸ್ಥಾನದ ಪ್ರಧಾನ ಅರ್ಚಕ ಪ್ರಸನ್ನ ಜೋಶಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಮಹಾಲಿಂಗಪ್ಪ ಬನ್ನಿಕೊಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನರಸಿಂಗ್ ರಾವ್ ಕುಲಕರ್ಣಿ, ನಗರಸಭೆ ಸದಸ್ಯರಾದ ಪರಶುರಾಮ ಮಡ್ಡೇರ್ , ಶರಭೋಜಿರಾವ್,ಮಾಜಿ ನಗರಸಭೆ ಸುರೇಶ ಕೊಲ್ಕಾರ್,ಪ್ರಸಾದ್,ಈರಣ್ಣ ನಾಗಲಿಕರ್,ಮೌನೇಶ ಬಡಗೇರ್ ಬ್ರಾಹ್ಮಣ ಸಮಾಜದ ಅಧ್ಯಕ್ಷರು ರಾಘವೇಂದ್ರ ಮೇಗುರು, ನಗರ ಪ್ರದಾಧಿಕಾರ ಸದಸ್ಯ ಬಸವರಾಜ, ಮಾಂತಗುಂಡ, ಪ್ರಸಾದ‌ ಹಲ್ಟಿ ಹಾಗೂ ವಾರ್ಡಿನ ಹಿರಿಯರು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ
error: Content is protected !!