ಈ ಬಾರಿ ಪರಣ್ಣನಿಗೆ ಬಿಜೆಪಿ ಟಿಕೆಟ್ ಸಿಕ್ಕರೆ ಸೋಲು ಖಚಿತ: ಬಿಜೆಪಿ ಕಾರ್ಯಕರ್ತರು

ಸುದ್ದಿ ವಿಶ್ಲೇಷಣೆ: ಗೋವಿಂದರಾಜ್ ಬೂದಗುಂಪಾ

ವಿಧಾನಸಭಾ ಚುನಾವಣೆಗೂ ಮೊದಲು ಕಾರ್ಯಕರ್ತರು ಎಂದರೆ ಪ್ರೀತಿಯಿಂದ ಅಚ್ಚುಮೆಚ್ಚಿನಿಂದ ಮಾತನಾಡುತ್ತಿದ್ದ ಪರಣ್ಣ ಮುನವಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬಂದ ನಂತರ ಕಾರ್ಯಕರ್ತರು ಅಂದರೆ ಮೂಗು ಮುರಿಯುತ್ತಾ ಕಾರ್ಯಕರ್ತರನ್ನು ಬೈದುಕೊಳ್ಳುತ್ತಾ ತಿರುಗುವುದೇ ಅವರ ಕೆಲಸವಾಗಿಬಿಟ್ಟಿದೆ.

ನಿಮ್ಮ ಬೂತ್ ನಲ್ಲಿ ನನಗೆ ವೋಟ್ ಜಾಸ್ತಿ ಬಂದಿಲ್ಲ ನಿಮ್ಮ ಊರಿನಲ್ಲಿ ನನಗೆ ವೋಟ್ ಜಾಸ್ತಿ ಬಂದಿಲ್ಲ ನಿಮ್ಮ ಪಂಚಾಯತ್ ನನ್ನ ಪರವಾಗಿಲ್ಲಾ ನಾನ್ಯಾಕೆ ನಿಮಗೆ ಕೆಲಸ ಮಾಡಬೇಕು ಬರಿ ಇಂತಹದೇ ಮಾತುಗಳು ಪರಣ್ಣ ಮನವಳ್ಳಿಯ ಬಾಯಲ್ಲಿ,

ನನ್ನ ಹತ್ತಿರ ನೀವು ಬರಲೇಬೇಡಿ ಅನ್ನುವಂತಹ ಧೋರಣೆಯಿಂದ ಮಾತನಾಡುವ ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ,
ಈ ಬಾರಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪರಣ್ಣ ಮನವಳ್ಳಿಗೆ ಸಿಗಲೇಬಾರದು ಅನ್ನುವ ನಿಟ್ಟಿನಲ್ಲಿ ಕಾರ್ಯಕರ್ತರು ಒಳ ಒಳಗೆ ಪರಣ್ಣ ಮನವಳ್ಳಿಯ ವಿರುದ್ಧ ಕೆಲಸ ಮಾಡುತ್ತಿದ್ದಾರೆ,
ಕಾರ್ಯಕರ್ತರನ್ನು ಚುನಾವಣೆಯಲ್ಲಿ ದುಡಿಸಿಕೊಂಡ ಪರಣಮನವಳ್ಳಿ ಕಾಲ ಕಸಕ್ಕಿಂತ ಕಡೆಯಾಗಿ ನೋಡಿರುವದೇ ಇದಕ್ಕೆಲ್ಲ ಕಾರಣ.

ಶಾಸಕರ ಮಗ ಸಾಗರನ ಹೊಡೆತಕ್ಕೆ ನಲಗುತ್ತಿರುವ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು:

ಅಕ್ಷರಸಹ ಬಿಜೆಪಿಗೆ ಪರಣ್ಣ ಮನವಳ್ಳಿ ಬೇಡವೇ ಬೇಡ ಅನ್ನುತ್ತಿರುವಾಗ ಪರಣಮನವಳ್ಳಿ ತಮ್ಮ ಸುಪುತ್ರನಾದ ಸಾಗರ್ ಮನುವಳ್ಳಿಯನ್ನು ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತಿದ್ದಾರೆ,
ಜನರ ಪ್ರೀತಿ ಗಳಿಸುವಲ್ಲಿ ಸಾಗರ ಮನವಳ್ಳಿ ಸಂಪೂರ್ಣ ವಿಫಲವಾಗಿದ್ದಾರೆ ಯಾಕೆಂದರೆ ಜನರ ಪ್ರೀತಿಯನ್ನು ಗಳಿಸುವದನ್ನು ಬಿಟ್ಟು ಪರ್ಸೆಂಟೇಜ್ ಲೆಕ್ಕಾಚಾರ ಮಾಡುತ್ತಿದ್ದಾರೆ ಅನ್ನುವ ಒದಂತಿಗಳು ಕ್ಷೇತ್ರದ ತುಂಬಾ ಓಡಾಡುತ್ತಿವೆ,

