ಇಂದು ಬೆಂಗಳೂರಿನ ಡಿಕೆಶಿ ಕಚೇರಿಯಲ್ಲಿ ಎಚ್ ಆರ್ ಶ್ರೀನಾಥ್ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಯಿತು.
ಹಲವು ಸುತ್ತುಗಳ ಮಾತುಕತೆ ನಂತರ ಎಚ್ ಆರ್ ಶ್ರೀನಾಥ್ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ, ಎಚ್ ಆರ್ ಶ್ರೀನಾಥ್ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆಯಲ್ಲಿ ಗಂಗಾವತಿಯ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಶಿವರಾಜ್ ತಂಗಡಗಿ ಮಾಜಿ ವಿಧಾನ ಪರಿಷತ್ ಸದಸ್ಯ ಕರಿಯಣ್ಣ ಸಂಗಟಿ ಜಿಲ್ಲಾ ಪಂಚಾಯತಿ ಟಿಕೆಟ್ ಆಕಾಂಕ್ಷಿ ಮಾರುತಿ ತೋಟಗಂಟಿ ಇದ್ದರು,
ಎಷ್ಟು ದಿನ ಉಳಿಯುತ್ತೆ ಈ ರಾಜಕೀಯ ಸಂಬಂಧ:
ಕಾಂಗ್ರೆಸ್ನ ಕುಟುಂಬ ಅಂತಾನೆ ಕರ್ನಾಟಕದಲ್ಲಿ ಗುರುತಿಸಿಕೊಂಡಿದ್ದ ಎಚ್ ಜಿ ರಾಮುಲು ಮತ್ತು ಅವರ ಮಕ್ಕಳು ಇಕ್ಬಾಲ್ ಅನ್ಸಾರಿಯ ಮತ್ತು ಸಿದ್ದರಾಮಯ್ಯನವರ ನಡೆಗೆ ಬೇಸತ್ತು ಕಾಂಗ್ರೆಸ್ ತೊರೆದಿದ್ದರೂ ಎಚ್ ಜಿ ರಾಮುಲು ಅವರ ಮಗ ಶ್ರೀನಾಥ್ ಅವರು ಕಾಂಗ್ರೆಸ್ ತೊರೆದ ನಂತರ ಜೆಡಿಎಸ್ ಕೈ ಹಿಡಿದಿದ್ದ ಶ್ರೀನಾಥ್ ಅವರು ಇಕ್ಬಾಲ್ ಅನ್ಸಾರಿಯ ಜೊತೆಗೆ ರಾಜಕೀಯ ಜಟಾಪಟಿಯನ್ನೇ ಮಾಡಿಕೊಂಡಿದ್ದರು ಅದು ಯಾವ ರೀತಿ ಜಟಾಪಟಿ ಅಂದರೆ ವೈಯಕ್ತಿಕ ವಿಚಾರಗಳು ಮಾಧ್ಯಮಗಳ ಮುಂದೆ ಬಿತ್ತುವಷ್ಟರ ಮಟ್ಟಿಗೆ ವೈರತ್ವವನ್ನು ಬೆಳೆಸಿಕೊಂಡಿದ್ದರು,
ಇವರು ಯಾವ ಕಾಲದಲ್ಲೂ ಒಂದಾಗುವುದಿಲ್ಲ ಅನ್ನುವ ವಾತಾವರಣವನ್ನ ಸೃಷ್ಟಿ ಮಾಡಿದ್ದರು ಆದರೆ ಇಂದು ಅದು ಬದಲಾಗಿ ಇಕ್ಬಾಲ್ ಅನ್ಸಾರಿ ಮತ್ತು ಶ್ರೀನಾಥ್ ಅವರು ಕೈ ಕೈ ಹಿಡಿಯುವ ಮುಖಾಂತರ ದೋಸ್ತಿ ಆಗಿದ್ದಾರೆ.
