ಶಾಸಕ ದಢೇಸೂಗೂರು ಅವರನ್ನು ಬಂಧಿಸಿ ಸೂಕ್ತ ತನಿಖೆಗೆ ಒಳಪಡಿಸಬೇಕು: ಮಾಜಿ ಸಚಿವ ಶಿವರಾಜ್ ತಂಗಡಗಿ ಆಗ್ರಹ

ಕನಕಗಿರಿ ಶಾಸಕರನ್ನು ವಿಚಾರಣೆಗೆ ಒಳಪಡಿಸಲು ತಂಗಡಗಿ ಒತ್ತಾಯ

ಕೊಪ್ಪಳ : ಪಿಎಸ್‌ಐ ಹುದ್ದೆ ನೀಡುವುದಾಗಿ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸೂಗೂರು ಅವರು ಪರಸಪ್ಪ ಮೇಗೂರು ಎಂಬುವರ ಬಳಿ ೧೫ ಲಕ್ಷ ರೂ. ಪಡೆದುದ್ದರ ಮೊದಲನೇ ಆಡಿಯೋದಲ್ಲಿ ಶಾಸಕರು ಸರ್ಕಾರಕ್ಕೆ ಹಣ ನೀಡಿದ್ದೇನೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಸಕ ದಢೇಸೂಗೂರು ಅವರನ್ನು ಬಂಧಿಸಿ ಸೂಕ್ತ ತನಿಖೆಗೆ ಒಳಪಡಿಸಬೇಕೆಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧಕ್ಷ ಶಿವರಾಜ ತಂಗಡಗಿ ಒತ್ತಾಯಿಸಿದರು.

ರೈತರ ಬೆಳೆಹಾನಿ ಶೀಘ್ರ ಸಮೀಕ್ಷೆಯಾಗಲಿ:

ರಾಜ್ಯದಲ್ಲಿ ಮತ್ತು ವಿಶೇಷವಾಗಿ ಕೊಪ್ಪಳ ಜಿಲ್ಲೆಯಲ್ಲಿ ಈ ಮಹಾ ಮಳೆಯಿಂದ ರೈತರ ಬೆಳೆಗಳು, ಜನ-ಜಾನುವಾರುಗಳು ಸೇರಿದಂತೆ ಮನೆ, ಆಸ್ತಿಪಾಸ್ತಿ ಹಾನಿಗೊಳಗಾಗಿವೆ.ಈ ಕುರಿತಂತೆ ಇಲ್ಲಿಯವರಿಗೂ ಯಾವೊಂದು ಅಧಿಕಾರಿಗಳು ಇವುಗಳ ಸಮೀಕ್ಷೆಗಳನ್ನು ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಶೀಘ್ರ ಅಧಿಕಾರಿಗಳ ಸಭೆ ಕರೆದು ಹಾನಿಗೊಳಗಾಗಿರುವ ಪ್ರದೇಶಕ್ಕೆ ತ್ವರಿತವಾಗಿ ನೆರವು ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯವನ್ನು ಮಾಧ್ಯಮದವರಿಗೆ ತಿಳಿಸುತ್ತಾ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನೇ ಹಾಳು ಮಾಡಿದ ಈ ಹಗರಣ, ಇದರಲ್ಲಿ ಗುಲ್ಗರ್ಬಾದವರ ಹೆಚ್ಚು ಪಾಲಿತ್ತು ಎಂಬುದು ಸ್ಪಷ್ಟವಾಗಿತ್ತು. ಆದರೆ ಇದು ಕೊಪ್ಪಳ ಜಿಲ್ಲೆಗೂ ಆವರಿಸಿರುವದು ಆಂತರಿಕ ನಂಟು ಎನ್ನಬಹುದು ಎಂದು ಹೇಳಿದರು.

ಕನಕಗಿರಿ ಶಾಸಕ ಬಸವರಾಜ ದಡೇಸುಗೂರು

ಈ ಹಗರಣದಲ್ಲಿ ಜಿಲ್ಲೆಯ ಬಿಜೆಪಿ ಹಲವು ಘಟಾನುಗಟಿಗಳು ಇದ್ದಾರೆ, ಹೀಗಾಗಿ ಸೂಕ್ತ ತನಿಖೆಯಿಂದ ಮಾತ್ರ ಈ ವಿಷಯ ಹೊರಬರಬೇಕಿದೆ ಎಂದರು. ಸೆ.೧೨ರ ಒಳಗಾಗಿ ಶಾಸಕರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದರೆ ಸರಿ, ಇಲ್ಲದಿದ್ದರೆ ಜಿಲ್ಲಾದ್ಯಾಂತ ಉಗ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಕೃಷ್ಣ ಇಟ್ಟಂಗಿ, ಕಾಟನ್ ಪಾಷಾ ಸೇರಿದಂತೆ ಇತರರು ಉಪಸ್ತಿತರಿದ್ದರು.

Leave a Reply

Your email address will not be published. Required fields are marked *

ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ
error: Content is protected !!