ಸಾಗರ್ ಮುನವಳ್ಳಿ

ಶಾಸಕರು ಯಾವುದೇ ಕೆಲಸಗಳು ಮಾಡಬೇಕು ಅಂದರೆ ಮಗ ಸಾಗರ್ ನ ಅಪ್ಪಣೆ ಬೇಕಂತೆ, ಮೊದಲಿಗೆ ಕಾರ್ಯಕರ್ತರು ಸಾಗರ್ ಮನುವಳ್ಳಿಯನ್ನು ಭೇಟಿಯಾಗಿ ನಂತರವೇ ಶಾಸಕರನ್ನು ಭೇಟಿಯಾಗಬೇಕು ಅಂದಾಗ ಮಾತ್ರ ಕೆಲಸ ಆಗುತ್ತದೆ ಇಲ್ಲದಿದ್ದರೆ ಸಾಧ್ಯವೇ ಇಲ್ಲ ಅನ್ನುವ ಮಾತು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಹರಿದಾಡುತ್ತಿದೆ,
ಎಳ್ಳಷ್ಟು ರಾಜಕೀಯ ಜ್ಞಾನವಿಲ್ಲದ ಸಾಗರ ಮನವಳ್ಳಿ ಹಿರಿಯ ಬಿಜೆಪಿ ಮುಖಂಡರನ್ನು ಅವಮಾನಗೊಳಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಬಿಜೆಪಿಯ ಮುಂದಿನ ದಾರಿಗೆ ಮುಳ್ಳಾಗುವುದು ಖಚಿತ,
ಕಾರ್ಯಕರ್ತರು ಮನೆ ಬಾಗಿಲಿಗೆ ಅಥವಾ ಕಾರ್ಯಾಲಯಕ್ಕೆ ಹೋದರೆ “ಸಾಗರ್ ಭೇಟಿಯಾಗಿ” “ಸಾಗರನನ್ನು ಭೇಟಿಯಾಗಿ” ಅನ್ನುವ ಮಾತುಗಳೇ ಕೇಳಿ ಬರುತ್ತಿವೆಯಂತೆ ಹೀಗಾದರೆ ಶಾಸಕರು ಯಾಕೆ ಬೇಕು ಅನ್ನುವುದು ನಮ್ಮ ಮಾತು.

ವೈಯಕ್ತಿಕ ಹಿತಾಸಕ್ತಿಗಾಗಿ ಪಕ್ಷವನ್ನು ಬಲಿಕೊಡುತ್ತಿದ್ದಾರೆ ಶಾಸಕ ಪರಣ್ಣ ಮನುವಳ್ಳಿ:

ಶಾಸಕ ಪರಣ್ಣ ಮನವಳ್ಳಿಯವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಪಕ್ಷವನ್ನು ಅಕ್ಷರ ಸಹ ಬಲಿ ಕೊಡುತ್ತಿದ್ದಾರೆ.
ಕಾರ್ಯಕರ್ತರನ್ನು ಕಾಲು ಕಸದಂತೆ ಕಾಣುತ್ತಿದ್ದಾರೆ ಪ್ರತಿಯೊಂದು ಪಕ್ಷಕ್ಕೂ ಕಾರ್ಯಕರ್ತರೇ ಜೀವಾಳ ಆದರೆ ಇವರಿಗೆ ಪರ್ಸೆಂಟೇಜ್ ಮಾತ್ರ ಉಸಿರು ಅನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಅಂತ ಜನ ಮೂಗು ಮುರಿಯುತ್ತಿದ್ದಾರೆ, ಪರ್ಸೆಂಟೇಜ್ ಕೊಟ್ಟರೆ ಎಲ್ಲಾ ಪಕ್ಷದವರಿಗೂ ಕೆಲಸ ಕೊಟ್ಟುಬಿಡುತ್ತಾರೆ ಅನ್ನುವುದು ಕೂಡ ಜನರ ಬಾಯಲ್ಲಿ ಹರಿದಾಡುತ್ತಿದೆ,
ಈಗಾಗಲೇ ಗಂಗಾವತಿಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹೆಸರು ಹಳ್ಳ ಹಿಡಿದು ಹೋಗಿದೆ ಶಾಸಕ ಪರಣ್ಣ ಮನವಳ್ಳಿ ಅವರ ನಡತೆಯಿಂದ,
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಒಂದು ವೇಳೆ ಗ್ರಾಮೀಣ ಭಾಗದಲ್ಲಿ ಬಿಜೆಪಿಗೆ ವೋಟ್ ಕೊಡಿ ಎಂದರೆ ಕಾರ್ಯಕರ್ತರಿಗೆ ಪೊರಕೆ ಏಟು ಬೀಳುವುದು ಖಚಿತ.

