ತಾಲೂಕ ಅಬಕಾರಿ ಅಧಿಕಾರಿ ವಿರುದ್ಧ ಪ್ರದೀಪ್ ಸೇಟ್ ಧರಣಿ; ತೊಡೆತಟ್ಟಿದ ಕೊಪ್ಪಳದ ಬಾರ್ ಮಾಲೀಕರು

ಪ್ರದೀಪ್ ಶೇಟ್ ಗೆ ತೊಡೆ ತಟ್ಟಿದ ಕೊಪ್ಪಳ ತಾಲೂಕ ಬಾರ್ ಮಾಲೀಕರು

ಇತ್ತೀಚಿಗೆ ಪ್ರದೀಪ್ ಶೆಟ್ 10 ರಿಂದ 20 ಬಾರ್ ಮಾಲೀಕ ಎಂದೆ ಕುಖ್ಯಾತಿ ಪಡೆದಿದ್ದ,
ಆದರೆ ಇತ್ತೀಚಿಗೆ ಕೊಪ್ಪಳ ತಾಲೂಕ ಅಬಕಾರಿ ಮುಖ್ಯ ಅಧಿಕಾರಿಯಾಗಿ ರಮೇಶ್ ಬಿ ಅಗಡಿ ಅವರು ನಿಯೋಜನೆ ಆದಮೇಲೆ ಪ್ರದೀಪ್ ಶೇಟ್ ಅವರ ತೊಡೆಮುರಿದಂತಾಗಿದೆ,
ಅಬಕಾರಿ ಅಧಿಕಾರಿ ರಮೇಶ ಅವರು ನಿಯಮಭಾಹೀರವಾಗಿ ಯಾವುದೇ ಬಾರ್ ಮಾಲೀಕರು ನೆಡೆದುಕೊಂಡರೆ ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಂಡಿದ್ದಾರೆ, ಈ ನಿಟ್ಟಿನಲ್ಲಿ ಪ್ರದೀಪ್ ಶೇಟ್ ಹೊಡೆತನದ ಬಾರ್ ಮೇಲು ಕೂಡ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಂಡಿದ್ದಾರೆ.
ಆದರೆ ಈ ಹಿಂದೆ ಪ್ರದೀಪ್ ಶೆಟ್ ಅಂದರೆ ಯಾವ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿರಲಿಲ್ಲ ಅಂತಹ ದಿಟ್ಟ ನಿರ್ಧಾರ ಕೈಗೊಳ್ಳಲು ಇಲ್ಲಿಯವರೆಗೂ ಯಾವ ಅಧಿಕಾರಿಗಳು ಮುಂದೆ ಬಂದಿರಲಿಲ್ಲ ಪ್ರದೀಪ್ ಸೇಟ್ ಆಡಿದ್ದೆ ಆಟವಾಗಿತ್ತು ಒಂದು ರೀತಿಯಲ್ಲಿ ಮಧ್ಯ ಮಾಫಿಯಾದ ಕಿಂಗ್ಫಿನ್ ಪ್ರದೀಪ್ ಶೆಟ್ ಅನ್ನುವಂತಾಗಿತ್ತು,  ಪ್ರದೀಪ್ ಸೇಟ್ ಹಾಕಿದ ಎಂಜಲು ಕಾಸಿಗೆ ಅಧಿಕಾರಿಗಳು ಬಾಯಿ ಬಿಡುತ್ತಿದ್ದರು ಅನ್ನುವ ಮಾತುಗಳು ಬಾರ್ ಮಾಲೀಕರಲ್ಲಿ ಕೇಳಿಬರುತ್ತಿವೆ.

