ಸೋಮೇಶ ಕುಲಕರ್ಣಿ !
ಈ ಸಿನಿಮಾ ಈಗಾಗಲೇ ಕರ್ನಾಟಕದ ಮೂಲೆಮೂಲೆಗಳಲ್ಲಿ ಜನರನ್ನು ಸೆಳೆಯುತ್ತಿದೆ ನಾನು ಹೇಳಹೊರಟಿರುವುದು ಅದಲ್ಲಾ , ಜೊತೆಗೆ ರಿಷಬ್ ಶೆಟ್ಟಿ ಕ್ಲೈಮ್ಯಾಕ್ಸ್ ನಲ್ಲಿ ಅದ್ಭುತವಾಗಿ ನಟಿಸಿದ್ದಾರೆ ಎಂದು ಮೆಚ್ಚುಗೆ ಬರುತ್ತಿದೆ ವಾಸ್ತವವಾಗಿ ಅದು ನಟನೆಯೇ ಅಲ್ಲಾ ಅದು ದೈವ ಆವಾಹನೆಯ ನೈಜ ಶಕ್ತಿಯ ರೂಪ.
ಈಗ ವಿಷಯಕ್ಕೆ ಬರುತ್ತೆನೆ ಆ ಅಚ್ಯುತ್ ಕುಮಾರ್ ಎಂಬ ಜನಪ್ರಿಯ ನಟ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದನಲ್ಲಾ ಉದಾಹರಿಸಿ ಕಾರ್ಲ್ ಮಾರ್ಕ್ಸ್ , ಪೆರಿಯಾರ್ , ಅಂಬೇಡ್ಕರ್.
ಈ ಸಿನಿಮಾದಲ್ಲಿ ಅಂಬೇಡ್ಕರ್ ಹೊರತುಪಡಿಸಿ ಅವರಿಬ್ಬರೂ ಇಲ್ಲ ಬದಲಿಗೆ ಅಂಬೇಡ್ಕರ್ ಜೊತೆಗೆ ನಾವು ಬುದ್ಧ , ಬಸವ , ಕದ್ಮುಲ್ ರಂಗಾರಾವ್ , ಪುಲೆ , ನಾರಾಯಣ ಗುರುಗಳನ್ನು ಮುಂತಾದವರನ್ನು ಕಾಣಬಹುದು. ಏಕೆಂದರೆ ಅಚ್ಯುತ್ ಕುಮಾರ್ ಹೇಳುವುದು ರಿಷಬ್ ಶೆಟ್ಟಿಯವರಲ್ಲಿ ಬಂಡಾಯಗಾರ ಇದ್ದಾನಂತೆ ಈ ಕಮ್ಮಿನಿಷ್ಠೆಯವರ ಹಣೆಬರವೇ ಇಷ್ಟು ಬಂಡಾಯ ಎಂದರೇನು ಗೊತ್ತಾ ? ಒಂದು ಸಂಸ್ಥಾನಕ್ಕೋ , ಮನೆತನಕ್ಕೋ ನಿಷ್ಠನಿದ್ದವನು ಅದರ ವಿರುದ್ಧ ಪ್ರತಿಭಟಿಸುವುದು ಅಂತ ಅರ್ಥ ಅದೇ ಅರ್ಥದಲ್ಲೇ ಬ್ರಿಟಿಷರು ಭಾರತೀಯರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಬಂಡಾಯ ( ಸಿಪಾಯಿ ದಂಗೆ ) ಅಂತ ಕರೆದರು. ಅದನ್ನೇ ಕಮ್ಮಿನಿಷ್ಠೆಯವರು ಮಹಾಪ್ರಸಾದ ಅಂತ ಮುಂದುವರೆಸಿದರು.
1857 ರಲ್ಲಿ ನಡೆದದ್ದು ಬಂಡಾಯ ಅಲ್ಲಾ ಅದು ತನ್ನ ಪೂರ್ವಜರ ವಾರಸುದಾರಿಕೆಯ ತನ್ನದೇ ಭೂಮಿಗಾಗಿ ಅತಿಕ್ರಮಣಕಾರರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟ. ಸ್ವಾತಂತ್ರ್ಯ ಹೋರಾಟಕ್ಕೂ ಬಂಡಾಯಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಎಂಬುದು ಕಮ್ಮಿನಿಷ್ಠೆ ಪ್ರಭಾವಕ್ಕೊಳಗಾಗಿರುವ ಅಚ್ಯುತ್ ಕುಮಾರ ತಲೆಗೆ ಹೊಳೆಯುವುದಿಲ್ಲಾ ಬಿಡಿ. ಈ ಚಿತ್ರದಲ್ಲಿ ನಾಯಕ ಶಿವು ಹೋರಾಡುವುದು ತನ್ನ ಸಮುದಾಯದ ಸ್ವಂತ ನೆಲಕ್ಕಾಗಿಯೇ ಹೊರತು ಖಳನಾಯಕನ ಆಸ್ತಿಗಾಗಿ ಅಲ್ಲಾ ಮತ್ತು ಈ ಸಿನಿಮಾದಲ್ಲಿ ಈ ದೇಶದ ಕಾನೂನು ಮತ್ತು ಸುವ್ಯವಸ್ಥೆ ಹೇಗೆ ಇಂತಹ ಸಮುದಾಯದ ಪರ ಇದೆ ಎಂಬುದನ್ನು ಮತ್ತು ಜನರನ್ನು ಗೋಮುಖವ್ಯಾಘ್ರ ಸ್ವಾರ್ಥಿಗಳು ಹೇಗೆ ಕಾನೂನು ಸುವ್ಯವಸ್ಥೆಯ ವಿರುದ್ಧ ಎತ್ತಿಕಟ್ಟುತ್ತಾರೆ ಎಂಬುದನ್ನು ಚಿತ್ರದಲ್ಲಿ ರಿಷಬ್ ಶೆಟ್ಟಿ ಸ್ಪಷ್ಟವಾಗಿ ಚಿತ್ರಿಸಿದ್ದಾರೆ.