ನೀವೇನು ದುಡಿದಿದ್ದೀರಿ ನಾನು ದುಡ್ಡು ಖರ್ಚು ಮಾಡಿದ್ದಕ್ಕೆ ಗೆದ್ದಿದ್ದೇನೆ ಶಾಸಕ ಮನವಳ್ಳಿಯ ದರ್ಪದ ಮಾತುಗಳು ಕಾರ್ಯಕರ್ತರನ್ನು ಸಿಟ್ಟಿಗೆ ಎಬ್ಬಿಸಿದೆ ಮುಂದಿನ ವಿಧಾನಸಭಾ ಚುನಾವಣೆಯ ಟಿಕೆಟ್ ಪರಣ್ಣ ಮನುವಳ್ಳಿಗೆ ಸಿಗಲೇಬಾರದು ಅನ್ನುವ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ, ಒಂದು ವೇಳೆ ಪರಣ್ಣ ಮನವಳ್ಳಿಗೆ ಸಿಕ್ಕಿದ್ದೇ ಆದರೆ ಪರಣ್ಣ ಮನವಳ್ಳಿಯ ವಿರುದ್ಧ ಪಕ್ಷದ ಕಾರ್ಯಕರ್ತರು ತೊಡೆತಟ್ಟುವ ಸಂದರ್ಭ ಎದುರಾಗುವುದರಲ್ಲಿ ಎರಡು ಮಾತಿಲ್ಲ, ಕಾರ್ಯಕರ್ತರನ್ನು ಬಿಟ್ಟು ಹೇಗೆ ಚುನಾವಣೆ ಮಾಡುತ್ತಾರೆ ನಾವು ನೋಡುತ್ತೇವೆ ಅಂತ ಬಿಜೆಪಿ ಕಾರ್ಯಕರ್ತರು ಕಟಿಬದ್ಧರಾಗಿ ನಿಂತಿದ್ದಾರೆ ಪರಣ್ಣ ಮನವಳ್ಳಿಯ ವಿರುದ್ಧ,
ಇವೆಲ್ಲದರ ನಡುವೆ ಹೈಕಮಾಂಡ್ ಪರಣ್ಣ ಮನವಳ್ಳಿ ಅವರಿಗೆ ಟಿಕೆಟ್ ನೀಡಿದ್ದೆ ಆದರೆ ಗಂಗಾವತಿಯಲ್ಲಿ ಬಿಜೆಪಿ ಠೇವಣಿ ಕಳೆದುಕೊಳ್ಳುವುದರಲ್ಲಿ ಯಶಸ್ವಿ ಆಗುತ್ತೆ ಅನ್ನಬಹುದು.

1 thought on “ಈ ಬಾರಿ ಪರಣ್ಣನಿಗೆ ಬಿಜೆಪಿ ಟಿಕೆಟ್ ಸಿಕ್ಕರೆ ಸೋಲು ಖಚಿತ: ಬಿಜೆಪಿ ಕಾರ್ಯಕರ್ತರು

Leave a Reply

Your email address will not be published.

ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಕೊಪ್ಪಳದ ನಾಲ್ಕು ವರ್ಷದ ಬಾಲಕ ಅಗಸ್ತ್ಯನಿಗೆ ಒಲಿದ ಒಲಿದ ನೊಬೆಲ್ ಪ್ರಶಸ್ತಿ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ಎಲ್ಲಾ ಪ್ರಕರಣದಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ಥ ದಲಿತನಾದ ಮಾತ್ರಕ್ಕೆ ಕಾಯಿದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ - ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಶಾಸಕ ರಾಘವೇಂದ್ರ ಹಿಟ್ನಾಳ್ ಸುದ್ದಿಗೋಷ್ಠಿ
error: Content is protected !!