ನಕಲಿ ಹೋರಾಟಗಾರರನ್ನು ಮಟ್ಟ ಹಾಕಲು ರಾಜ್ಯ ಅನ್ನದಾತ ರೈತ ಸಂಘ ಆಗ್ರಹ

ನಕಲಿ ಹೋರಾಟಗಾರರಿಗೆ ನಿಜವಾದ ಹೋರಾಟಗಾರರು ತಕ್ಕ ಪಾಠ ಕಲಿಸಬೇಕು: ಶರಣೇಗೌಡ ಕೆಸರಟ್ಟಿ

 

ಕೊಪ್ಪಳ, ಅ 04:ಹೋರಾಟಗಾರರ ಹೆಸರಿನಲ್ಲಿ ನಕಲಿ ಹೋರಾಟಗಾರರ ಹಾವಳಿ ಕೊಪ್ಪಳ ಜಿಲ್ಲೆಯಾದ್ಯಂತ ಹೆಚ್ಚಾಗುತ್ತಿದ್ದು, ಅಂತವರನ್ನು ಹೊರಹಾಕುವ ಕೆಲಸ ನಡೆಯುತ್ತಿದೆ. ಯಾರು ಕನ್ನಡ ಶಾಲು ಹಾಗೂ ಹಸಿರು ಟಾವೆಲ್ ಹಾಕಿ ರೈತರಿಗೆ ಹಾಗೂ ನಿಜವಾದ ಕನ್ನಡಪರ ಹೋರಾಟಗಾರರಿಗೆ ಅಪಮಾನ ಮಾಡುವ ಕೆಲಸ ಮಾಡಬಾರದು. ರೈತರು ಮತ್ತು ಕನ್ನಡ ಪರ ಹೋರಾಟಗಾರರು ಕೂಡಾ ನಕಲಿ ಕನ್ನಡಪರ ಹೋರಾಟಗಾರರಿಗೆ ತಕ್ಕ ಪಾಠ ಕಲಿಸಬೇಕೆಂದು, ಅಖಿಲ ಭಾರತ ರಾಜ್ಯ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಶರಣೇಗೌಡ ಕೆಸರಟ್ಟಿ ನಕಲಿ ಕನ್ನಡಪರ ಹೋರಾಟಗಾರರಿಗೆ ಹಾಗೂ ನಕಲಿ ರೈತ ಹೋರಾಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಶರಣಪ್ಪ ಕೊತ್ವಾಲ್ ರಾಜ್ಯ ಉಪಾಧ್ಯಕ್ಷರು

ನಗರದ ಜಿಲ್ಲಾ ಆಡಳಿತ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ, ಅವರು ಇತ್ತಿಚಿನ ದಿನಮಾನಗಳಲ್ಲಿ ರಾಜ್ಯದಲ್ಲಿ ರೈತರು ಹಾಗೂ ಬಡವರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು ಅಥವಾ ರೈತ ಸಂಘದ ಅವಶ್ಯಕತೆ ಬಹಳ ಇದೆ. ಈ ಹಿಂದೆ ಭ್ರಷ್ಟಾಚಾರ ಮಾಡಿದ ಅಧಿಕಾರಿಗಳನ್ನು ಕತ್ತೆ ಮೇಲೆ ಮೆರವಣಿಗೆ ಮಾಡಲಾಗಿದೆ. ಇದೀಗ ನಾವೇ ಹಸಿರು ಟವೆಲ್ ಹಾಗೂ ಕನ್ನಡ ಶಾಲು ಹಾಕಿಕೊಂಡು ಭ್ರಷ್ಟಾಚಾರ ಮಾಡಿದರೆ ಹೇಗೆ? ಇದನ್ನು ಅಖಿಲ ಭಾರತ ರಾಜ್ಯ ಅನ್ನದಾತ ರೈತ ಸಂಘ ಸಹಿಸುವುದಿಲ್ಲ. ಭ್ರಷ್ಟಾಚಾರ ಮಾಡುವ ಕನ್ನಡಪರ ಹೋರಾಟಗಾರರಾಗಲಿ, ರೈತ ಹೋರಾಟಗಾರರಾಗಲಿ ಅಂತವರ ವಿರುದ್ದವೂ ಕ್ರಮಕ್ಕೆ ಪೋಲಿಸ್ ಇಲಾಖೆ ಮುಂದಾಗಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋದವರ ವಿರುದ್ಧ ಹೋರಾಟ ಮಾಡಲು ಪ್ರಾಮಾಣಿಕ ಹೋರಾಟಗಾರರ ಅವಶ್ಯಕತೆ ಇದೆ. ಆದ್ದರಿಂದ ಪ್ರಾಮಾಣಿಕ ಹೋರಾಟಗಾರರ ಹುಟ್ಟು ಹಾಕಿ ಮತ್ತೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ, ಅದಕ್ಕಾಗಿ ನಕಲಿ ಹೋರಾಟಗಾರರಿಗೆ ನಿಜವಾದ ಹೋರಾಟಗಾರರು ತಕ್ಕ ಪಾಠ ಕಲಿಸಬೇಕು ಎಂದು ಶರಣೇಗೌಡ ಕೆಸರಟ್ಟಿ ಹೇಳಿದ್ದಾರೆ.

