ಕೊಪ್ಪಳ ತಾಲೂಕ ಅಬಕಾರಿ ಅಧಿಕಾರಿ ವಿರುದ್ಧ ಷಡ್ಯಂತ್ರ; ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ ರಾಮಚಂದ್ರಪ್ಪ

ಇಂದು ಕೊಪ್ಪಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಅಸ್ಪೃಶ್ಯ ವಿಮೋಚನಾ ಸಮಿತಿಯ ರಾಜ್ಯಾಧ್ಯಕ್ಷರಾದ ರಾಮಚಂದ್ರಪ್ಪ ಅವರು ಭೇಟಿಯಾಗಿ ಮನವಿ ಕೊಡುವ ಮುಖಾಂತರ ಮತ್ತು ಖುದ್ದಾಗಿ ರಮೇಶ್ ಅಗಡಿ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಮನವರಿಕೆ ಮಾಡಿಕೊಟ್ಟರು,

ಕೊಪ್ಪಳದ ಅಬಕಾರಿ ನಿರೀಕ್ಷಕರಾದ ರಮೇಶ ಅಗಡಿಯವರ ಕೆಲಸದ ಪ್ರಾಮಾಣಿಕತೆಯನ್ನು ಸಹಿಸದೆ ಕೆಲ ಬ್ರಾಂಡಿ ಶಾಪ್ ಸನ್ನದ್ದುದಾರರು ಇವರ ಕೆಲಸದ ಕಟ್ಟುನಿಟ್ಟಿನ
ಪ್ರಾಮಾಣಿಕತೆಯನ್ನು ಕಂಡು ಕೊಪ್ಪಳದ ಮಧ್ಯದ ದೊರೆ ಎನಿಸಿಕೊಂಡಿರುವ ಒಬ್ಬ ಸನ್ನದ್ದುದಾರ ಕೆಲ
ಪ್ರಭಾವಿ ನಾಯಕರ ಸಹಕಾರದಿಂದ ಅಬಕಾರಿ ನಿರೀಕ್ಷಕರ ಕಟ್ಟುನಿಟ್ಟಿನ ಪ್ರಾಮಾಣಿಕ ಸೇವೆಯನ್ನು ಸಹಿಸದೆ ಈ ಜಿಲ್ಲೆಯಿಂದಲೆ ವರ್ಗಾವಣೆ ಮಾಡಬೇಕೆಂದು ಹಲವರು ಇವರ ಪ್ರಾಮಾಣಿಕ ಸೇವೆಗೆ ಮಸಿ ಹಚ್ಚುವ ಕೆಲಸ ನಡೆಸಿರುತ್ತಾರೆ.

ತಾಲೂಕ ಅಬಕಾರಿ ನಿರೀಕ್ಷಕ ರಮೇಶ್ ಅಗಡಿ

 

ಇವರು ನಮ್ಮ ಕೊಪ್ಪಳ ಅಬಕಾರಿ ನಿರೀಕ್ಷಕರಾಗಿ ಬಂದು 15 ತಿಂಗಳ ಕೆಲಸದಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದರಲ್ಲಿ ಮೊದಲ ಅಧಿಕಾರಿ ಅಂಥ ಪ್ರಾಮಾಣಿಕವಾಗಿ ಕೆಲಸ ಮಾಡುವುದರಲ್ಲಿ ಇವರು ನಮ್ಮ ಜಿಲ್ಲೆಗೆ ಅಂದರೆ ಕೊಪ್ಪಳದಲ್ಲಿ ಗುರುತಿಸಿಕೊಂಡವರು.

ಸದರಿ ಇವರು ನಮ್ಮ ಕೊಪ್ಪಳ ಅಬಕಾರಿ ನಿರೀಕ್ಷಕರಾಗಿ ಬಂದ ಮೇಲೆ; ಅಕ್ರಮ ಮಧ್ಯ ಮಾರಾಟ, ಕೆಲ ಹಳ್ಳಿಗಳಲ್ಲಿ ಅಕ್ರಮವಾಗಿ ಗ್ರಾಮದ ಗುರು-ಹಿರಿಯರ ಸಮಕ್ಷಮ ಒಂದು ವರ್ಷಕ್ಕೆ ಇಷ್ಟು ಹಣ ನೀಡಬೇಕು ಅಂತ ಗ್ರಾಮಗಳಲ್ಲಿ ಅಕ್ರಮವಾಗಿ ಮಧ್ಯ ಮಾರಾಟದ ಹರಾಜು ನಡೆಸುತ್ತಿದ್ದರು. ಆದರೆ ನಮ್ಮ ಕೊಪ್ಪಳಕ್ಕೆ ಇವರು ಅಬಕಾರಿ ನಿರೀಕ್ಷಕರಾಗಿ ಬಂದ ಮೇಲೆ ಇವುಗಳನ್ನೆಲ್ಲಾ ನಡೆಯದಂತೆ ತಡೆಹಿಡಿಯುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯಾದವರು ಮತ್ತು ಕೆಲ ಗ್ರಾಮೀಣ ಭಾಗದಲ್ಲಿ ಚಟಕ್ಕೆ ಗುಲಾಮರಾಗಿ ತಮ್ಮ ಮನೆ ಹಣ ಆಸ್ತಿ ಎಲ್ಲಾ ಕಳೆದುಕೊಂಡಿರುವದರ ಜೊತೆಗೆ ಅವರ ಕುಟುಂಬ ಬೀದಿಗೆ ಬಂದ ಸಂಗತಿಗಳು ಹಾಗೂ ಈಗಿನ ಯುವಕರು ಈ ಕುಡಿತದ ಚಟ ಫ್ಯಾಶನ್ ಅಂತ ಬಿಂಬಿಸುವ ಹಾಗೆ ವರ್ತಿಸುತ್ತಾರೆ. ಆದರೆ ಕೊಪ್ಪಳಕ್ಕೆ 15 ತಿಂಗಳಿಂದ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ನಿರೀಕ್ಷಕರಾದ ರಮೇಶ ಅಗಡಿಯವರು ಕೆಲ ಗ್ರಾಮೀಣ ಪ್ರದೇಶಗಳಿಗೆ ತಾವೇ ಸ್ವತಃ ಭೇಟಿ ನೀಡಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಂಡು ಕುಡಿತದ ಚಟಕ್ಕೆ ದಾಸರಾಗಿರುವ ಯುವಕರಿಗೆ ಬುದ್ಧಿ ಹೇಳಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.
ಇದನ್ನು ಸಹಿಸದೇ ಕೆಲ ಸನ್ನದ್ದುದಾರರು ಹಳ್ಳಿಗಳಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡಲು ಅವಕಾಶ ನಮಗೆ ಕಲ್ಪಿಸಿಕೊಡಲಿಲ್ಲ ಅಂತ ಅಬಕಾರಿ ನಿರೀಕ್ಷಕರ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಸುತ್ತಿದ್ದಾರೆ.

