ಡಾ. ಅಂಬೇಡ್ಕರ್ ಅವರು ಕಂಡಂತೆ ಆರ್ ಎಸ್ ಎಸ್ ನ ಆಳ-ಅಗಲ”

 

ಕೆಲ ದಿನಗಳಿಂದೀಚೆಗೆ ದಲಿತ ಸಾಹಿತಿ ಎಂದೇ ಪ್ರಖ್ಯಾತರಾದ(ಎನ್ನುವ ಕಾರಣಕ್ಕೇ ಪ್ರಖ್ಯಾತರಾದ) ಆರ್ ಎಸ್ ಎಸ್ ಒಳಗೆ ಎಂದೂ ಕಾಲಿಡದ ದೇವನೂರು ಮಹಾದೇವ ಅವರು ಕಂಡ ಆರ್ ಎಸ್ ಎಸ್ ನ ಆಳ-ಅಗಲಗಳ ಬಗ್ಗೆ ಬಹಳಷ್ಟು ಜನರು ತಿಳಿದುಕೊಂಡಿದ್ದೀರಿ. ಇದೀಗ ನಾವು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಂಡ ಆಳ ಅಗಲಗಳ ಬಗ್ಗೆ ತಿಳಿದುಕೊಳ್ಳೋಣ.

ಡಾ. ಅಂಬೇಡ್ಕರ್ ಅವರು ದಿನಾಂಕ 12-05-1939 ರಂದು ಪುಣೆ ನಗರದ ಭಾವೆ ಶಾಲಾ ಆವರಣದಲ್ಲಿ ನಡೆದ ಆರ್ ಎಸ್ ಎಸ್ ಒಟಿಸಿ ಶಿಬಿರಕ್ಕೆ ಶ್ರೀ ಬಾವೂ ಸಾಹೇಬ್ ಘಡ್ಕರಿ, ದಲಿತ ನಾಯಕರೂ ಹಾಗೂ ಕಾರ್ಮಿಕ ನಾಯಕರೂ ಆದ ಬಾಳಾಸಾಹೇಬ್ ಸಾಳುಂಕೆ ಮುಂತಾದವರೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೈನಿಕರಂತಿದ್ದ ಶಿಬಿರಾರ್ಥಿಗಳ ಶಿಸ್ತು,ಸಮಾನತೆ ಮತ್ತು ಸಂಯಮಗಳನ್ನು ಕಂಡು ಉತ್ತೇಜಿತರಾದ ಅವರು ಸೈನ್ಯದ ಬಗ್ಗೆ,ಸಂಘಟನೆಯನ್ನು ಸದೃಢವಾಗಿ ಕಟ್ಟಿ ಬೆಳೆಸುವ ಬಗ್ಗೆ,ವಿಸ್ತಾರವಾಗಿ ಮಾತನಾಡಿದರು. ಅವರ ತಂದೆಯವರು ಸೈನಿಕ ಸೇವೆಯಲ್ಲಿ ಇದ್ದುದರಿಂದ ಮತ್ತು ಬಾಬಾ ಸಾಹೇಬರೇ ಸ್ವತಃ ಸೇನಾ ಸಂಬಂಧಿತ ಸೇವೆಗಳ ಬಗ್ಗೆ ಅತ್ಯಂತ ಆಸಕ್ತಿ ಹೊಂದಿದ್ದರಿಂದ ಸೈನಿಕರನ್ನುದ್ದೇಶಿಸಿ ಮಾತನಾಡುವಂತೆಯೇ ಮಾತನಾಡಿದರು. ಮತ್ತು ಪ್ರತಿಯೊಬ್ಬ ಶಿಬಿರಾರ್ಥಿಗೂ ಸ್ವತಃ ಮಾರ್ಗದರ್ಶನ ಮಾಡಿದರು.

ಬಾಳಾ ಸಾಹೇಬ್ ಅವರ ದಿನಚರಿಯಲ್ಲಿನ ಉಲ್ಲೇಖಿಸಿ ಅವರ ಭಾಷಣವನ್ನು ನಾವು ಈ ಕೆಳಕಂಡಂತೆ ವಿಸ್ತರಿಸಬಹುದಾಗಿದೆ:

“RSS ಶಿಬಿರದಲ್ಲಿ ಡಾ. ಅಂಬೇಡ್ಕರ್ ಅವರ ಭಾಷಣದ ಭಾವಾನುವಾದ”

ಈ ದೇಶದ ತರುಣ ಶಕ್ತಿಗೆ ನನ್ನ ಪ್ರಣಾಮಗಳು.

ಈ ಶಿಬಿರದೊಳಗೆ ನಾನು ಬಂದಾಗ ಅಲ್ಲೊಬ್ಬ ಶಿಬಿರಾರ್ಥಿಯ ಬಳಿ “ಇಲ್ಲಿ ಪರಿಶಿಷ್ಟ ಜಾತಿಯವರೂ ಶಿಬಿರಾರ್ಥಿಗಳಾಗಿ ಇದ್ದಾರೆಯೇ?” ಎಂದು ನಾನು ಕೇಳಿದೆ. ಅದಕ್ಕೆ ಅವರು “ಇಲ್ಲಿ ಪರಿಶಿಷ್ಟ ಜಾತಿಯ ಯಾರೊಬ್ಬರೂ ಇಲ್ಲ. ಕೇವಲ ಭಾರತೀಯರು ಮಾತ್ರ ಇಲ್ಲಿದ್ದೇವೆ” ಎಂದರು!

ಆದರೂ ನನ್ನೊಳಗಿನ ಸಹಜ ಕುತೂಹಲದಿಂದ ಸೂಕ್ಷ್ಮವಾಗಿ ಅವಲೋಕಿಸಿದಾಗ ಇಲ್ಲಿ ಎಲ್ಲ ಜಾತಿಯ ಯುವಕರೂ ಒಂದಾಗಿ ಕಲೆತಿರುವುದು ನನ್ನ ಗಮನಕ್ಕೆ ಬಂತು. ಜಾತಿ,ಮತಗಳನ್ನು ಮೀರಿ ಸ್ವಚ್ಛ ಮನಸ್ಸಿನಿಂದ ಕೆಲಸ ಮಾಡುವ ಈ ಸಂಘದ ದೃಷ್ಟಿಕೋನವನ್ನು ಆ ಶಿಬಿರಾರ್ಥಿ ಎಷ್ಟು ಸರಳವಾಗಿ ನನಗೆ ತಿಳಿಸಿದರು!

ಈ ಶಿಬಿರದಲ್ಲಿ ನನಗೆ ಎದ್ದು ಕಂಡ ಅಂಶವೆಂದರೆ ಅದು ಶಿಸ್ತು.ಇಲ್ಲಿನ ನಡೆ,ನುಡಿ,ಸಮವಸ್ತ್ರ,ಕೆಲಸ,ಕಾರ್ಯ,ಸಮಯಪಾಲನೆ ಎಲ್ಲವೂ ಎಷ್ಟೊಂದು ಅಚ್ಚುಕಟ್ಟಾಗಿದೆಯೆಂದರೆ, ನಿಮ್ಮನ್ನೆಲ್ಲ ನೋಡಿದಾಗ ನನಗೆ ಸೈನಿಕರೇ ನೆನಪಾಗುತ್ತಾರೆ. ಸೈನ್ಯದಲ್ಲಿಯೂ ಕೂಡಾ ಇದೇ ಶಿಸ್ತು,ಇದೇ ಸಮಯಪಾಲನೆ,ಇದೇ ದೇಶಪ್ರೇಮ ಇವೆಲ್ಲವನ್ನೂ ನಾನು ಕಂಡು ಬೆಳೆದವನಾಗಿದ್ದೇನೆ.

