ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ

ಇತ್ತೀಚೆಗೆ ಕೆಲವರು ಅಟ್ರಾಸಿಟಿ ಪ್ರಕರಣವನ್ನು ತಮ್ಮ ವೈಯಕ್ತಿಕ ದುರ್ಬಳಕೆಗಾಗಿ ಬಳಸಿಕೊಳ್ಳುತ್ತಿರುವುದು ಯಥೇಚ್ಛವಾಗಿ ಕಂಡು ಬರುತ್ತಿದೆ,

ತುಳಿತಕ್ಕೊಳಗಾದ ದಲಿತರು ತಮ್ಮ ರಕ್ಷಣೆಗಾಗಿ ಬಳಸಿಕೊಳ್ಳಬೇಕಾದ ಈ ಕಾಯ್ದೆಯನ್ನು ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ  ಬಳಸುತ್ತಿದ್ದಾರೆ,

ತುಳಿತಕ್ಕೆ ಒಳಗಾದವರಗಿಂತ ಬಲಿಷ್ಠರು ಈ ಕಾನೂನನ್ನು ಮತ್ತು ಕಾಯ್ದೆಯನ್ನು ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಈ ಪ್ರಕರಣ ದಾಖಲಿಸುವಾಗ ಜಾತಿ ನಿಂದನೆ ಮಾಡುವ ಉದ್ದೇಶದಿಂದಲೇ ವ್ಯಕ್ತಿ  ಕೃತ್ಯ ಎಸಗಿದ್ದರೆ ಮಾತ್ರ ವಿಚಾರಣೆ ಮಾಡಿ ಅಧಿಕಾರಿಗಳು ಅಟ್ರಾಸಿಟಿ ಕಾಯ್ದೆಯನ್ನು ಬಳಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದೆ.

ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿ ಸಂತ್ರಸ್ತರಾಗಿರುವ ಎಲ್ಲ ಅಪರಾಧ ಕೃತ್ಯಗಳಲ್ಲೂ ಎಸ್‌ಸಿ, ಎಸ್‌ಟಿ ಕಾಯ್ದೆಯ ಸೆಕ್ಷನ್ 3 ಹೇರಲು ಅವಕಾಶವಿಲ್ಲ. ಕೃತ್ಯದ ಉದ್ದೇಶ ಜಾತಿ ಆಧಾರಿತ ದಾಳಿ ಅಲ್ಲವೆಂದಾದರೆ, ಆರೋಪಿಯ ವಿರುದ್ಧ ಆ ಕೃತ್ಯದ ಹಿನ್ನೆಲೆ ಪರಿಗಣಿಸಿ ಸೂಕ್ತ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಬಹುದು ಅಥವಾ ಘಟನೆಯ ಸತ್ಯಾಸತ್ಯತೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಇತರ ಕಾನೂನುಗಳ ಆಧಾರದಲ್ಲಿ ದೋಷಾರೋಪ ಹೊರಿಸಬಹುದು.

ಅಸ್ಪೃಶ್ಯತೆ ನಿರ್ಮೂಲನೆ, ಪರಿಶಿಷ್ಟ ಜಾತಿ, ಪಂಗಡದವರ ಮೇಲಿನ ದಾಳಿಗಳಿಂದ ರಕ್ಷಣೆ ಹಾಗೂ ಜಾತಿ ತಾರತಮ್ಯ ತಡೆಯುವ ಉದ್ದೇಶದಿಂದ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತರಲಾಗಿದೆ.

ಆರೋಪಿ ವಿರುದ್ಧ ಕಾಯ್ದೆಯ ಸೆಕ್ಷನ್ 3 ಅನ್ವಯಿಸಲು ಪ್ರಾಥಮಿಕವಾಗಿ ಅಲ್ಲಿ ಜಾತಿ ಆಧಾರಿತ ದಾಳಿಗಳು ಅಥವಾ ಜಾತಿ ಬಗ್ಗೆ ದ್ವೇಷ ಭಾವನೆಯಿಂದ ಎಸಗಿರುವ ಕೃತ್ಯವಾಗಿರಬೇಕು. ಪ್ರಕರಣದಲ್ಲಿ ಸೆಕ್ಷನ್ 3 ಅನ್ವಯವಾಗುತ್ತದೆ ಎನ್ನುವುದು ತನಿಖೆಯಲ್ಲಿ ಕಂಡು ಬರಬೇಕು.

ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರದ ವ್ಯಕ್ತಿಯಿಂದ ಎಸ್ ಸಿ/ಎಸ್‌ಟಿ ವರ್ಗಕ್ಕೆ ಸೇರಿದ ವ್ಯಕ್ತಿಯನ್ನು ದಮನಿಸುವ, ಅಪಮಾನಿಸುವ, ಶೋಷಣೆ ಮಾಡುವ ಅಥವಾ ಅಪಹಾಸ ಮಾಡುವಂಥ, ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3ರ ಅಡಿ ಯಾವುದೇ ಅಪರಾಧ ಎಸಗಿರುವುದನ್ನು ತನಿಖೆಯು ಬಹಿರಂಗಪಡಿಸದಿದ್ದರೂ, ಸಂತ್ರಸ್ತ ವ್ಯಕ್ತಿ ಕೇವ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ್ದಾರೆಂಬ ಕಾರಣ: ದೋಷಾರೋಪಪಟ್ಟಿಯಲ್ಲಿ ಸೆಕ್ಷನ್ 3 ಸೇರಿಸಲು ಸಾಧ್ಯವಿಲ್ಲ

ಜಾತಿನಿಂದನೆಗಳಿಂದ ಪರಿಶಿಷ್ಟ ಜಾತಿ, ಪಂಗಡದವರನ್ನು ರಕ್ಷಿಸುವುದೇ ಕಾಯ್ದೆಯ ಮೂಲ ಉದ್ದೇಶವಾಗಿದ್ದರೂ, ಆ ಕಾಯ್ದೆಯ ದುರ್ಬಳಕೆಗೆ ಅವಕಾ ನೀಡಬಾರದು. ಆದ್ದರಿಂದ, ಇಂಥ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುವಾಗ ತನಿಖಾಧಿಕಾರಿಗಳು ವಿವೇಚನೆಯಿಂದ ವರ್ತಿಸಬೇಕಾದ ಜವಾಬ್ದಾರಿ ಹೊಂದಿರುತ್ತಾರೆ.

Leave a Reply

Your email address will not be published. Required fields are marked *

ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಜನಾರ್ದನ ರೆಡ್ಡಿ ಕಾಲಕ್ಕೆ ಮುಗಿದು ಹೋಯಿತೇ ವೈಭವದ ಹಂಪಿ ಉತ್ಸವ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ಪತ್ರಕರ್ತರು ಒಗ್ಗಟ್ಟಿಲ್ಲದಿದ್ದರೆ ನಮಗೆ ಅನುಕೂಲ; ಸಚಿವ ಆನಂದ್ ಸಿಂಗ್ ಕೊಪ್ಪಳ ಪತ್ರಕರ್ತರ ಅವ್ಯವಸ್ಥೆ ನೋಡಿ ವ್ಯಂಗ್ಯ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ - ನಾಳೆ ಕೆರಹಳ್ಳಿಯಲ್ಲಿ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ
error: Content is protected !!