ಗಂಗಾವತಿ: ಬಿಜೆಪಿ ಪಕ್ಷ ಅನ್ನೋದು ಇದೊಂದು ಕೇವಲ ರಾಜಕೀಯ ಪಕ್ಷವಲ್ಲಾ, ಈ ಪಕ್ಷಕ್ಕೆ ತನ್ನದೇ ಆದಂತಹ ಇತಿಹಾಸ ವಿಚಾರ ಸಿದ್ಧಾಂತಕ್ಕಾಗಿ ಅನೇಕ ಕಾರ್ಯಕರ್ತರ ಬಲಿದಾನ ನಡೆದಿರುವಂತದ್ದು ಇತಿಹಾಸವಾದರೆ ಇಂದಿನ ಕಾಲಘಟ್ಟದಲ್ಲೂ ಕೂಡ ಸೈದ್ಧಾಂತಿಕ ವಿಚಾರಧಾರೆಗೆ ಹೋರಾಡುವಂತಹ ದುರ್ಗತಿ ಬಂದು ಒದಗಿರುವುದು ಕಾರ್ಯಕರ್ತರಿಗೆ ನೋವಾಗುತ್ತಿದೆ.

ಪ್ರವೀಣ್ ನೆಟ್ಟಾರ್ರ ಸಾವು ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು ಅಮಾನುಷವಾಗಿ ಬರ್ಬರವಾಗಿ ಹೇಡಿಗಳಂತೆ ರಾತ್ರಿ ಸಮಯದಲ್ಲಿ ಹಿಂದಿನಿಂದ ಬಂದು ಹತ್ಯೆಗೈದಿರುವುದು ಹೇಡಿಗಳ ಕೃತ್ಯವಾಗಿದೆ.
ಬಿಜೆಪಿಯ ಯುವ ಮೋರ್ಚಾ ಸಕ್ರಿಯ ಕಾರ್ಯಕರ್ತನಾಗಿ ಸೇವೆಗೋಸ್ಕರ ತೊಡಗಿಸಿಕೊಂಡಿದ್ದ ಪ್ರವೀಣ್ ನೆಟ್ಟಾರ್ರ ಇಂದು ಸಮಾಜಕ್ಕಾಗಿ ಪ್ರಾಣ ತೆತ್ತಿರುವದು ದುರ್ದೈವದ ಸಂಗತಿ. ಕರ್ನಾಟಕ ಸರ್ಕಾರ ಆರೋಪಿಗಳನ್ನು ಬಂದಿಸಿ ಉಗ್ರ ಶಿಕ್ಷೆಯನ್ನು ನೀಡಬೇಕು ಹಾಗೂ ಮುಂದೆ ಮತ್ತೆಂದೂ ಕೂಡ ಈ ತರಹದ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು ಎಂದು ಆಗ್ರಹಪಡಿಸುತ್ತೇವೆ.

ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಗಂಗಾವತಿ
ಹಿಂದೆಲ್ಲಾ ನಡೆದಂತಹ ಕೊಲೆಗಳಿಗೆ ಯಾವ ರೀತಿಯಲ್ಲಿ ನ್ಯಾಯ ಸಿಕ್ಕಿದೆ ಎನ್ನುವುದು ನಮ್ಮ ಕಣ್ಣ ಮುಂದೆಯೇ ಇದೆ. ಕಠಿಣ ಕ್ರಮ ಎನ್ನುವ ಭರವಸೆ ಭರವಸೆಯಾಗೆ ಊಳಿದಿರುವ ಕಾರಣ ಬಿಜೆಪಿ ಗಂಗಾವತಿ ಯುವ ಮೋರ್ಚಾ ನಗರ ಅಧ್ಯಕ್ಷರಾದಿಯಾಗಿ ನಗರ ಯುವ ಮೋರ್ಚಾದ ಎಲ್ಲಾ ಪಧಾಧಿಕಾರಿಗಳು ಪಕ್ಷದ ಜವಾಬ್ದಾರಿಗಾಗಿ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