ಆದರೆ ಕೊಪ್ಪಳ ತಾಲೂಕ ಅಧಿಕಾರಿಯಾಗಿ ರಮೇಶ್ ನಿಯೋಜನೆ ಆದಮೇಲೆ ಪ್ರದೀಪ್ ಶೇಟ್ ಆಟ ಸಂಪೂರ್ಣವಾಗಿ ಬಂದಾಗಿದೆ ಇದಕ್ಕೆ ಡಿಪ್ರೆಶನ್ ಗೆ ಒಳಗಾದ ಪ್ರದೀಪ್ ಶೆಟ್ ಕೊಪ್ಪಳ ತಾಲೂಕಾ ಅಬಕಾರಿ ಅಧಿಕಾರಿ ರಮೇಶ್ ಅವರನ್ನು ಸುಳ್ಳು ದೂರು ಗಳನ್ನು ನೀಡಿ ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದ ಆದರೆ ವರ್ಗಾವಣೆಗೆ ಕೋರ್ಟ್ ತಡೆ ನೀಡಿತು ಇದರ ಹಿನ್ನೆಲೆಯಲ್ಲಿ ರಮೇಶ ಅವರು ಮತ್ತೆ ಅದೇ ಸ್ಥಳಕ್ಕೆ ನಿಯೋಜನೆಗೊಂಡರು.
ಇದರಿಂದ ಮತ್ತಷ್ಟು ಕುಪಿತನಾದ ಪ್ರದೀಪ್ ಶೇಟ್ ಹಾನಗಲ್ ಏನಾದರೂ ಮಾಡಿ ಅಧಿಕಾರಿ ರಮೇಶನನ್ನು ಎತ್ತಂಗಡಿ ಮಾಡಲೇಬೇಕು ಅನ್ನುವ ಉನ್ನಾರದಿಂದ ಬಾರ್ ಅಸೋಸಿಯನ್ ಲೆಟರ್ ಪ್ಯಾಡ್ ಗಳನ್ನು ದುರುಪಯೋಗಪಡಿಸಿಕೊಂಡು ಯಾರ ಸಹ ಮತವು ಇಲ್ಲದೆ ತಾವೇ ವೈಯಕ್ತಿಕ ನಿರ್ಣಯಗಳನ್ನು ತೆಗೆದುಕೊಂಡು ಬಾರ ಮಾಲೀಕರ ಹಕ್ಕುಗಳನ್ನು ಉಲ್ಲಂಘನೆ ಮಾಡಿದ್ದಾರೆ,
ಅದಲ್ಲದೆ ಒಂದು ಎರಡು ಅಂಗಡಿ ಇರುವಂತಹ ಮಾಲೀಕರಿಗೆ ಬೆದರಿಕೆ ಹಾಕಿ ತಮ್ಮ ಹಿಂದೆ ಹೋರಾಟಕ್ಕೆ ಬರುವಂತೆ ಭಯ ಮೂಡಿಸುತ್ತಿದ್ದಾರೆ ಆದರೆ ಯಾವ ಬಾರ್ ಮಾಲೀಕರು ಕೂಡ ಇವರ ಹಿಂದೆ ಹೋಗಲು ಇಷ್ಟಪಡುತ್ತಿಲ್ಲ ಯಾಕೆಂದರೆ ಇವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಬಾರ್ ಮಾಲೀಕರ ಸಂಘವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಅನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಪ್ರದೀಪ್ ಸೇಟ್ ವಿರುದ್ಧ ತಿರುಗಿ ಬಿದ್ದ ಬಾರ್ ಮಾಲೀಕರು ಅಧಿಕಾರಿ ರಮೇಶ್ ಪರವಾಗಿ ಸಹಿ ಸಂಗ್ರಹ ಆಬಿಯಾನ:

ಪ್ರದೀಪ್ ಶೆಟ್ ತನ್ನ ರಕ್ಷಣೆಗಾಗಿ ಬಾರ್ ಮಾಲೀಕರನ್ನು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಅನ್ನುವ ಅರಿವು ಮೂಡಿ ಸ್ವತಃ ಬಾರ್ ಮಾಲೀಕರು ಕೊಪ್ಪಳ ತಾಲೂಕ ಅಬಕಾರಿ ಅಧಿಕಾರಿ ರಮೇಶ್ ಅಗಡಿ ಅವರಿಂದ ನಮಗೆ ಯಾವುದೇ ರೀತಿಯ ಬೇಡಿಕೆ ಆಗಲಿ ನಮಗೆ ಆಮೀಷ ಹೊಡ್ಡುವದಾಗಲಿ ಮಾಡಿಲ್ಲ ನಮಗೆ ದುಡ್ಡು ಕೂಡ ಕೇಳಿಲ್ಲ ಕಾನೂನಾತ್ಮಕವಾಗಿ ಸನ್ನದು ಪಾಲನೆ ಮಾಡಿ ಅಂತ ಮಾತ್ರ ಹೇಳಿದ್ದಾರೆ, ಅವರಿಂದ ನಮಗೆ ಯಾವುದೇ ರೀತಿ ತೊಂದರೆ ಆಗಿಲ್ಲ ಅವರ ವಿರುದ್ಧ ಇಲ್ಲಸಲ್ಲದ ಸುಳ್ಳು ದೂರುಗಳನ್ನು ನೀಡಿ ಎಲ್ಲಾ ಬಾರ್ ಗಳ ಮಾಲೀಕರಿಗೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಕೊಪ್ಪಳ ತಾಲೂಕಿನ ಪ್ರದೀಪ್ ಶೇಟ್ ಹಾನಗಲ್ ಹೊರತುಪಡಿಸಿ ಉಳಿದ ಎಲ್ಲಾ ಬಾರ್ ಮಾಲೀಕರು ಸ್ವತಃ ತಾವೇ ಬರೆದುಕೊಟ್ಟು ಸಹಿ ಮಾಡಿದ್ದಾರೆ ಬಾರ್ ಮಾಲೀಕರು ಈ ಪ್ರತಿಯನ್ನು ಕೊಪ್ಪಳ ಸಂಸತ್ ಕ್ಷೇತ್ರದ ಸಂಸದ ಸಂಗಣ್ಣ ಕರಡಿ, ಸಚಿವರಾದ ಹಾಲಪ್ಪ ಆಚಾರ್, ಉಸ್ತುವಾರಿ ಸಚಿವರಾದ ಆನಂದ್ ಸಿಂಗ್, ಅಬಕಾರಿ ಜಂಟಿ ಆಯುಕ್ತರು ಹೊಸಪೇಟೆ, ಅಬಕಾರಿ ಆಯುಕ್ತರು ಬೆಳಗಾವಿ, ಅಬಕಾರಿ ಆಯುಕ್ತರು ಬೆಂಗಳೂರು, ಅಬಕಾರಿ ಸಚಿವರು ಕರ್ನಾಟಕ ಸರ್ಕಾರ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಆರ್ಥಿಕ ಇಲಾಖೆ. ಇವರಿಗೆ ಕಳುಹಿಸಿ ಕೊಟ್ಟಿದ್ದಾರೆ.