ಇನ್ನು ಕಾರ್ಲ್ ಮಾರ್ಕ್ಸ್ , ಪೆರಿಯಾರ್ ಇಲ್ಲಿ ಯಾಕೆ ಉದಾಹರಣೆಗೆ ಹೊಂದಿಕೊಳ್ಳುವುದಿಲ್ಲಾ ಎಂದರೆ
ಅವರು ಮೂಲತಃ ನಾಸ್ತಿಕರು ಆದರೆ ಈ ಚಿತ್ರ ಸಂಪೂರ್ಣ ವಿರುದ್ಧವಾದದ್ದು ಈ ಚಿತ್ರ ಪೂರಾ ಆ ಶಿವಾಂಶ ಸಂಭೂತ ಭೂತ ದೈವಾರಾಧನೆಯ ನಂಬಿಕೆಯನ್ನೇ ಪ್ರಸ್ತುತಪಡಿಸುತ್ತದೆ ಇಲ್ಲಿ ಮನುಷ್ಯ ನಿಮಿತ್ತ ಮಾತ್ರ ಆತನ ಮುಖೇನವಾಗಿಯೇ ಆ ದೈವಶಕ್ತಿ ಧರ್ಮ ಕಾರ್ಯ ಮಾಡಿಸುತ್ತದೆ. ಮತ್ತು ಅಂತಿಮವಾಗಿ ಆ ದೈವಶಕ್ತಿಯೇ ಮನುಷ್ಯಕುಲದ ರಕ್ಷಕನಾಗಿ ನಿಲ್ಲುತ್ತದೆ ಎಂಬುದೇ ಈ ಚಿತ್ರದ ಸಾರ. ಅಂಬೇಡ್ಕರ್ , ಪುಲೆ , ನಾರಾಯಣ ಗುರುಗಳು , ಬುದ್ಧ , ಬಸವ ಇವರೆಲ್ಲರೂ ಈ ದೇಶದ ಈ ನಂಬಿಕೆಗಳಿಗೆ ಚ್ಯುತಿ ಬರದಂತೆ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಮಾದರಿ ರೂಪಿಸಿಕೊಟ್ಟರು. ಆದರೆ ಜಗತ್ತಿನಲ್ಲಿ ವಿಫಲವಾದ ಕಮ್ಮಿನಿಷ್ಠರ ಕಾರ್ಲ್ ಮಾರ್ಕ್ಸ್ ಮಾದರಿ ಜನಸಾಮಾನ್ಯರಿಗೆ ತಲುಪುವಲ್ಲಿ ವಿಫಲವಾಯಿತು. ಪೆರಿಯಾರ್ ಮಾದರಿ ಈ ದೇಶದಲ್ಲಿ ತಿರಸ್ಕಾರಕ್ಕೊಳಪಟ್ಟಿದೆ. ಏಕೆಂದರೆ ಈ ದೇಶದ ಸಾಂಸ್ಕೃತಿಕ ನಂಬಿಕೆಗಳ ವಿರುದ್ಧದ ಮಾದರಿಗಳು ಇವು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ.
ಎಲ್ಲರೂ ಒಮ್ಮೆ ನೋಡಲೇ ಬೇಕಾದ ಸಿನಿಮಾ ಕಾಂತಾರ. ಕೊನೆಯ ಕ್ಲೈಮ್ಯಾಕ್ಸ್ ದೃಶ್ಯವಂತೂ ನಮ್ಮಲ್ಲಿ ಮೈ ನವೀರೇಳುವಂತೆ ಮಾಡುವುದರಲ್ಲಿ ಸಂಶಯವಿಲ್ಲಾ ಹಾಗೆಯೇ ಸ್ವಲ್ಪ ನಾವು ಇನ್ನುಮುಂದೆ ಆ ಜನಪ್ರಿಯ ನಟ ಅಚ್ಯುತ್ ಕುಮಾರ್ ಕುರಿತೂ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳಿತು. ಹಾಗೆಯೇ ಈ ಸಿನಿಮಾದಲ್ಲಿ ನಾಯಕನ ತಾಯಿಯಾಗಿ ಅಭಿನಯಿಸಿದ “ಎಕ್ಸ್ಪ್ರೆಷನ್” ನ ಅದ್ಭುತ ಮಾದರಿ “ಮಾನಸಿ ಸುಧೀರ”ರನ್ನು ನೋಡಿ ತುಂಬಾ ಖುಷಿಯಾಯಿತು.ಕಾಂತಾರ ಚಿತ್ರತಂಡಕ್ಕೆ ಶುಭವಾಗಲಿ.