ಕುಕನೂರು : ಮಾಜಿ ವಿಧಾನ ಪರಿಷತ್ ಸದಸ್ಯ ಎಚ್ ಆರ್ ಶ್ರೀನಾಥ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಲಬುರ್ಗಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಯೇ? ಹೀಗೊಂದು ಸಾಧ್ಯಸಾಧ್ಯತೆಯ ಬಗ್ಗೆ ಅಭಿಮಾನಿ ಬಳಗದ ಮುಖಂಡ ಶರಣಪ್ಪ ಸುಳಿವು ನೀಡಿದ್ದಾರೆ.
ಎಚ್ ಜಿ ರಾಮುಲು ಅವರನ್ನು ನಾಲ್ಕು ಬಾರಿ ಎಂಪಿ ಮಾಡುವ ಮುಖಾಂತರ ಯಲಬುರ್ಗಾ ದಿಂದ ಅತಿ ಹೆಚ್ಚು ಮತಗಳನ್ನು ತಮ್ಮ ತಂದೆಯವರಿಗೆ ನೀಡಿದ್ದೇವೆ ಆದ್ದರಿಂದ ನೀವು ಯಲಬುರ್ಗಾ ಕ್ಷೇತ್ರದಿಂದ ಸ್ಪರ್ಧಿಸಬೇಕು ನಾವು ನಿಮ್ಮ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು HRG ಅಭಿಮಾನಿಗಳು ಒತ್ತಾಯ ಪಡಿಸುತ್ತಿದ್ದಾರೆ ಅನ್ನುವ ಸುದ್ದಿ ಎಲ್ಲಾ ಕಡೆಯೂ ಹರಡುತ್ತಿದೆ |
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರೀನಾಥ್ ಬೆಂಬಲಿಗ ಶರಣಪ್ಪ ರಾಂಪೂರು ಪತ್ರಿಕಾ ಗೋಷ್ಠಿಯಲ್ಲಿ ಮಾತಾನಾಡಿ ಸ್ವತಃ ಎಚ್ ಆರ್ ಎಸ್ ಮುಂದಿನ 2023 ರ ವಿಧಾನಸಭಾ ಚುನಾವಣೆಯಲ್ಲಿ ಯಲಬುರ್ಗಾ ದಿಂದ ಸ್ಪರ್ಧಿಸುವುದು ಬಹುತೇಕ ಖಚಿತ ವಾಗಿದೆ ಎಂದರು. ಈ ಬಗ್ಗೆ ಸ್ವತಃ ಸುದ್ದಿಗೋಷ್ಠಿಯ ಸಭೆಯಿಂದಲೇ ಶ್ರೀನಾಥ್ ಅವರಿಗೆ ಮೊಬೈಲ್ ಕರೆ ಮಾಡಿದಾಗ, ಯಲಬುರ್ಗಾ ಕ್ಷೇತ್ರದ ಜನತೆಯ ಒತ್ತಾಯದ ಮೇರೆಗೆ ಹಾಗೂ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದರೆ ಯಲಬುರ್ಗಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ ಎಂದು ಶರಣಪ್ಪ ಸ್ಪಷ್ಟನೆ ನೀಡಿದ್ದಾರೆ.