ಪೂಜ್ಯ ಡಾಕ್ಟರ್ ಜೀ ಅವರೊಂದಿಗೆ ಭಾರತದ ವ್ಯವಸ್ಥೆಯ ಬಗ್ಗೆ, ಸಮಾನತೆಯ ಬಗ್ಗೆ ಸಾಕಷ್ಟು ಸುಧೀರ್ಘವಾದ ಚರ್ಚೆಗಳನ್ನು ನಡೆಸಿದ್ದೆ. ಅದರ ಕುರಿತಂತೆ ಅವರ ಕಾರ್ಯಗಳನ್ನೂ ಅರಿತಿದ್ದೆ. ಆದರೆ ಅವರ ಕಾರ್ಯ ಯೋಜನೆಯು ಎಷ್ಟೊಂದು ಶಿಸ್ತುಬದ್ಧ ರೀತಿಯಲ್ಲಿ ನಡೆಯುತ್ತಿದೆ ಎನ್ನುವುದನ್ನು ಮಾತ್ರ ಇದೀಗ ಪ್ರತ್ಯಕ್ಷವಾಗಿ ಕಾಣುತ್ತಿದ್ದೇನೆ.

ನಿಜಕ್ಕೂ ನನ್ನ ಕನಸಿನ ಭಾರತವು ನಿಜವಾಗಿ ಇಲ್ಲಿ ಸಾಕಾರಗೊಳ್ಳುತ್ತಿದೆ.ಖಂಡಿತವಾಗಿಯೂ ಈ ಸಂಘಟನೆಯು ಭಾರತದ ಮೂಲೆ ಮೂಲೆಗಳನ್ನೂ ತಲುಪುತ್ತದೆ, ಹಳ್ಳಿ ಹಳ್ಳಿಗಳಲ್ಲೂ ಪಸರಿಸುತ್ತದೆ, ಭಾರತದ ಭವಿಷ್ಯವನ್ನು ಬೆಳಗಿಸುತ್ತದೆ ಎನ್ನುವ ವಿಶ್ವಾಸ ನನಗೀಗ ಬಂದಿದೆ. ಭಾರತದ ಭವಿಷ್ಯತ್ತಿನ ಈ ಮಹತ್ವಪೂರ್ಣ ಕಾರ್ಯಕ್ಕಾಗಿ ಡಾಕ್ಟರ್ ಜೀ ರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಹಾಗೆಯೇ ತಮ್ಮೆಲ್ಲರಿಗೂ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ.

ಭಾರತ ಮಾತಾ ಕೀ ಜೈ
************
ಬಾಬಾ ಸಾಹೇಬರ ಷೆಡ್ಯೂಲ್ಡ್ ಕಾಸ್ಟ್ಸ್ ಫೆಡರೇಶನ್ ನಿಂದ ಸ್ಪರ್ಧಿಸಿ ಈ ದೇಶದ ಸಂಸದರಾಗಿದ್ದ ಮತ್ತು ಬಾಬಾ ಸಾಹೇಬರ ಆ ಭೇಟಿಯ ಸಂದರ್ಭದಲ್ಲಿ ಅವರೊಂದಿಗಿದ್ದ ಸ್ವತಃ ಬಾಳಾಸಾಹೇಬ್ ಸಾಳುಂಕೆ ಅವರೇ ಇವೆಲ್ಲವನ್ನೂ ತಮ್ಮ ದಿನಚರಿಯಲ್ಲಿ ಬರೆದುಕೊಂಡಿದ್ದಾರೆ. ಅವರ ದಿನಚರಿಯ ಎಲ್ಲ ಸಂಗತಿಗಳನ್ನೂ ಮುದ್ರಿಸಿ ಹೊರತಂದ ಅವರ ಪುತ್ರ ಕಾಶ್ಯಪ್ ಸಾಳುಂಕೆ ಅವರ “ಹಮಾರೆ ಸಾಹಬ್’ ಪುಸ್ತಕದಲ್ಲಿ ಈ ಸಂಗತಿಗಳನ್ನು ಯಥಾವತ್ತಾಗಿ ನಮೂದಿಸಲಾಗಿದೆ.

ಪ್ರವೀಣ್ ಕುಮಾರ್ ಮಾವಿನಕಾಡು ವಾಲ್ ನಿಂದ

Leave a Reply

Your email address will not be published.

ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ
error: Content is protected !!