ವರದಿ: ಎಂಡಿ ಮುಸ್ತಫ
ಸಾರ್ವಜನಿಕ ಆಸ್ಪತ್ರೆಗೆಮಕ್ಕಳ ತಜ್ಞರ ಹುದ್ದೆ ಭರ್ತಿ ಮಾಡಿ ಆಸ್ಪತ್ರೆಯಲ್ಲಿ ದುಡ್ಡು ಕೀಳು ವ ದಂಧೆ ಕೊರರೀಗೆ ಕಠಿಣ ಕ್ರಮ ಕೈಗೊಳ್ಳಿ ಕರವೇ ಆಗ್ರಹ
ಲಿಂಗಸುಗೂರು:ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 3 ವರ್ಷಗಳಿಂದ ಹೃದಯ ರೋಗ ತಜ್ಞರು ಇರುವುದಿಲ್ಲ. ಒಂದು ವರ್ಷದಿಂದ ಮಕ್ಕಳ ತಜ್ಞರ ಖಾಲಿ ಹುದ್ದೆ ಇದ್ದು ಇದರಿಂದ ಸಾರ್ವಜನಿಕರು ತ್ರೀವವಾದ ತೊಂದರೆ ಅನುಭವಿಸುತ್ತಿದ್ದಾರೆ.ಸ್ತ್ರೀ ರೋಗ ತಜ್ಞರಿದ್ದು ಹೆರಿಗೆ ಮಾಡಿಸಲಿಕ್ಕೆ ಸುಮಾರು 10,000/- ದಿಂದ 15000-/ ರುಗಳವರೆಗೆ ಹಣ ತೆಗೆದುಕೊಳ್ಳುತ್ತಿದ್ದು ಬಡವರು ಇಷ್ಟೊಂದು ಹಣವನ್ನು ಎಲ್ಲಿಂದ ತಂದು ಹೆರಿಗೆ ಮಾಡಿಸಬೇಕೆಂಬ ಚಿಂತೆ ಕಾಡತೊಡಗಿದೆ. ಸರಕಾರ ದಿಂದ ಸದರಿ ವೈದ್ಯರಿಗೆ ಸಂಬಳ ನೀಡುವದಲ್ಲವೇ ಸರಕಾರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಇಂತಹ ದುಡ್ಡು ಕೀಳು ವ ದಂಧೆ ಕೊರರೀಗೆ ಆದಷ್ಟು ಬೇಗನೆ ಸದರಿ ವೈದ್ಯರಿಗೆ ತಾಕೀತು ಮಾಡಬೇಕೆಂದು. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ
ವತಿಯಿಂದ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈಸಂದರ್ಭದಲ್ಲಿ ಅಧ್ಯಕ್ಷ ರು ಕ. ರ.ವೇ ಲಿಂಗಸುಗೂರು ಜಿಲಾನಿ ಪಾಷಾ,ಹುಮಂತ ನಾಯಕ,ಅಜ್ಜೂ ,ರವಿ ಬರಗೂಳಿ ,ಅಮರೇಶ ಛಾವಣಿ ಇಲಿಯಾಜ,ಸೇರಿದಂತೆ ಇತರರು ಇದ್ದರು.