ಶರಣೆಗೌಡ ಕೆಸರಟ್ಟಿ ರಾಜ್ಯಾಧ್ಯಕ್ಷರು

ನಂತರ ಮಾತನಾಡಿ ರಾಜ್ಯ ಉಪಾಧ್ಯಕ್ಷ ಶರಣಪ್ಪ ಕೊತ್ವಾಲ್, ನಕಲಿ ಹೋರಾಟಗಾರರಿಂದ ನಿಜವಾದ ಹೋರಾಟಗಾರರಿಗೆ ಬೆಲೆ ಇಲ್ಲದಂತಾಗಿದೆ. ಕೆಲವೊಂದಿಷ್ಟು ನಕಲಿ ಹೋರಾಟಗಾರರು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರ ವಿರುದ್ಧ ಹೋರಾಟಗಾರರಾಗಿದ್ದು ವಿಪರ್ಯಾಸ, ಅನ್ಯಾಯಕ್ಕೆ ಒಳಗಾದ ವ್ಯಕ್ತಿಗಳಿಗೆ ನ್ಯಾಯ ಕೊಡಿಸುವಂತ ಕೆಲಸವನ್ನು ಹೋರಾಟಗಾರರು ಮಾಡಬೇಕು, ಅಂದಾಗ ಮಾತ್ರ ಹೋರಾಟಗಾರರಿಗೆ, ಹೋರಾಟಕ್ಕೆ ಬೆಲೆ ಸಿಕ್ಕಂತಾಗುತ್ತದೆ. ನಿಜವಾದ ಹೋರಾಟಗಾರರು ಅನ್ಯಾಯಕ್ಕೆ ಒಳಗಾದ ವ್ಯಕ್ತಿಗಳ ಪರವಾಗಿ, ಯಾವ ಇಲಾಖೆಯಿಂದ ಅನ್ಯಾಯಕ್ಕೆ ಒಳಗಾಗಿದ್ದಾರೆ, ಎಂದು ತಿಳಿದು. ಆ ಇಲಾಖೆ ಮುಂದೆ ಹೋರಾಟಗಾರರು ತಾವು ಚಿಂತಿಸದೆ. ಭ್ರಷ್ಟ ಅಧಿಕಾರಿ ಅಥವಾ ವ್ಯಕ್ತಿ ವಿರುದ್ಧ ಹೋರಾಡಿ ನ್ಯಾಯ ಕೊಡಿಸಿದಾಗ ಮಾತ್ರ ಅಂಥ ಹೋರಾಟಗಾರರಿಗೆ ನಿಜವಾದ ಹೋರಾಟಗಾರ ಎಂದು ಕರೆಯುತ್ತಾರೆ. ನಿಜವಾದ ಹೋರಾಟಗಾರರನ್ನು ಜನಸಾಮಾನ್ಯರು ಗುರುತಿಸುತ್ತಾರೆ. ನಕಲಿ ಹೋರಾಟಗಾರರನ್ನ ಅಧಿಕಾರಿಗಳು ಗುರ್ತಿಸುತ್ತಾರೆ ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಸಂಘ ನೋಂದಣಿ ಇಲಾಖೆಯವರು ಕೂಡ ಕೂಲಂಕುಷವಾಗಿ ಪರಿಶೀಲಿಸದೆ ಸಂಘವನ್ನು ನೋಂದಣಿ ಮಾಡಿಕೊಳ್ಳುತ್ತಿರುವುದು ಸರಿಯಲ್ಲ, ಸರ್ಕಾರ ಕೂಡ ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗಿದೆ ಎಂದರು.

Leave a Reply

Your email address will not be published.

ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ
error: Content is protected !!