GBnewskannada ಬಿಜಾಪುರ : ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘವು ರಾಜ್ಯಾದ್ಯಂತ ರೈತಪರ ಹೋರಾಟಗಳ ಮೂಲಕ ರಾಜ್ಯಾದ್ಯಂತ ಖ್ಯಾತಿಯನ್ನು ಪಡೆಯುತ್ತಿದೆ. ಇತ್ತೀಚಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತ ಸಂಘದ ರಾಜ್ಯ ಅಧ್ಯಕ್ಷರು ಸೇರಿದಂತೆ ಕೆಲವು ರೈತ ಸಂಘದ ಹೆಸರಲ್ಲಿ ಗುರುತಿಸಿಕೊಂಡಿರುವವರು ಭ್ರಷ್ಟಾಚಾರದ ಅಸಲಿ ಮುಖವಾಡ ರಾಜ್ಯದ ಪ್ರಮುಖ ವಾಹಿನಿಗಳ ಮೂಲಕ ಬಯಲಾಗಿವೆ. ರೈತ ಸಂಘಟನೆಗಳ ಮೇಲೆ ಜನಗಳ ಮೇಲೆ ವಿಶ್ವಾಸ ಕಳೆದುಕೊಳ್ಳುವ ಸಂಧಿಗ್ಧ ಸ್ಥಿತಿಯಲ್ಲಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘವು ರಾಜ್ಯ ವ್ಯಾಪ್ತಿಯಲ್ಲಿ ಜನಪರ ಕಾಳಜಿ ಹೊತ್ತು ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ತಾಲೂಕಗಳಲ್ಲಿ ಹಾಗೂ ನೂರಾರು ಗ್ರಾಮಗಳಲ್ಲಿ ಗ್ರಾಮ ಘಟಕಗಳ ಉದ್ಘಾಟನೆಗಳ ಮೂಲಕ ರೈತ ಪರ ಕಾಳಜಿಗೆ ಮತ್ತು ರೈತಪರ ಹೋರಾಟಕ್ಕೆ ಮುಂದಾಗಿದೆ. ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಮೇಲೆ ರಾಜ್ಯದ ವಿವಿಧ ಮೂಲೆಗಳಲ್ಲಿರುವ ರೈತ ರು ವಿಶ್ವಾಸಾರ್ಹತೆಯನ್ನು ತೋರಿಸುತ್ತಿದ್ದಾರೆ.ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ನಿಡೋಣಿ ಗ್ರಾಮದಲ್ಲಿ ನೂರಾರು ರೈತರಗಳ ಮೂಲಕ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಗ್ರಾಮ ಘಟಕ ಉದ್ಘಾಟಿಸಲಾಯಿತು. ಉದ್ಘಾಟನೆ
ಸಮಯದಲ್ಲಿ ಮಹಿಳಾ ರಾಜ್ಯಧ್ಯಕ್ಷರು ಸರೋಜಾ ಬಸವರಾಜ್. ರಾಜ್ಯ ಉಪಾಧ್ಯಕ್ಷರಾದ ಶರಣಪ್ಪ ಕೊತ್ವಲ್.ಬಿಜಾಪುರ ಜಿಲ್ಲಾಧ್ಯಕ್ಷರು.ಮೋತಿರಾಮ ಲಮಾಣಿ.ಮತ್ತು ಬಿಜಾಪುರ ಮಹಿಳಾ ಉಪಾಧ್ಯಕ್ಷರು. ರೀಟಾ. ಮತ್ತು ಜಿಲ್ಲಾ ಪದಾಧಿಕಾರಿಗಳು ಬಿಜಾಪುರ ತಾಲ್ಲೂಕ ಪದಾಧಿಕಾರಿಗಳು ಇನ್ನು ಹಲವಾರು ಮುಖಂಡರು ಭಾಗಿಯಾಗಿದ್ದರು.