ನಮ್ಮ ಜಿಲ್ಲೆಗೆ ಅಬಕಾರಿ ನಿರೀಕ್ಷಕರಾದ ರಮೇಶ ಅಗಡಿ ಅವರಂತ ಪ್ರಾಮಾಣಿಕ ಸೇವೆ ನಮ್ಮ ತಾಲೂಕಿಗೆ ಬೇಕು ಮತ್ತು ನಮ್ಮ ಜಿಲ್ಲೆಯಲ್ಲಿ ಇವರ ಹುದ್ದೆ ಮೇಲ್ದರ್ಜೆಗೇರಿಸಬೇಕು ನಮ್ಮ ಜಿಲ್ಲೆ ಅಕ್ರಮ ಮಧ್ಯ ಮಾರಾಟ, ಮಧ್ಯೆ ಮುಕ್ತ ಜಿಲ್ಲೆ ಕನಸು ಕಾಣುತ್ತಿರುವುದರಿಂದ ನಮ್ಮ ಜಿಲ್ಲೆಗೆ ಇಂತ ಅಧಿಕಾರಿಗಳ ಅವಶ್ಯಕತೆ ಇದ್ದುದರಿಂದ ತಮ್ಮಲ್ಲಿ ವಿನಂತಿಪೂರ್ವಕವಾಗಿ ನಮ್ಮ ಜಿಲ್ಲೆಗೆ ಇಂಥ ನಿಷ್ಠಾವಂತ ಅಧಿಕಾರಿಗಳು ಇಂತಹ ಪ್ರಬುದ್ಧ ಮತ್ತು ಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ಯಾವುದೇ ರೀತಿ ಕ್ರಮ ಕೈಗೊಂಡರೆ ನಾವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು “ಅಸ್ಪೃಶ್ಯರ ವಿಮೋಚನಾ ಸಮಿತಿ”ಯ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಅಸ್ಪೃಶ್ಯರ ವಿಮೋಚನಾ ಸಮಿತಿಯ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ

ಖುದ್ದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅಬಕಾರಿ ನಿರೀಕ್ಷಕ ರಮೇಶ್ ಅಗಡಿ ಅವರ ವಿರುದ್ಧ ನಡೆದಿರುವ ಷಡ್ಯಂತ್ರದ ಬಗ್ಗೆ ವಿವರವಾಗಿ ತಿಳಿಸಿದ್ದಾರೆ ಮತ್ತು ರಮೇಶ್ ಅಗಡಿ ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಿಸಲೇಬೇಕು ಅಂತ ಸಾಮಾಜಿಕ ವಿದ್ರೋಹಾತ್ಮಕ ಚಟುವಟಿಕೆ ಮಾಡುವಂತಹ ವ್ಯಕ್ತಿಗಳನ್ನು ಬಳಸಿಕೊಂಡು ಒಬ್ಬ ಪ್ರಭಾವಿ ಹಲವು ಬ್ರಾಂಡಿ ಶಾಪಗಳ ಮಾಲೀಕ ಈ ರೀತಿಯ ಗೊಂದಲದ ವಾತಾವರಣ ನಿರ್ಮಿಸುತ್ತಿದ್ದಾನೆ ಎಂದು ವಿವರವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ತಿಳಿಸಿದ್ದಾರೆ,

ಕೂಡಲೇ ಮುಖ್ಯಮಂತ್ರಿಗಳು ತಮ್ಮ ಆಪ್ತ ಕಾರ್ಯದರ್ಶಿಯನ್ನು ಕರೆದು ಈ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸುವಂತೆ ಸೂಚಿಸಿದ್ದಾರೆ,

Leave a Reply

Your email address will not be published. Required fields are marked *

error: Content is protected !!