ನಿಮಗೆ ಕೈ ಮುಗಿಯುತ್ತೇವೆ ನಮಗೆ ಶೌಚಾಲಯ ಕಟ್ಟಿಸಿ ಕೊಡಿ..!ಕಣ್ಣೀರಿಟ್ಟ ವಯಸ್ಕ ಮಹಿಳೆ. ಹೈಟೆಕ್ ಶೌಚಾಲಯ ನಿರ್ಮಿಸಿ ಕೊಡಲು ಇ.ಓ ಡಿ.ಮೋಹನ್ ಭರವಸೆ.

GBnewskannada ಕಾರಟಗಿ : ಕಾರಟಗಿ ತಾಲೂಕಿನ  ಸಮೀಪದ ಬೂದುಗುಂಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಲಸಮುದ್ರ ತಿಮ್ಮಾಪುರ ಗ್ರಾಮಗಳ ಮಹಿಳೆಯರ ಅನಾದಿಕಾಲದಿಂದಲೂ ಇರುವ ಮಹಿಳಾ ಶೌಚಾಲಯವನ್ನು ಪುನರ್ ನಿರ್ಮಾಣಕ್ಕೆ ಆಗ್ರಹಿಸಿ ಕಾರಟಗಿ ತಾಲೂಕು ಪಂಚಾಯಿತಿ ಇ ಓ ಮೋಹನ್ ಅವರಿಗೆ ಮನವಿ ಪತ್ರಿಕೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಮತ್ತು ಕಾರಟಗಿ ಪಿಎಸ್ಐ ತಾರಾ ಬಾಯಿ ಜಂಟಿಯಾಗಿ ಹಾಲ ಸಮುದ್ರ ತಿಮ್ಮಾಪುರ ಗ್ರಾಮಕ್ಕೆ ಗುರುವಾರದಂದು  ಗ್ರಾಮ ಪಂಚಾಯತಿಯ ಪಿಡಿಒ ಜುಬೇದ ನಾಯಕ ಸೇರಿದಂತೆ ಗ್ರಾಮ ಪಂಚಾಯತಿಯ ಸದಸ್ಯರುಗಳು ಶೌಚಾಲಯದ ಸ್ಥಳ ಪರಿಶೀಲನೆಗೆ ಆಗಮಿಸಿದ್ದರು. ಕಾರಟಗಿಯ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಈ ಮೋಹನ್ ಮಾತನಾಡಿ ಹಾಲ ಸಮುದ್ರ ಗ್ರಾಮದ 5ನೇ ವಾರ್ಡಿನಲ್ಲಿರುವ ಹಳೆಯ ಸಮುದಾಯ ಬಯಲು ಶೌಚಾಲಯ ಇದೆ ಆ ಶೌಚಾಲಯ ಇರುವ ಕಾರಣ ಸುತ್ತಮುತ್ತಲ ಇರುವ ಮನೆಯವರು ಆ ಶೌಚಾಲಯದಿಂದ ನಮಗೆ ದುರ್ವಾಸನೆ ಉಂಟಾಗುತ್ತದೆ ಆದಕಾರಣ ಇಲ್ಲಿ ನಮಗೆ ಶೌಚಾಲಯ ಬೇಡ ಎಂದು ಅಲ್ಲಿಯ ಸಮೀಪದ ಕೆಲವು ಜನ ಮನವಿ ಮೂಲಕ ನಮ್ಮಲ್ಲಿ ಕೇಳಿಕೊಂಡಿದ್ದಾರೆ. ಇನ್ನು ಕೆಲವು ಜನರು ಮನೆಗೊಂದು ಶೌಚಾಲಯ ಕಟ್ಟಿಸಿಕೊಂಡರು ಸಹಿತ ಇನ್ನೂ ಕೆಲವರಿಗೆ ಸ್ವಂತ ಮನೆ ಇಲ್ಲದ ಕಾರಣ ಬಯಲು ಶೌಚಾಲಯ ಅನಿವಾರ್ಯವಾಗಿದೆ. ಎಂದು ನೂರಾರು ಮಹಿಳೆಯರು ಆಗಮಿಸಿ ನಮ್ಮಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದಕಾರಣ ಅಲ್ಲಿ ಶೌಚಾಲಯದ ಸಮೀಪದಲ್ಲಿ ಇರತಕ್ಕಂತಹ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮತ್ತು ಇನ್ನು ಕೆಲವರಿಗೆ ಶೌಚಾಲಯ ಅವಶ್ಯಕತೆ ಇರುವುದರಿಂದ ಅವರಿಗೆ ಅನುಕೂಲವಾಗುವಂತೆ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ತೀರ್ಮಾನಿಸಿದ್ದೇವೆ. ಮತ್ತು ಆ ಜಾಗದಲ್ಲಿ ಬೇರೆಯವರು ಗುಡಿಸಲು ಮನೆ ಇನ್ನು ಕೆಲವು ಚಟುವಟಿಕೆಗಳಿಗೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಬಂದಿದೆ ಆದಕಾರಣ ಈ ಗ್ರಾಮದ ಅಭಿವೃದ್ಧಿ ಅಧಿಕಾರಿಗಳಿಗೆ ಆ ಜಾಗದಲ್ಲಿ ಯಾರು ಹೋಗದ ಹಾಗೆ ತಂತಿ ಬೇಲಿ ಹಾಕುವಂತೆ ಮುತ್ತು ಆ ಜಾಗವನ್ನು ಕಾಯ್ದಿರಿಸುವಂತೆ ಆದೇಶಿಸಿದ್ದೇವೆ. ಮತ್ತು ಆ ಜಾಗವನ್ನು ನಮ್ಮ ಸ್ವಾಧೀನಕ್ಕೆ ಪಡೆದುಕೊಂಡ ನಂತರ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಕಳಿಸುತ್ತಿದ್ದೇವೆ ನಾವೇ ಮಂಜೂರು ಆದ ತಕ್ಷಣವೇ ಯಾರಿಗೆ ತೊಂದರೆ ಆಗದಂತೆ ಆ ಜನಗಳ ಮುಂದೆ ಮತ್ತು ಅವರ ಅಭಿಪ್ರಾಯದಂತೆ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಮುಂದಾಗುತ್ತೇವೆ ಅಲ್ಲಿಯವರೆಗೆ ಸಾರ್ವಜನಿಕರು ಮಹಿಳೆಯರು ಯಾವುದೇ ಗಲಾಟೆ ಜಗಳ ಮಾಡಿಕೊಳ್ಳದ ಹಾಗೆ ಇರುವಂತೆ ಹೇಳಿದರು. ಈ ಸಂದರ್ಭದಲ್ಲಿ ಸರಸ್ವತಿ ವಿರೂಪಮ್ಮ. ಗಂಗಮ್ಮ. ಮುರುಡಮ್ಮ ರೇಣುಕಮ್ಮ ದೇವಮ್ಮ ಮರಿಯಮ್ಮ. ಶಂಕ್ರಮ್ಮ. ಚನ್ನಬಸಮ್ಮ ಪದ್ದಮ್ಮ ಹಾಲಸಮುದ್ರ ಗ್ರಾಮದ ಹಿರಿಯ ಮಹಿಳೆಯರು ಗ್ರಾಮಸ್ಥರು ಮತ್ತನೇಕರು ಉಪಸ್ಥಿತರಿದ್ದರು.

Leave a Reply

Your email address will not be published.

ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ
error: Content is protected !!