ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ

ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ನಡೆದ ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಸಂಸ್ಥೆ ಜುಲೈ ಹದಿನೇಳು ರಂದು ವಿಶ್ವ ದಾಖಲೆಗಾಗಿ ಕಟ ಪ್ರದರ್ಶನ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ನೂರ ಐವತ್ತಕ್ಕೂ ಅಧಿಕ ಕರಾಟೆ ಪಟುಗಳು ಭಾಗವಹಿಸಿದ್ದರು ಅದರಲ್ಲಿ ಕೊಪ್ಪಳದ 3ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ನಗರದ ಒನ್ ಆಫ್ ದಿ ‍ಸ್ಟಾರ್ ಸಂಸ್ಥೆಯ ವಿದ್ಯಾರ್ಥಿಗಳಾದ ಶ್ರೀ ನಾಗರ್ಣಿಕ ಹಾನಗಲ್ , ಅಗಸ್ತ್ಯ ಅರಕೇರಿ, ಅರ್ನವ್ ಹಾನಗಲ್ 3 ವಿದ್ಯಾರ್ಥಿಗಳು ನೊಬೆಲ್ ವರ್ಲ್ಡ್ ರೆಕಾರ್ಡ್ ನಲ್ಲಿ ಭಾಗವಹಿಸಿ ಮೂವತ್ತು ನಿಮಿಷದಲ್ಲಿ ತೊಂಬತ್ತು ಸಾರೆ ಕಟ್ಟಾ ಪ್ರದರ್ಶನ ಮಾಡುವ ಮೂಲಕ ವಿಶ್ವದಾಖಲೆ ಸ್ಥಾಪಿಸಿದ್ದಾರೆ ಒಟ್ಟು ಹದಿನೆಂಟು ನೂರು ಸೆಕೆಂಡಿನಲ್ಲಿ ಹದಿನೆಂಟನೂರ ಸ್ಟೆಪ್ ಗಳು ಕರಾಟೆಯ ಯುದ್ಧ ನೃತ್ಯ ಎಂಬ ಕಟಾವನ್ನು ಪ್ರದರ್ಶಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಅದರಲ್ಲೂ ಸಹ ವಿಶೇಷತೆ ಎಂದರೆ ಈ 3ಜನ ವಿದ್ಯಾರ್ಥಿಗಳು ಕರಾಟೆ ಡ್ಯಾನ್ಸ್ ಸ್ಕೇಟಿಂಗ್ ಸಿಂಗಿಂಗ್ ಯೋಗ ಹೀಗೆ ಹಲವಾರು ರಂಗದಲ್ಲಿ ಗುರುತಿಸಿಕೊಂಡವರು ಅಗಸ್ತ್ಯ ಅರಕೇರಿ ಬಾಲ ನಟನಾಗಿ ಸಿನಿರಂಗಕ್ಕೆ ಕಾಲಿಟ್ಟ ಪೋರ
ಶ್ರೀ ನಾಗರ್ಣಿಕ ಹಾನಗಲ್ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಪುಟ್ಟು ಅರ್ನವ್ ಹಾನಗಲ್ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿ ಹೀಗೆ ವಿಶೇಷ ಪಟುಗಳಿಂದ ಒಲಿದ ವಿಶೇಷ ಪ್ರಶಸ್ತಿ ನೊಬೆಲ್ ವರ್ಲ್ಡ್ ರೆಕಾರ್ಡ್ ಎಂದು ತರಬೇತಿದಾರರಾದ ದೀಪ ರಾಘವೇಂದ್ರ ಅರಕೇರಿ ಅನಿಸಿಕೆ ಹಂಚಿಕೊಂಡರು.

ಮಕ್ಕಳ ವಿಶೇಷ ಸಾಧನೆಗೆ ಶ್ರೀ ರಾಮಕೃಷ್ಣ ಆಶ್ರಮದ ಚೈತನ್ಯಾನಂದ ಸ್ವಾಮೀಜಿ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸವರಾಜ ಕೊಪ್ಪಳ, ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ್, ಹಾನಗಲ್ ಪ್ಯೂಚರ್ ಟ್ರಸ್ಟ್ ನ ಮುಖ್ಯಸ್ಥೆ ಶ್ರೀಮತಿ ಜ್ಯೋತಿ ಮಹಾಂತೇಶ್ ಹಾನಗಲ್ , ವಿ ಎಸ್ ಎಸ್ ಸಂಸ್ಥೆಯ ಮುಖ್ಯಸ್ಥ ರಾಕೇಶ ಕಾಂಬ್ಳೇಕರ್, ವಾಣಿಜ್ಯೋದ್ಯಮಿಗಳಾದ ಸುರೇಶ್ ಈ, ಎಚ್, ಪ್ರದೀಪ್ ಎಚ್, ಎಚ್ ಶೇಖರ್ ಇನ್ನಿತರರು ಶುಭಕೋರಿದರು.

Leave a Reply

Your email address will not be published.

ಪಿಎಫ್ ಐ ಸೇರಿ ಹಲವು ಸಂಘಟನೆಗಳು ಭಾರತದಲ್ಲಿ ಬ್ಯಾನ್ - ಪಿಎಫ್ ಐ ಸೇರಿ ಹಲವು ಸಂಘಟನೆಗಳು ಭಾರತದಲ್ಲಿ ಬ್ಯಾನ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ; ಸಿ ಎಫ್ ಐ ರಾಜ್ಯ ಕಾರ್ಯದರ್ಶಿ ಸರ್ಪರಾಜ್ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ - ಕೊಪ್ಪಳದಲ್ಲಿ ಮತ್ತೆ ಇಬ್ಬರನ್ನು ವಶಕ್ಕೆ ಪಡೆದ (NIA) ಎನ್ಐಎ
error: Content is protected !!