ಕೊಪ್ಪಳ :
ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮ ಪಂಚಾಯತಿ ಪಿಡಿಓ ಅಧಿಕಾರಿ ಹನಮಂತಪ್ಪ ನಾಯಕ್ ವಿರುದ್ದ್ ಪಂಚಾಯಿತಿ ಅಧ್ಯಕ್ಷ ಸದಸ್ಯರು ಸೇರಿದಂತೆ ಸಾರ್ವಜನಿಕರು ಪುಲ್ ಗರಮ್ ಆಗಿದ್ದಾರೆ ಪಿ.ಡಿ.ಓ ಅಧಿಕಾರಿ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲಾ , ಅಲ್ಲದೆ ಕರ್ತವ್ಯಲೋಪವೆಸಗುತ್ತಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಮತ್ತು ಪಂಚಾಯಿತಿ ಸಭೆಯಲ್ಲಿ ಸದಸ್ಯರೊಂದಿಗೆ ಬರಿ ಜಗಳ ಮಾಡುತ್ತಿದ್ದು ಸರಕಾರದ ಮಾಹಿತಿಗಳನ್ನ ಸರಿಯಾಗಿ ಬಿಚ್ಚಿಡದೆ ಉದ್ಯೋಗ ಖಾತ್ರಿ ಯೋಜನೆ ಹಾಗೂ ವಸತಿ ಯೋಜನೆ ಇನ್ನಿತರ ಕಾಮಗಾರಿಗಳ ಬಿಲ್ ಪಾವತಿ ಮಾಡುವಲ್ಲಿ ತಾರತಮ್ಯ ಮಾಡುತ್ತಿದ್ದು ಮಾಮೂಲು ಕೊಟ್ಟರಷ್ಟೆ ಸಹಿಮಾಡುವುದಾಗಿ ಹೇಳಿದ್ದಾರೆ..

ಮತ್ತು ಒಂದು ಮನೆಗೆ ನಾಲ್ಕು ಸಾವಿರ ಹಣ ಕೊಟ್ಟರಸ್ಟೆ ಸಹಿಮಾಡುತ್ತಾರೆ. ಪಿಡಿಓ ಅಧಿಕಾರಿ ನಡತೆಗೆ ಚಳ್ಳಾರಿ ಗ್ರಾಮದ ನಿವಾಸಿಯೊಬ್ಬರು ಲಂಚದ ಕಿರಿಕುಳಕ್ಕೆ ಮನನೊಂದು ಪಂಚಾಯಿತಿಯಲ್ಲಿ ವಿಷ ಸೇವಿಸಿ ಆತ್ಮಹತ್ಯಗು ಮುಂದಾಗಿದ್ದ ಘಟನೆ ನಡೆದಿದೆ.
ಅಲ್ಲಿಂದ ಪರಾರಿಯಾದ ಪಿಡಿಓ ಕರ್ತವ್ಯಕ್ಕೆ ಹಾಜರಾಗಿಲ್ಲ ಈ ಕುರಿತು ತಾಲೂಕ ಪಂಚಾಯಿತಿ ಅಧಿಕಾರಿ ವೆಂಕಟಪ್ಪ ಅವರಿಗೂ ತಲೆ ನೋವಾಗಿದೆ ಪಂಚಾಯತಿ ಸದಸ್ಯರು ಮತ್ತು ಸ್ಥಳಿಯರು ಸೇರಿ ಮನವಿ ಮಾಡಿದ್ದಾರೆ ತಕ್ಷಣ ಹನಮಂತಪ್ಪ ನಾಯಕ್ ವರ್ಗಾವಣೆಯಾಗಬೇಕು ಇಲ್ಲವಾದಲ್ಲೆ ಪಂಚಾಯಿತಿಯಲ್ಲಿ ಆಗುವ ಅನಾಹುತಗಳಿಗೆ ಇಲಾಖೆ ಹೋಣೆಗಾರಿಕೆ ವಹಿಸುತ್ತದೆ ಎಂದು ಪಂಚಾಯತಿ ಅದ್ಯಕ್ಷೆ ಹನಮವ್ವ ಅವರ ಪತಿ ಹನುಮಪ್ಪ ಪೂಜಾರ ಹಾಗೂ ಸದಸ್ಯ ಆದಯ್ಯ ವಂಕಲಕುಂಟಿ ತಾಲೂಕ ಪಂಚಾಯತಿ ಅಧಿಕಾರಿಗೆ ಮನವಿ ಮಾಡಿದ್ದಾರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ತಾಲೂಕ ಪಂಚಾಯತಿ ಇಓ ಅಧಿಕಾರಿ ವೆಂಕಟಪ್ಪ ಅವರು ಎರಡು ದಿನಗಳ ಕಾಲವಕಾಶ ಕೊಡಿ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳೊದಾಗಿ ಭರವಸೆ ನೀಡಿದ್ದಾರೆ