ಶಿಕ್ಷಕರ ಸೇವೆಯು ಅನನ್ಯವಾದದ್ದು; ಚಂದ್ರಶೇಖರ ಪಾಟೀಲ ಹಲಗೇರಿ

ಜಿಬಿ ನ್ಯೂಸ್ ಕನ್ನಡ ಸುದ್ದಿ ಕೊಪ್ಪಳ: ಶಿಕ್ಷಕ ವೃತ್ತಿಯ ಸೇವೆಯುವ ಅಪಾರವಾಗಿದ್ದು, ಅದನ್ನು ಮರೆಯಲು ಸಾಧ್ಯವಾಗುವುದಿಲ್ಲ. ಅವರ ಸೇವೆಯು ಅನನ್ಯವಾಗಿದ್ದು, ನಾವು ಯಾವುದೇ ರೀತಿಯಿಂದಲೂ ತೀರಿಸಲಾಗದು ಎಂದು ಚಂದ್ರಶೇಖರ ಪಾಟೀಲ ಹಲಗೇರಿ ಅವರು ನುಡಿದರು.

ಅವರು ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ 2000-2001ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಡಾ.ಬಸವರಾಜ ಪೂಜಾರ ಅವರ ಐದು ಕೃತಿಗಳ ಲೋಕಾರ್ಪಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶದ ಅನೇಕ ಯುವಕ ಯುವತಿಯರು ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರ ಸಾಧನೆಗಳಿಗೆ ಶಿಕ್ಷಕರ ಕೊಡುಗೆ ಅಪಾರವಾಗಿದ್ದು, ಅವರ ಕೊಡುಗೆಗಳನ್ನು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಈ ಕಾರ್ಯಕ್ರಮವನ್ನು ಕೊಪ್ಪಳ ನಗರಸಭೆ ಸದಸ್ಯರಾದ ಗುರುರಾಜ ಹಲಗೇರಿ ಅವರು ಉದ್ಘಾಟಿಸಿದರು. ಮತ್ತೋರ್ವ ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಠಗಿ ಅವರು ಮಾತನಾಡಿ ಹಳೆಯ ವಿದ್ಯಾರ್ಥಿಗಳು ಗುರುಗಳ ಸೇವೆಯ ಋಣವನ್ನು ಈ ರೀತಿ ತೀರಿಸುತ್ತಿರುವುದು ಶ್ಲಾಘನೀಯ ಎಂದರು. ಕೊಪ್ಪಳ ಜಿಲ್ಲೆಯ ಕೋಮುಸೌಹಾರ್ದತೆಯ ತಾಣಗಳು ಕೃತಿಯ ಕುರಿತು ಮಂಜುನಾಥ ಡೊಳ್ಳಿನ, ಮಾತೆಂಬುದು ಮಕರಂದ ಕೃತಿಯ ಕುರಿತು ಜಾಫರ್ ಗೇಟಿನ್, ಕಾಲ್ನಡಿಗೆ ಕೃತಿಯ ಕುರಿತು ಗವಿಸಿದ್ಧಪ್ಪ ಡೊಡ್ಡಮನಿ, ಹಿತ್ತಲಮದ್ದು ಕೃತಿಕ ಕುರಿತು ಮಂಜುನಾಥ ತಿಮ್ಮಕ್ಕನವರ ಹಾಗೂ ಮೌನದೊಳಗಿನ ಮಾತು ಕೃತಿಯ ಕುರಿತು ಶಂಕ್ರಯ್ಯ ಅಬ್ಬಿಗೇರಿಮಠ ಅವರು ಮಾತನಾಡಿದರು. ವೇದಿಕೆಯ ಮೇಲೆ ಮಾನ್ವಿಯ ವಕೀಲರಾದ ವೀರನಗೌಡ, ರಾಘವೇಂದ್ರರಾವ್ ಮತ್ತು ಶ್ರೀನಿವಾಸ ಗುಪ್ತಾ ಉಪಸ್ಥಿತರಿದ್ದರು. ಪ್ರಮೋದ ತುರವಿಹಾಳ ಅನಿಸಿಕೆ ವ್ಯಕ್ತಪಡಿಸಿದರು. ರೇಖಾ ಸವಡಿ, ಪರಶುರಾಮ ಬಣ್ಣದಭಾವಿ ಅವರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕು. ನಿಧಿ ಸವಡಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಅಡಿವೆಪ್ಪ ಬೋರಣ್ಣನವರ ಸ್ವಾಗತಿಸಿದರೆ, ಕೊನೆಗೆ ಮಿನಾಕ್ಷಿ ಉಪಲಾಪುರ ಅವರು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮಂಜುಳಾ ಪಾಟೀಲ ನೆರವೇರಿಸಿದರು.

Leave a Reply

Your email address will not be published.

ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ
error: Content is protected !!