ಕಳಪೆ ಕಾಮಗಾರಿಗಳ ನೆಪ.ಸಿಈಓ ತೇಜೋವಧೆ ಪ್ಲಾನಿಂಗ್..! ಹೋರಾಟದ ಎಚ್ಚರಿಕೆ ನೀಡಿದ ಶರಣಪ್ಪ ಕೊತ್ವಾಲ್

GBnewskannada ಕೊಪ್ಪಳ:ಜಿಲ್ಲೆಯಲ್ಲಿ ದಕ್ಷ ಅಧಿಕಾರಿಗಳು ಕರ್ತವ್ಯ ಪಾಲನೆ ಮಾಡುವುದು ಅಷ್ಟು ಸುಲಭವಾಗಿ ಇಲ್ಲಿ ಇಲ್ಲ. ಯಾಕಂದರೆ ದಕ್ಷ ಅಧಿಕಾರಿಗಳು ತಮ್ಮ ಪಾಡಿಗೆ ತಾವು ಕರ್ತವ್ಯ ಪಾಲನೆ ಮಾಡಲು ರಾಜಕಾರಣಿಗಳ ಬಿಡುವುದಿಲ್ಲ ಯಾಕೆಂದರೆ ರಾಜಕಾರಣಿಗಳು ಅಧಿಕಾರಿಗಳನ್ನು ಕೈಗೊಂಬೆಗಳಂತೆ ಮಾಡಿಕೊಳ್ಳುತ್ತಾ ಅವರಿಗೆ ಬೇಕಾದದ್ದನ್ನು ಸಾಧಿಸುವ ಛಲ.. ವಿರೋಧಿಸಿದವರ ತಲೆದಂಡದ ಫಲ… ಇದು ಜಿಲ್ಲೆಯಲ್ಲಿ ನಡೆಯುತ್ತಿರುವ ಅಧಿಕಾರಿಗಳ ಮತ್ತು ರಾಜಕಾರಣಿಗಳ ನಡುವೆ ಜಟಾಪಟಿ ಎನ್ನಬಹುದು. ಇಷ್ಟೇ ಅಲ್ಲದೆ ಜಿಲ್ಲೆಯಲ್ಲಿ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿವೆ ಕೆಲವು ಅಸಲಿ ಸಂಘಟನೆಗಳು ಮತ್ತು ಅಸಲಿ ಮುಖವಾಡ ಧರಿಸಿದ ನಕಲಿ ಸಂಘಟನೆಗಳು ಜಿಲ್ಲೆಯಲ್ಲಿ ಬೇರು ಬಿಟ್ಟಿವೆ. ಅಸಲಿ ಸಂಘಟನೆಗಳು ಜನಪರ ಕಾಳಜಿಯಿಂದ ಭ್ರಷ್ಟ ಅಧಿಕಾರಿಗಳ ಪಾಲಿಗೆ ಸಿಂಹ ಸ್ವಪ್ನವಾಗಿ ಕಾಡಿದರೆ..! ನಕಲಿ ಸಂಘಟನೆಗಳು ದಕ್ಷ ಅಧಿಕಾರಿಗಳ ಪಾಲಿಗೆ ನಿತ್ಯ ಕಿರುಕುಳವನ್ನುಂಟು ಮಾಡುತ್ತಿವೆ..! ಹೌದು….. ಇದಕ್ಕೆ ನಾವು ಹಲವು ಉದಾಹರಣೆಗಳನ್ನು ನೀಡಬಹುದಾಗಿದೆ ಕೊಪ್ಪಳ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ಮೊದಲ ಮಹಿಳಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಫೌಜಿಯ ತರನ್ನಮ್ ಇಲ್ಲಿ ಅಧಿಕಾರ ಸ್ವೀಕರಿಸಿದಾಗ ನಿಂದಲೂ ಅವರ ಉತ್ತಮವಾದ ಸೇವೆಯನ್ನು ಜಿಲ್ಲೆಯ ಜನತೆಗೆ ನೀಡಿದ್ದಾರೆ ಸ್ಟ್ರಿಕ್ ಆಫೀಸರ್ ಎಂದೆ ಹೆಸರು ಮಾಡಿದ್ದಾರೆ. ಕರ್ತವ ಲೋಪ ಮಾಡಿರುವ ಅಧಿಕಾರಿಗಳನ್ನು ಯಾವುದೇ ಮುಲಾಜಿ ಇಲ್ಲದೆ ಅಮಾನತ್ತುಗೊಳಿಸಿದ್ದಾರೆ. ಜಿಲ್ಲಾ ಪಂಚಾಯಿತಿಯ ಸಿಇಓ ಅವರ ಅಧಿಕಾರದ ಕಾರ್ಯ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಕಾಮಗಾರಿಗಳ ವಿಚಾರದಲ್ಲಿ ಕಟ್ಟುನಿಟ್ಟಾಗಿ ಅಧಿಕಾರ ಚಲಾವಣೆ ಮಾಡುತ್ತಿದ್ದಾರೆ. ಯಾವುದೇ ರಾಜಿ ಇಲ್ಲದೆ ಸರ್ಕಾರದ ಹಣ ಪೋಲಾಗದಂತೆ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಜಿಲ್ಲೆಯ ಕೆಲವು ಸಂಘಟನೆಗಳು ಜಿಲ್ಲಾ ಪಂಚಾಯಿತಿಯ ವ್ಯಾಪ್ತಿಗಳ ಪಡುವ ಕಾಮಗಾರಿಗಳ ವಿಚಾರದಲ್ಲಿ ತಲೆದೂರಿಸಿ ವಿನಾಕಾರಣ ಕಾಮಗಾರಿಗಳು ಸರ್ಕಾರದ ನಿರ್ದೇಶನದಂತೆ ನಡೆಯುತ್ತಿಲ್ಲ ಎಂದು ಸುಳ್ಳು ಆರೋಪಗಳನ್ನು ಮಾಡುತ್ತಾ ಸುಳ್ಳು ದೂರುಗಳನ್ನು ನೀಡುತ್ತಾ ಆ ಮೂಲಕ ಸಿಇಒ ಅವರಿಗೆ ಬ್ಲಾಕ್ ಮೇಲ್ ತಂತ್ರಗಾರಿಕೆ ಉಪಯೋಗಿಸುತ್ತಿದ್ದಾರೆ, ಹಗಲು ದರೋಡೆ ನಕಲಿ ಸಂಘಟನೆಗಾರರು. ಲೈನ್ ಡಿಪಾರ್ಟ್ಮೆಂಟ್ ನ ಕಾಮಗಾರಿಗಳ ಹೆಸರಲ್ಲಿ ಅಧಿಕಾರಿಂದ ಹಣ ಸುಲಿಗೆ ಮಾಡಲು ಯತ್ನಿಸುತ್ತಿರುವ ಗೋಮುಖ ವ್ಯಾಘ್ರ ಹೋರಾಟಗಾರರನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಉಪಾಧ್ಯಕ್ಷರಾದ ಶರಣಪ್ಪ ಕೊತ್ವಾಲವರು ಆಗ್ರಹ ವ್ಯಕ್ತಪಡಿಸಿದ್ದಾರೆ. ದಕ್ಷ ಮಹಿಳಾ ಅಧಿಕಾರಿಯಾಗಿರುವ ಫೌಜಿಯ ತರನ್ನಮ್ ಅವರು ಜಿಲ್ಲೆಯಲ್ಲಿ ಕಳೆದ ಎರಡು ಮೂರು ವರ್ಷಗಳಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಜಿಲ್ಲೆಯ ಜನತೆ ಸೇವೆ ಮಾಡಿದ್ದಾರೆ. ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಸರ್ಕಾರದ ಹಣ ವ್ಯರ್ಥವಾಗದಂತೆ ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಆದರೆ ಕೆಲವು ಸಂಘಟನೆಕಾರರು ಮತ್ತು ರಾಜಕಾರಣಿಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿರುವ ಫೌಜಿಯ ತರನ್ನಮ್ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಷಡ್ಯಂತರ ನಡೆಸಿ ಅವರ ತೇಜೋವಧೆ ಮತ್ತು ಘನತೆಗೆ ಧಕ್ಕೆ ತರುವಂತಹ ಕುತಂತ್ರಗಳನ್ನು ನಡೆಸುತ್ತಿರುವುದನ್ನು ನಾವು ಸಹಿಸುವುದಿಲ್ಲ ಅಂತಹ ವಿರುದ್ಧ ಮುಂದಿನ ದಿನಮಾನಗಳಲ್ಲಿ ನಮ್ಮ ಸಂಘಟನೆಯಿಂದ ಕಾನೂನಾತ್ಮಕ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *

ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ
error: Content is protected !!