ಆದರೆ ಈ ಸ್ನೇಹ ಬಹಳ ದಿನ ಉಳಿಯುವುದಿಲ್ಲ ಅನ್ನುತ್ತಿದ್ದಾರೆ ಕ್ಷೇತ್ರದ ಜನ,
ಇದು ಕೇವಲ ವಿಧಾನಸಭಾ ಬಿ ಫಾರ್ಮ್ ಹಂಚಿಕೆ ವರೆಗೆ ಮಾತ್ರ ಈ ಸ್ನೇಹ ಉಳಿಯುತ್ತೆ ನಂತರ ಕಾಂಗ್ರೆಸ್ ಒಡೆದು ಓಳಾಗುತ್ತದೆ ಮತ್ತೆ ಬಿಜೆಪಿಗೆ ಲಾಭವಾಗುತ್ತದೆ ಅನ್ನುವ ಲೆಕ್ಕಚಾರ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ರೆಬೆಲ್ ಎಂದೇ ಗುರುತಿಸಿಕೊಂಡಿರುವ ಇಕ್ಬಾಲ್ ಅನ್ಸಾರಿ ಅವರು ಸಂಸತ್ ಚುನಾವಣೆಗೆ ಸ್ಪರ್ಧಿಸುತ್ತಾರೆ ಮತ್ತು ಅದು ಒಪ್ಪಂದವಾಗಿದೆ ವಿಧಾನಸಭೆಗೆ ಶ್ರೀನಾಥ್ ಸ್ಪರ್ಧೆ ಮಾಡುತ್ತಾರೆ ಅನ್ನುವ ಗುಮಾನಿ ಎದ್ದಿದೆ,
ಆದರೆ ರಾಜಕೀಯ ಒಳ ಹೊರ ಅರಿವುಗಳನ್ನ ಅರಿತುಕೊಂಡಿರುವ ಇಕ್ಬಾಲ್ ಅನ್ಸಾರಿ ಅವರು ಸಂಸತ್ ಸದಸ್ಯರಾದರೆ ಜನರಿಂದ ದೂರವಾಗಬೇಕಾಗುತ್ತದೆ ಅನ್ನುವುದನ್ನು ಕೂಡ ಅರಿತುಕೊಂಡಿದ್ದಾರೆ, ಯಾವುದೇ ಕಾರಣಕ್ಕೂ ವಿಧಾನಸಭಾ ಚುನಾವಣೆಯಿಂದ ದೂರ ಸರಿಯುವುದಿಲ್ಲ ಇದರಿಂದ ಮತ್ತೆ ಶ್ರೀನಾಥ್ ಮತ್ತು ಇಕ್ಬಾಲ್ ಅನ್ಸಾರಿ ನಡುವೆ ಜಟಾಪಟಿ ಶುರುವಾಗುತ್ತದೆ ಕಾಂಗ್ರೆಸ್ ಒಡೆದು ಬಿಜೆಪಿಗೆ ಲಾಭವಾಗುತ್ತದೆ,
ಎಂದು ಬಿಜೆಪಿ ವಲಯದಲ್ಲಿ ಬಾರಿ ಚರ್ಚೆ ಆಗುತ್ತಿದೆ.
ಎಲ್ಲಾ ಚರ್ಚೆಗಳ ನಡುವೆ ಶ್ರೀನಾಥ್ ಇಕ್ಬಾಲ್ ದೋಸ್ತಿ ಉಳಿಯುತ್ತಾ?
ಮುಂದೆ ವಿಧಾನಸಭಾ ಟಿಕೆಟ್ ವಿಷಯವಾಗಿ ಯಾವ ರೀತಿ ಒಪ್ಪಂದ ಆಗಿದೆ ಅನ್ನುವುದು ಇನ್ನೂ ಸ್ಪಷ್ಟವಾಗಿ ಬಹಿರಂಗವಾಗಿಲ್ಲ ಈ ನಡುವೆ ವಿಧಾನಸಭಾ ಚುನಾವಣೆ ಬಂದಾಗ ಶ್ರೀನಾಥ್ ಮತ್ತು ಇಕ್ಬಾಲ್ ಅನ್ಸಾರಿ ಅವರು ಟಿಕೆಟ್ ಪೈಪೋಟಿಗೆ ನಿಲ್ಲುವುದು ಖಚಿತ ಅನ್ನುವ ಮಾತು ಕೇಳಿ ಬರುತ್ತಿದೆ.
ಇದರ ಬೆನ್ನಲ್ಲೇ ಶ್ರೀನಾಥ್ ಅವರು ಯಾವುದೇ ಕಾರಣಕ್ಕೂ ಟಿಕೆಟ್ ಕೈತಪ್ಪಲು ಬಿಡುವುದಿಲ್ಲ ಕಾಂಗ್ರೆಸ್ ನಿಂದ ಗಂಗಾವತಿ ವಿಧಾನಸಭೆಗೆ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ,
ಇತ್ತ ಇಕ್ಬಾಲ್ ಅನ್ಸಾರಿ ಅವರು ಕೂಡ ತಮ್ಮ ಆಪ್ತರಿಗೆ ಮುಂದಿನ ವಿಧಾನಸಭೆಯ ಕಾಂಗ್ರೆಸ್ ಟಿಕೆಟ್ ನಮಗೆ ಸಿಗುವುದು ಮತ್ತು ಗಂಗಾವತಿ ಮುಂದಿನ ಶಾಸಕ ನಾನೇ ಎಂದು ಹೇಳಿಕೊಂಡಿದ್ದಾರೆ.
ಇಬ್ಬರು ಬಿ ಫಾರ್ಮ್ ಗೊಂದಲದ ನಡುವೆ ದೋಸ್ತಿ ಮತ್ತೆ ಬಿದ್ದು ಹೋಗುತ್ತದೆ ಕಾಂಗ್ರೆಸ್ ಹಿಂಭಾಗವಾಗುತ್ತದೆ ಅನ್ನುವ ಮಾತು ಗಂಗಾವತಿ ವಿಧಾನಸಭಾದಲ್ಲಿ ಕೇಳಿ ಬರುತ್ತಿದೆ.
ಈ ಎಲ್ಲದರ ಲಾಭವನ್ನು ಬಿಜೆಪಿ ಪಡೆದುಕೊಳ್ಳುತ್ತಾ ಕಾಂಗ್ರೆಸ್ನ ಮುಂದಿನ ಸ್ಥಿತಿ ಹೇಗೆ ಅನ್ನುವುದನ್ನು ಕಾದು ನೋಡಬೇಕಾಗಿದೆ