ವರದಿ:ಮಹೇಶ ಕಡೆಮನಿ
ಮಾದಿಗ ಮಹಾಸಭಾ ಟ್ರಸ್ಟ್ ನೂತನ ಅಧ್ಯಕ್ಷರಾಗಿ ರೇವಪ್ಪ ಕಟ್ಟಿಮನಿ ಆಯ್ಕೆ
ಕೊಪ್ಪಳ : ನಗರದ 12ನೇ ವಾರ್ಡ್ನ ಬಸವೇಶ್ವರ ನಗರದ ಮಾದಿಗ ಮಹಾಸಭಾ ಟ್ರಸ್ಟ್ನ ಪೂರ್ವಭಾವಿ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಮಾದಿಗ ಮಹಾಸಭಾ ಟ್ರಸ್ಟ್ನ ಅಧ್ಯಕ್ಷರಾಗಿ ರೇವಪ್ಪ ಕಟ್ಟಿಮನಿ, ಉಪಾಧ್ಯಕ್ಷರಾಗಿ ಚನ್ನಬಸಪ್ಪ ಹೊಳೆಯಪ್ಪನವರ, ಮಾಯಪ್ಪ ಕಡೇಮನಿ, ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ದೊಡ್ಡಮನಿ, ಸಹ ಕಾರ್ಯದರ್ಶಿ ಗಾಳೇಪ್ಪ ಬಿಸರಳ್ಳಿ, ಖಜಾಂಚಿ ವಿರೂಪಾಕ್ಷಪ್ಪ ದೊಡ್ಡಮನಿ ಅವರನ್ನು ಆಯ್ಕೆ ಮಾಡಲಾಗಿದೆ.
ಮಾದಿಗ ಸಮುದಾಯವು ಆರ್ಥಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕವಾಗಿ ಸಾಕಷ್ಟು ಹಿಂದುಳಿದ ಸಮಾಜವಾಗಿದೆ. ಸಮಾಜವು ಅಭಿವೃದ್ಧಿಯನ್ನು ಕಂಡುಕೊಳ್ಳಬೇಕಾದರೆ ಪ್ರತಿಯೊಬ್ಬರು ಸಹ ಒಗ್ಗಟ್ಟಿನಿಂದ ಸಮಾಜದ ಏಳಿಗೆಗೆ ಶ್ರಮಿಸಬೇಕು. ಸಮಾಜಕ್ಕೆ ಅವಶ್ಯಕವಾಗಿರುವ ಮೂಲ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನಾವೆಲ್ಲರೂ ಒಗ್ಗಟ್ಟಿನಿಂದ ಸರಕಾರದ ಗಮನಕ್ಕೆ ತರಬೇಕು. ಅಂದಾಗ ಮಾತ್ರ ನಾವುಗಳು ಬದಲಾವಣೆ ಕಾಣಲು ಸಾಧ್ಯ, ಸಮಾಜದ ಪ್ರತಿಯೊಬ್ಬರು ಸಹ ಮಕ್ಕಳಿಗೆ ಕಡ್ಡಾಯವಾಗಿ ಉನ್ನತ ಮಟ್ಟದ ಶಿಕ್ಷಣವನ್ನು ನೀಡಬೇಕು. ನಾವುಗಳು ಶೈಕ್ಷಣಿಕವಾಗಿ ಬಲಿಷ್ಠರಾದರೆ ಮಾತ್ರ ಸಮಾಜವನ್ನು ಬಲಿಷ್ಠ ಮಾಡಲು ಸಾಧ್ಯವಾಗಲಿದೆ ಎಂದರು.
ಇದೇ ವೇಳೆ ಮಾದಿಗ ಮಹಾಸಭಾ ನೂತನ ಯುವಕ ಮಂಡಳಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಮಾದಿಗ ಮಹಾಸಭಾ ಯುವಕ ಮಂಡಳಿಯ ಅಧ್ಯಕ್ಷರಾಗಿ ಶಾಂತಕುಮಾರ್ ದೊಡ್ಡಮನಿ, ಕಾರ್ಯದರ್ಶಿ ಮಂಜುನಾಥ ಕಿಡದಾಳ , ಉಪಾಧ್ಯಕ್ಷರಾಗಿ ಮಂಜುನಾಥ ಹಳ್ಳಿಕೇರಿ, ಖಜಾಂಚಿ ವಿನಾಯಕ ಕಿಡದಾಳ ಅವರನ್ನು ಆಯ್ಕೆ ಮಾಡಿ ಸನ್ಮಾನಿಸಿ, ಗೌರವಿಸಲಾಯಿತು.
ಮುಖಂಡರಾದ
ಧನಂಜಯ ಮಾಲ್ಗಿತ್ತಿ ಗವಿಸಿದ್ದಪ್ಪ ಮನ್ನೂರ್ ಬಸವರಾಜ್ ಚಾಲೀಸ್ ನಿಂಗಪ್ಪ ದೊಡ್ಮನಿ ರಮೇಶ್ ಗಿಣಿಗೇರಿ ಪರಶುರಾಮ್ ಕಿಡದಾಳ ಚಂದ್ರಶೇಖರ್ ದೊಡ್ಮನಿ ರಾಜಶೇಖರ್ ದೊಡ್ಮನಿ ಶಿವಪುತ್ರಪ್ಪ ಬಂಗಾರಿ ಮೈಲಪ್ಪ ಕಿರುಬಂಡಿ