ಡಿಸಿ ಆಫೀಸಿನ ಮುಂದೆ ಪ್ರತಿಭಟನೆ ಕುಳಿತ ಪ್ರದೀಪ್ ಶೇಟ್ & ಸನ್ಸ್

ಏನಾದರೂ ಮಾಡಿ ಅಧಿಕಾರಿ ರಮೇಶ ಅವರನ್ನು ಕೊಪ್ಪಳದಿಂದ ಎತ್ತಂಗಡಿ ಮಾಡಿಸಲೇಬೇಕು ಎಂದು ಆನಂದ್ ಸಿಂಗ್ ಅವರನ್ನ ದುಂಬಾಲು ಬಿದ್ದಿದ್ದ ಪ್ರದೀಪ್ ಶೆಟ್ ಗೆ ಆನಂದ್ ಸಿಂಗ್ ಸರಿಯಾದ ಮಂಗಳಾರತಿ ಮಾಡಿ ಮುಖಭಂಗ ಮಾಡಿ ಕಳುಹಿಸಿದ್ದಾರೆ ಅನ್ನುವ ವಿಷಯ ಬಹಿರಂಗ ವಾಗಿ ಅಲ್ಲಲ್ಲಿ ಹರಿದಾಡುತ್ತಿದೆ,
ಆದರೆ ಈ ಎಲ್ಲಾದರಿಂದ ಬೇಸತ್ತು ಡಿಪ್ರೆಶನ್ ಗೆ ಒಳಗಾಗಿರುವ ಪ್ರದೀಪ್ ಸೇಟ್ ಅಧಿಕಾರಿ ರಮೇಶ್ ಅವರನ್ನು ವರ್ಗಾವಣೆ ಮಾಡಲೇ ಬೇಕು ಎಂದು ಇದೇ ತಿಂಗಳು 26 ನೇ ತಾರೀಕು ಜಿಲ್ಲಾ ಅಧಿಕಾರಿಗಳ ಕಚೇರಿಯ ಮುಂದೆ ಧರಣಿ ಮಾಡಿದ್ದಾರೆ, ಆದರೆ ಧರಣಿಯಲ್ಲಿ ಕೊಪ್ಪಳ ತಾಲೂಕಿನ ಯಾವ ಬಾರ್ ಮಾಲೀಕರು ಭಾಗವಹಿಸದೆ ಇರುವುದು ವಿಶೇಷ ಅಂತಲೇ ಹೇಳಬಹುದು ಕೇವಲ ತಮ್ಮ ಮನೆಯವರು ಹಾಗೂ ಬೆಂಗಳೂರು ದಾವಣಗೆರೆ, ಮೈಸೂರು ಇನ್ನಿತರ ಕಡೆಯಿಂದ ಜನರನ್ನು ಕರೆಸಿ ಮತ್ತು ತಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಹಾಗೂ ಕೂಲಿ ಕೊಟ್ಟು ಜನನನ್ನು ಸೇರಿಸಿ ಪ್ರದೀಪ್ ಶೇಟ್ ಅವರು
ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಮಾಡಿರುವ ಈ ಧರಣಿ ಎಷ್ಟು ಯಶಸ್ವಿ ಆಗುತ್ತೆ ಅನ್ನುವುದೇ ಕಾತುರದ ವಿಷಯ!?.

Leave a Reply

Your email address will not be published. Required fields are marked *

error: Content is protected !!